newsfirstkannada.com

ರೋಹಿತ್​ ಬಳಿಕ ಮುಂದಿನ ಕ್ಯಾಪ್ಟನ್​ ಯಾರು? ಹಾರ್ದಿಕ್​ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಜಯ್​ ಶಾ!

Share :

Published July 1, 2024 at 5:46pm

    ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ!

    ರೋಹಿತ್​ ಶರ್ಮಾ ನಂತರ ಭಾರತ ಟಿ20 ಕ್ರಿಕೆಟ್​​ ತಂಡದ ಮುಂದಿನ ಕ್ಯಾಪ್ಟನ್​ ಯಾರು..?

    ಮುಂದಿನ ಕ್ಯಾಪ್ಟನ್​​ ಯಾರು ಅನ್ನೋ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಏನಂದ್ರು?

2024ರ ಟಿ20 ವಿಶ್ವಕಪ್​ ಗೆದ್ದ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಭಾರತ ಟಿ20 ತಂಡದ ಮುಂದಿನ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಆಗೋ ಸಾಧ್ಯತೆಗಳಿವೆ ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತಾಡಿದ್ದಾರೆ.

ಭಾರತ ಟಿ20 ಕ್ರಿಕೆಟ್​ ತಂಡದ ಮುಂದಿನ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಅಲ್ಲವೇ ಎಂದು ನೀವು ಕೇಳುತ್ತಿದ್ದೀರಿ. ಹಾರ್ದಿಕ್​ ಪಾಂಡ್ಯ ಫಾರ್ಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಇಷ್ಟಾದ್ರೂ ನಾವು ಮತ್ತು ಸೆಲೆಕ್ಷನ್​ ಕಮಿಟಿ ಹಾರ್ದಿಕ್​ ಪಾಂಡ್ಯ ಮೇಲೆ ನಂಬಿಕೆ ಇಟ್ಟಿದ್ದೆವು. ಈಗ ಆ ನಂಬಿಕೆಯನ್ನು ಹಾರ್ದಿಕ್​ ಉಳಿಸಿಕೊಂಡಿದ್ದಾರೆ. ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ ಜಯ್​ ಶಾ.

ಹಾರ್ದಿಕ್ ರೋಹಿತ್ ಶರ್ಮಾ ಬಳಿಕ ಭಾರತ ಟಿ20 ನಾಯಕತ್ವ ವಹಿಸಿಕೊಳ್ಳುವ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಮುಂದಿನ ಭಾರತ ಟಿ20 ಕ್ರಿಕೆಟ್​ ತಂಡದ ನಾಯಕ ಯಾರು ಎಂದು ಆಯ್ಕೆಗಾರರೊಂದಿಗೆ ಚರ್ಚಿಸಿ ಪ್ರಕಟಿಸಲಾಗುವುದು ಎಂದರು.

ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಗೆದ್ದ ನಂತರ ರೋಹಿತ್ ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಲು ನಿರ್ಧರಿಸಿದರು. ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಹಲವು ಬಾರಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ.

ಇದನ್ನೂ ಓದಿ: ಆರ್​​ಸಿಬಿಗೆ ಬಂತು ಆನೆಬಲ.. ಕೊಹ್ಲಿ ಆಪ್ತ ಈಗ ಬೆಂಗಳೂರು ತಂಡದ ಬ್ಯಾಟಿಂಗ್​ ಕೋಚ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​ ಬಳಿಕ ಮುಂದಿನ ಕ್ಯಾಪ್ಟನ್​ ಯಾರು? ಹಾರ್ದಿಕ್​ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಜಯ್​ ಶಾ!

https://newsfirstlive.com/wp-content/uploads/2024/06/Hardik_Rohit1.jpg

Load More