newsfirstkannada.com

ಜಸ್ಟ್ 35 ವರ್ಷಕ್ಕೆ ICC ಬಾಸ್.. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಆಯ್ಕೆಯಾದ ಜಯ್ ಶಾ ದಾಖಲೆಗಳೇನು?

Share :

Published August 27, 2024 at 9:30pm

    ICC ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಜಯ್ ಶಾ

    ಜಯ್ ಎದುರು ಯಾರೂ ಸ್ಪರ್ಧೆ ಮಾಡದ ಕಾರಣ ಅವಿರೋಧ ಆಯ್ಕೆ

    ಐಸಿಸಿ ಅಧ್ಯಕ್ಷ ಪಟ್ಟ ಏರುತ್ತಿರುವ 3ನೇ ಭಾರತೀಯ ಅಮಿತ್ ಶಾ ಪುತ್ರ!

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಪುತ್ರ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2019ರಿಂದ ಬಿಸಿಸಿಐನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಯ್ ಶಾ ಈಗ ಐಸಿಸಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ‘ಪ್ರೀತಿ ಎಂದಿಗೂ ವಿಫಲವಾಗಲ್ಲ’.. ಹಾರ್ದಿಕ್​ ಪಾಂಡ್ಯ, ನತಾಶಾ ಸ್ಟಾಂಕೋವಿಕ್ ಬ್ರೇಕ್‌ ಅಪ್‌ಗೆ ಹೊಸ ಟ್ವಿಸ್ಟ್‌!

ಐಸಿಸಿಯ ಮಾಜಿ ಅಧ್ಯಕ್ಷ ಗ್ರೇಕ್ ಬಾರ್ಕಲೀ ಮೂರನೇ ಅವಧಿಗೆ ಅಧ್ಯಕ್ಷ ಸ್ಥಾನ ಬೇಡ ಎಂದು ನಿರ್ಧಾರವಾದ ಬಳಿಕ, ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮಾಡಲು ನಿರ್ಧಾರ ಮಾಡಲಾಯಿತು. ಚುನಾವಣೆ ನಿಗದಿಯಾದ ದಿನವೇ ಜಯ್​ ಶಾ ಸ್ಪರ್ಧೆಯ ಕಣಕ್ಕೆ ಇಳಿದಿದ್ದರು. ಈ ವೇಳೆ ಅವರು ಕ್ರಿಕೆಟ್​ನನ್ನು ಜಾಗತಿಕವಾಗಿ ಜನಪ್ರಿಯತೆಗೊಳಿಸುವ ಮುಂಬರುವ 2028ರ ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ಕ್ರಿಕೆಟ್​ನ್ನು ಸೇರಿಸುವ ಬಗ್ಗೆ ಮಾತನಾಡಿದ್ದರು. ಸದ್ಯ ಜಯ್ ಶಾ ಯಾವ ಪ್ರತಿಸ್ಪರ್ಧಿಯೂ ಇಲ್ಲದೇ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಕನ್ನಡಿಗ KL ರಾಹುಲ್​ಗೆ ಬಿಗ್ ಶಾಕ್​.. ಲಕ್ನೋ ಟೀಮ್ ಕ್ಯಾಪ್ಟನ್ಸಿ ಕಿತ್ತುಕೊಂಡ ಸಂಜೀವ್ ಗೋಯೆಂಕಾ; ಹೇಳಿದ್ದೇನು?

ಕೇವಲ 35ನೇ ವಯಸ್ಸಿಗೆ ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾಗಿ ಮುಂದಿನ ಡಿಸೆಂಬರ್ 1ಕ್ಕೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಸದ್ಯ ಇದು ಭಾರತಕ್ಕೆ ದಕ್ಕಿದ ಮತ್ತೊಂದು ಅದ್ಭುತ ಅವಕಾಶ . ಜಯ್ ಶಾ ಐಸಿಸಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೂರನೇ ಭಾರತೀಯ.  ಈ ಹಿಂದೆ ಜಗಮೋಹನ್ ದಾಲ್ಮಿಯಾ ಹಾಗೂ ಶರದ್ ಪವಾರ್ ಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಈಗ ಮತ್ತೊಮ್ಮೆ ಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಭಾರತೀಯ ಪಟ್ಟ ಅಲಂಕರಿಸಿದ್ದು ಭಾರತದ ಹೆಮ್ಮೆಗೆ ಮತ್ತೊಂದು ಗರಿ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್ 35 ವರ್ಷಕ್ಕೆ ICC ಬಾಸ್.. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಆಯ್ಕೆಯಾದ ಜಯ್ ಶಾ ದಾಖಲೆಗಳೇನು?

https://newsfirstlive.com/wp-content/uploads/2024/08/JAY-SHAH-ICC-PRESIDENT.jpg

Load More