newsfirstkannada.com

ಜಯ್ ಶಾಗೆ ಕ್ರಿಕೆಟ್ ‘ಏನು ಗೊತ್ತು’ ಅಂತಾ ಹಂಗಿಸೋರು ಓದಲೇಬೇಕಾದ ಸ್ಟೋರಿ ಇದು..!

Share :

Published August 30, 2024 at 8:49am

Update August 30, 2024 at 1:32pm

    21ರ ವಯಸ್ಸಿಗೆ GCA ಮೆಂಬರ್.. 35ಕ್ಕೆ ಐಸಿಸಿ ಚೇರ್ಮನ್​

    ಆಟಗಾರನಲ್ಲ.. ಆಡಳಿತಾತ್ಮಕ ಚತುರ ಈ ಜಯ ಶಾ

    ಪಾಕ್​​​ಗೆ ಟೆನ್ಶನ್.. ICC ಚಾಂಪಿಯನ್ಸ್ ಟ್ರೋಫಿ ಕಥೆ ಏನು..?

ಭಾರತದ ಜಯ ಶಾ ಈಗ ವಿಶ್ವ ಕ್ರಿಕೆಟ್ ಲೋಕದ ಪವರ್ ಫುಲ್ ಮ್ಯಾನ್. ಗುಜರಾತ್​​ ಕ್ರಿಕೆಟ್​ ಅಸೋಸಿಯೇಶನ್​ನಿಂದ ಬಿಸಿಸಿಐ ಸೆಕ್ರೆಟರಿ ಆಗಿದ್ದು ಒಂದು ಕಥೆಯಾದ್ರೆ, ಬಿಸಿಸಿಐ ಸೆಕ್ರೆಟರಿ TO ಐಸಿಸಿ ಚೇರಮನ್​ ಪಟ್ಟಕ್ಕೇರಿರೋದು ಮತ್ತೊಂದು ಕಥೆ. ಜಸ್ಟ್​ 35 ವರ್ಷ ವಯಸ್ಸಿಗೆ ವಿಶ್ವ ಕ್ರಿಕೆಟ್​ನ ರೂಲರ್ ಪಟ್ಟಕ್ಕೇರಿದ ಜಯ್​ ಶಾ ರೋಚಕ ಜರ್ನಿ ಹೇಗಿತ್ತು ಅನ್ನೋ ವಿವರ ಇಲ್ಲಿದೆ.

ಬಿಸಿಸಿಐನ ಬಾಸ್​ ಜಯ್​​ ಶಾ.. ಈಗ ವಿಶ್ವ ಕ್ರಿಕೆಟ್​ನ ಬಾಸ್​. ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ನ ಅಧ್ಯಕ್ಷರಾಗಿ ಜಯ್​ ಶಾ ಅವಿರೋಧ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಗ್ರೇಗ್ ಬಾರ್ಸ್ಲಿ ಅಧಿಕಾರವಧಿ ನವೆಂಬರ್​ ಅಂತ್ಯಕ್ಕೆ ಮುಗಿಯಲಿದ್ದು, ಬಳಿಕ ಜಯ್​ ಶಾ ಗದ್ದುಗೆ ಏರಲಿದ್ದಾರೆ. ಅತ್ಯಂತ ಕಿರಿಯ ವಯಸ್ಸಿಗೆ ಐಸಿಸಿ ಅಧ್ಯಕ್ಷರಾದ ಹೆಗ್ಗಳಿಕೆಗೆ ಜಯ್​ ಶಾ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಶ್ರೇಯಾಂಕ ಪಾಟೀಲ್​ಗೆ ಸ್ಮೃತಿ ಮಂದಾನ ಹಿಗ್ಗಾಮುಗ್ಗಾ ಕ್ಲಾಸ್; ಆರ್​ಸಿಬಿಯಲ್ಲಿ ಅಂದು ಆಗಿದ್ದೇನು..?

35 ವರ್ಷಕ್ಕೆ ICC ಚೇರ್ಮನ್​..!
ಐಸಿಸಿ ಚೇರ್ಮನ್​ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಜಯ್​ ಶಾ, ಕ್ರಿಕೆಟ್​​ ಆಡಳಿತಕ್ಕೆ ಎಂಟ್ರಿ ಕೊಟ್ಟಿದ್ದು 21ನೇ ವಯಸ್ಸಿನಲ್ಲಿ. ಚಿಕ್ಕ ವಯಸ್ಸಿಗೇ ಕ್ರಿಕೆಟ್ ಆಡಳಿತದ ವಿಚಾರಕ್ಕೆ ಕೈ ಹಾಕಿದ ಜಯ ಶಾ, ಅಂದಿನಿಂದ ಇಂದಿನ ತನಕ ಹಿಂದೆ ನೋಡಿಲ್ಲ. ದಿನ ಕಳೆದಂತೆ ಕ್ರಿಕೆಟ್ ಆಡಳಿತದಲ್ಲಿ ಸ್ಥಾನಮಾನದ ಮಟ್ಟಿಲುಗಳನ್ನೇರುತ್ತಾ ಇದೀಗ ವಿಶ್ವ ಕ್ರಿಕೆಟ್​ನ ರೂಲರ್ ಪಟ್ಟ ಆಲಂಕರಿಸಿದ್ದಾರೆ.

