newsfirstkannada.com

×

Jawan: ಕಿಂಗ್​ ಖಾನ್​ ಶಾರುಖ್ ಖಾನ್​​ಗೆ ಭರ್ಜರಿ ಜಯ! ಜವಾನ್​​ ಫಸ್ಟ್​ ಡೇ ಕಲೆಕ್ಷನ್​ ಇಷ್ಟೊಂದಾ?

Share :

Published September 8, 2023 at 6:53am

    ಕಿಂಗ್​​ಖಾನ್​​​ ಶಾರುಖ್​​ ಖಾನ್​​ ನಟನೆಯ ಜವಾನ್​ ವಿಶ್ವದಾದ್ಯಂತ ರಿಲೀಸ್​

    ನೆಚ್ಚಿನ ನಟನನ್ನು ಬಿಗ್​ ಸ್ಕ್ರೀನ್​ನಲ್ಲಿ ನೋಡಿ ಕಣ್ತುಂಬಿಕೊಂಡ ಫ್ಯಾನ್ಸ್

    ಸಿನಿಮಾ ರಿಲೀಸ್​ಗೂ ಮುಂಚೆನೇ ಕೋಟಿ ಕೋಟಿ ಬಾಚಿದ ಜವಾನ್​​​!

ಬಾಲಿವುಡ್​ ಕಿಂಗ್​​ಖಾನ್​​​ ಶಾರುಖ್​​ ಖಾನ್​​ ನಟನೆಯ ಜವಾನ್​ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಿದೆ. ಪಠಾಣ್ ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದ ಬಾಲಿವುಡ್​​ ಸ್ಟಾರ್​​ ನಟನಿಗೆ ಈಗ ಮತ್ತೊಂದು ಭರ್ಜರಿ ಯಶಸ್ಸು ದೊರೆತಿದೆ. ಇನ್ನೂ ಸಿನಿಮಾ ರಿಲೀಸ್​ಗೂ ಮುನ್ನ ಜವಾನ್​​​ ಒಳ್ಳೆಯ ಕಲೆಕ್ಷನ್​​ ಮಾಡಿತ್ತು. ಶಾರುಖ್​ನನ್ನು ನೋಡಲು ಫ್ಯಾನ್ಸ್​ ಅಡ್ವಾನ್ಸ್​ ಟಿಕೆಟ್​ ಬುಕ್ಕಿಂಗ್​ ಮಾಡಿ ದಾಖಲೆಯನ್ನು ಸಹ ನಿರ್ಮಿಸಿದ್ದರು. ಇದೀಗ ಶಾರುಖ್​ ಅಭಿಮಾನಿಗಳು ನೆಚ್ಚಿನ ನಟನನ್ನು ಬಿಗ್​​​ ಸ್ಕ್ರೀನ್ ಮೇಲೆ ನೋಡಿ ಫುಲ್​​​ ಖುಷ್​ ಆಗಿದ್ದಾರೆ. ​

ಜವಾನ್​​ ಮೊದಲ ದಿನದ ಕಲೆಕ್ಷನ್​ ಎಷ್ಟು..?

ಸೆಪ್ಟೆಂಬರ್ 7 ಥಿಯೇಟರ್‌ಗೆ ಎಂಟ್ರಿ ಕೊಟ್ಟ ಜವಾನ್ ಚಿತ್ರವು ಮೊದಲ ದಿನವೇ ಭರ್ಜರಿ ಕಲೆಕ್ಷನ್​ ಮಾಡಿದೆ. ಈ ಚಿತ್ರ ಬಿಡುಗಡೆಗೆ ಮುನ್ನವೇ ಚಿತ್ರಮಂದಿರಗಳು ಹೌಸ್‌ಫುಲ್ ಆಗಿದ್ದವು. ಅಟ್ಲೀ ನಿರ್ದೇಶನದ ಈ ಚಿತ್ರವು ಮೊದಲ ದಿನವೇ ₹104 ಕೋಟಿ ಕಲೆಕ್ಷನ್​​ ಮಾಡಿದೆ ಎಂದು ಅಂದಾಜಿಸಲಾಗಿದೆ. ಹಿಂದಿಯಲ್ಲಿ ಸುಮಾರು ₹70 ಕೋಟಿ, ತಮಿಳು ₹20 ಕೋಟಿ, ಮತ್ತು ತೆಲುಗು ₹14 ಕೋಟಿ. ಒಟ್ಟಾರೆಯಾಗಿ ಮೊದಲ ದಿನವೇ ₹104 ಕೋಟಿ ರೂಪಾಗಳನ್ನು ಗಳಿಸಿದೆ.

