ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ
ಬರುವ ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವಧಿ ಅಂತ್ಯ
16 ರಾಷ್ಟ್ರಗಳಲ್ಲಿ ಬಹುತೇಕ ರಾಷ್ಟ್ರಗಳಿಂದ ಜಯ ಶಾಗೆ ಬೆಂಬಲ ಸಾಧ್ಯತೆ
ನವದೆಹಲಿ: ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ ಶಾ, ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಬರುವ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವರ ಅವಧಿ ಅಂತ್ಯವಾಗಲಿದೆ. ಅವರ ಜಾಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಬಂದು ಕೂರಲಿದ್ದಾರೆ ಅನ್ನೋದು ಬಹುತೇಕ ಖಾತ್ರಿಯಾಗಿದೆ.
ಇದನ್ನೂ ಓದಿ: TVಯಲ್ಲಿ ಜನ ಮಾತಾಡುವಂತೆ ವಿರಾಟ್ ಕೊಹ್ಲಿ ಇಲ್ಲ’.. RCB ಬೌಲರ್ ಶಾಕಿಂಗ್ ಹೇಳಿಕೆ!
ಐಸಿಸಿ ಯಲ್ಲಿ ಅಧ್ಯಕ್ಷ ಸ್ಥಾನವನ್ನು ಪಡೆಯಲು ಚುನಾವಣೆ ಎದುರಿಸಬೇಕು. ಐಸಿಸಿಯಲ್ಲಿ ಒಟ್ಟು 16 ರಾಷ್ಟ್ರಗಳು ಮತದಾನದ ಅಧಿಕಾರ ಹೊಂದಿವೆ. ಈ 16 ರಾಷ್ಟ್ರಗಳಲ್ಲಿ ಬಹುತೇಕ ರಾಷ್ಟ್ರಗಳಿಂದ ಜಯ್ ಶಾಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಅಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡಿಸ್, ಜಿಂಬಾಂಬ್ವೆ ಬೆಂಬಲ ನೀಡುವ ಅಗತ್ಯವಿದೆ.
ಇದನ್ನೂ ಓದಿ: ಕುಸ್ತಿ ಅಖಾಡದಿಂದ ರಾಜಕೀಯಕ್ಕೆ ವಿನೇಶ್ ಫೋಗಟ್.. ಎಲೆಕ್ಷನ್ನಲ್ಲಿ ಬಬಿತಾ ಫೋಗಟ್ ವಿರುದ್ಧ ಸೈ ಅಂತಾರಾ?
ಆಸ್ಟ್ರೇಲಿಯಾ ಇಂಗ್ಲೆಂಡ್ ದೇಶಗಳು ಈಗಾಗಲೇ ಜಯ್ ಶಾಗೆ ಬೆಂಬಲ ಘೋಷಿಸಿವೆ. ಇನ್ನುಳಿದ ರಾಷ್ಟ್ರಗಳು ಕೂಡ ಜಯ್ ಶಾ ಪರವಾಗಿ ವೋಟ್ ಹಾಕು ಸಾಧ್ಯತೆ ಇದ್ದು, 35ನೇ ವಯಸ್ಸಿಗೆ ಜಯ್ ಶಾಗೆ ಐಸಿಸಿ ಅಧ್ಯಕ್ಷ ಸ್ಥಾನ ಸಿಗುವ ಅದೃಷ್ಟ ಒಲಿಯುವುದು ಬಹುತೇಕ ಖಚಿತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