ಮೈಸೂರಿನ ಶ್ರೀನಾಥ್ ಕೂಲ್ & ಕಾಮ್ ವ್ಯಕ್ತಿತ್ವ, ಆ ಕೋಪ ಬಂದಿದ್ದೆ ಗ್ರೇಟ್
ಟೀಮ್ ಇಂಡಿಯಾ ಬಿಟ್ಟು ಇಂಗ್ಲೆಂಡ್ ಕೌಂಟಿ ಆಡೋಕೆ ಹೋದ್ರು ಶ್ರೀನಾಥ್
ಇಂಗ್ಲೆಂಡ್ ಟೂರ್ ವೇಳೆ ರೆಸ್ಟ್ ನೀಡಿದ್ದಕ್ಕೆ ಕೋಪಗೊಂಡಿದ್ದ ಮಾಜಿ ಕ್ರಿಕೆಟರ್
ನಮ್ಮ ಹೆಮ್ಮೆಯ ಕನ್ನಡಿಗ, ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ ಕೂಲ್ & ಕಾಮ್ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ವ್ಯಕ್ತಿ. ಕಾಂಟ್ರವರ್ಸಿಗಳಿಂದ ಶ್ರೀನಾಥ್ ಸದಾ ದೂರ. ಇಂಥಾ ಶ್ರೀನಾಥ್ಗೆ ಒಂದು ಬಾರಿ ಸಿಕ್ಕಾಪಟ್ಟೆ ಕೋಪಗೊಂಡಿದ್ರಂತೆ. ಕಾಲ್ ಮಾಡಿ ಕ್ಯಾಪ್ಟನ್ ಗಂಗೂಲಿ, ಟೀಮ್ಗೆ ವಾಪಸ್ಸು ಬನ್ನಿ ಅಂದಿದ್ದಕ್ಕೆ ನೋ.. ಅಂದಿದ್ರಂತೆ. ಇವತ್ತಿನ ಸಖತ್ ಸ್ಟೋರಿಯಲ್ಲಿ ಏನಿದು ಕಥೆ.. ಬನ್ನಿ ನೋಡೋಣ.
ಮೈಸೂರಿನ ಜಾವಗಲ್ ಶ್ರೀನಾಥ್ ಟೀಮ್ ಇಂಡಿಯಾದ ಅದೆಷ್ಟೋ ಪಂದ್ಯಗಳ ಗೆಲುವಿನ ರೂವಾರಿ. 67 ಟೆಸ್ಟ್ 229 ಏಕದಿನ ಪಂದ್ಯಗಳಲ್ಲಿ ಭಾರತವನ್ನ ಪ್ರತಿನಿಧಿಸಿರುವ ಶ್ರೀನಾಥ್, 551 ವಿಕೆಟ್ ಬೇಟೆಯಾಡಿದ್ದಾರೆ. 12 ವರ್ಷಗಳ ಕರಿಯರ್ನಲ್ಲಿ ಶ್ರೀನಾಥ್ ತಾಳ್ಮೆ ಕಳೆದುಕೊಂಡ ಉದಾಹರಣೆ ತುಂಬಾ ಕಡಿಮೆ. ಆದ್ರೆ, ಒಂದು ಬಾರಿ ಅಸಮಾಧಾನಗೊಂಡಿದ್ದ ಶ್ರೀನಾಥ್, ಟೀಮ್ ಇಂಡಿಯಾವನ್ನೇ ಬಿಟ್ಟು ಇಂಗ್ಲೆಂಡ್ ಕೌಂಟಿ ಆಡೋಕೆ ತೆರಳಿದ್ರಂತೆ.
2002ರ ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ವೇಳೆ ಶ್ರೀನಾಥ್ರನ್ನ ತಂಡದಿಂದ ಕೈ ಬಿಡಲಾಗಿತ್ತು. ನಿಮಗೆ ವಿಶ್ರಾಂತಿ ನೀಡಿದ್ದೇವೆ ಎಂದು ಸೆಲೆಕ್ಟರ್ಸ್ ಹೇಳಿದ್ರಂತೆ. ವಿಶ್ರಾಂತಿಯ ಅಗತ್ಯವೇ ಇಲ್ಲದಾಗ ಒತ್ತಾಯ ಪೂರ್ವಕವಾಗಿ ರೆಸ್ಟ್ ನೀಡಿದ್ದಕ್ಕೆ ಶ್ರೀನಾಥ್ ಕೋಪಗೊಂಡಿದ್ರು. ಹೀಗಾಗಿ ಕೌಂಟಿ ಕ್ರಿಕೆಟ್ ಆಡಲು ಶ್ರೀನಾಥ್ ತೆರಳಿದ್ರು. ಈ ವೇಳೆ ನಾಯಕ ಗಂಗೂಲಿ ಕರೆ ಮಾಡಿ ಇಂಗ್ಲೆಂಡ್ ಸರಣಿಯಲ್ಲಿ ಆಡುವಂತೆ ಕೋರಿದಾಗ ನೋ ಅಂದಿದ್ರಂತೆ. ಶ್ರೀನಾಥ್ರನ್ನ ಸಿಕ್ಕಾಪಟ್ಟೆ ನಂಬುತ್ತಿದ್ದ ಗಂಗೂಲಿಗೆ ಈ ವೇಗಿ ವಿಶ್ವಕಪ್ ಆಡಬೇಕು ಅನ್ನೋ ಆಸೆ ಇತ್ತು. ಹೀಗಾಗಿ ಮನವೊಲಿಕೆಗೆ ದಾದಾ ಮುಂದಾಗಿದ್ರು. ಅಂತಿಮವಾಗಿ ಪರಿಸ್ಥಿತಿ ತಿಳಿಯಾದ ಮೇಲೆ ತಂಡಕ್ಕೆ ವಾಪಸ್ಸು ಆದ ಶ್ರೀನಾಥ್, ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ರು. 2003ರ ವಿಶ್ವಕಪ್ನಲ್ಲೂ ಆಡಿದ್ರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