ಇದನ್ನು ಓದಿ: ವಿಶ್ವದಾದ್ಯಂತ ಜವಾನ್ ಜಾತ್ರೆ ಶುರು.. ಅತಿಥಿ ಪಾತ್ರದಲ್ಲಿ ನಟಿಸೋ ನಟಿ ಇವರೇನಾ?

ಈ ಚಿತ್ರದಲ್ಲಿ ನಟ ಕಿಂಗ್​​ಖಾನ್​​​ ಶಾರುಖ್​​ ಖಾನ್​​ ಮೂರ್ನಾಲ್ಕು ಡಿಫ್ರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಆಫೀಸರ್, ಆರ್ಮಿ ಹಾಗೂ ನೆಗೆಟಿವ್​ ಶೇಡ್​ನಲ್ಲೂ ಶಾರುಖ್ ಮಿಂಚಿದ್ದಾರೆ ಎಂಬ ಸುಳಿವು ಟ್ರೇಲರ್ ಕೊಟ್ಟಿತ್ತು. ಹಾಗಾಗಿ ಕಿಂಗ್ ಖಾನ್​ನ ಜವಾನ್ ಚಿತ್ರವನ್ನು ನೋಡಲು ಫ್ಯಾನ್ಸ್​​ ಬಹಳ ಉತ್ಸುಕರಾಗಿದ್ದರು. ಕೊನೆಗೂ ನೆಚ್ಚಿನ ನಟನ ಚಿತ್ರವನ್ನು ನೋಡಿದ ಫುಲ್​ ಖುಷ್​ ಆಗಿದ್ದಾರೆ.

ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲಿ ಭಾಷೆಗಳಲ್ಲಿ ರಿಲೀಸ್​​ ಆದ ಈ ಚಿತ್ರದಲ್ಲಿ ಬಾಲಿವುಡ್​​ ಖ್ಯಾತ ನಟ ಶಾರುಖ್​ ಖಾನ್​​​, ದಕ್ಷಿಣದ ಜನಪ್ರಿಯ ನಟಿ ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ದೀಪಿಕಾ ಪಡುಕೋಣೆ, ಯೋಗಿ ಬಾಬು, ಸುನಿಲ್ ಗ್ರೋವರ್, ಸಿಮರ್‌ಜೀತ್ ಸಿಂಗ್ ನಾಗ್ರಾ, ಅಜ್ಜಿ ಬಾಗ್ರಿಯಾ ಮತ್ತು ಮನೋಹರ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಸದ್ಯ ಸಿನಿಮಾ ರಿಲೀಸ್​ ಆಗಿ ಮೊದಲ ದಿನವೇ ಭರ್ಜರಿ ಕಲೆಕ್ಷನ್​​​ ಮಾಡಿದ ಜವಾನ್​ ಮುಂದಿನ ದಿನಗಳಲ್ಲಿ ದಾಖಲೆ ನಿರ್ಮಿಸುತ್ತಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jawan: ಕಿಂಗ್​ ಖಾನ್​ ಶಾರುಖ್ ಖಾನ್​​ಗೆ ಭರ್ಜರಿ ಜಯ! ಜವಾನ್​​ ಫಸ್ಟ್​ ಡೇ ಕಲೆಕ್ಷನ್​ ಇಷ್ಟೊಂದಾ?

https://newsfirstlive.com/wp-content/uploads/2023/09/jawan-12.jpg

Load More