ಜಯ ಶಾ ಜರ್ನಿ.!

2009-2013 : ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ ​​ ಸದಸ್ಯ
2013-2015 : ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ ಜಂಟಿ ಕಾರ್ಯದರ್ಶಿ
2015-2019 : ಬಿಸಿಸಿಐ ಫೈನಾನ್ಸ್ ಆ್ಯಂಡ್ ಮಾರ್ಕೆಟಿಂಗ್ ಕಮಿಟಿ ಮೆಂಬರ್
2019-2024 : ಬಿಸಿಸಿಐ ಕಾರ್ಯದರ್ಶಿಯಾಗಿ ಜಯ ಶಾ ಕಾರ್ಯ
2021 – 2024: ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ನ ಅಧ್ಯಕ್ಷ

ಆಡಳಿತಾತ್ಮಕ ಚತುರ ಈ ಜಯ ಶಾ..!
ಜಯ ಶಾ ಎಷ್ಟು ಕ್ರಿಕೆಟ್ ಮ್ಯಾಚ್ ಆಡಿದ್ದಾರೆ.? ಭಾರತ ಪರ ಎಷ್ಟು ಪಂದ್ಯಗಳನ್ನಾಡಿದ್ದಾರೆ.? ಕ್ರಿಕೆಟ್​ ಬಗ್ಗೆ ಏನ್​ ಗೊತ್ತು.? ಅನ್ನೋ ಪ್ರಶ್ನೆಗಳು ಸದಾ ಕೇಳಿ ಬರ್ತಾನೆ ಇರುತ್ತೆ. ಜಯ್​ ಶಾ ಒಬ್ಬ ಕ್ರಿಕೆಟಿಗನಾಗಿ ಬೆಳೆಯದಿದ್ದರೂ, ಆಡಳಿತಾತ್ಮಕ ವಿಚಾರದಲ್ಲಿ ಸಖತ್​ ಟ್ಯಾಲೆಂಟೆಡ್​. ಇದಕ್ಕೆ ಸಾಕ್ಷಿ ಆತನ ಕಾಲಾವಧಿಯಲ್ಲಿ ತೆಗೆದುಕೊಂಡ ಐತಿಹಾಸಿಕ ನಿಲುವುಗಳು.

ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ಇವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋಟಿ..?

ಜಯ ಶಾ ಐತಿಹಾಸಿಕ ನಿಲುವುಗಳು..!

  • ಅಹ್ಮದಬಾದ್​ನಲ್ಲಿ ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ನಿರ್ಮಾಣ
  • 2020-2021ರಲ್ಲಿ ಕೋವಿಡ್ ನಡುವೆ IPL ಮತ್ತು ದೇಶಿ ಕ್ರಿಕೆಟ್ ಆಯೋಜನೆ
  • 2022-23ರಲ್ಲಿ WPL ಆರಂಭ ಹಾಗೂ ವನಿತೆಯರಿಗೆ ಸಮಾನ ಪಂದ್ಯ ಶುಲ್ಕ
  • ದೇಶಿ ಕ್ರಿಕೆಟಿಗರ ವೇತನ ಹೆಚ್ಚಳದಂತ ಮಹತ್ವದ ನಿರ್ಧಾರ
  • ಎಲ್ಲಾ ಟೂರ್ನಿಗಳಲ್ಲಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ

ಬಿಸಿಸಿಐ ಸೆಕ್ರೆಟರಿಯಾಗಿ ಭಾರತದಲ್ಲಿ ಕ್ರಿಕೆಟ್​ ಬೆಳವಣಿಗೆ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈಗ ಐಸಿಸಿ ಚೇರ್ಮನ್ ಆಗಿ ಹಲವು ನಿರ್ಣಯ ಕೈಗೊಳ್ಳಬೇಕಾದ ಬಿಗ್ ಚಾಲೆಂಜ್ ಜಯ್​ ಶಾ ಮುಂದಿದೆ.

ಪಾಕ್​​ನಲ್ಲಿ ನಡೆಯೋ ICC ಚಾಂಪಿಯನ್ಸ್ ಟ್ರೋಫಿ ಕಥೆ ಏನು?
ಐಸಿಸಿ ಚೇರ್ಮನ್ ಆಗ್ತಿರುವ ಜಯ ಶಾಗೆ ಎದುರಾಗುವ ಮೊದಲ ಪರೀಕ್ಷೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ. 2025ರ ಟೂರ್ನಿಯ ಆಯೋಜನೆಯ ಹಕ್ಕು ಪಾಕಿಸ್ತಾನದ ಬಳಿಯಿದೆ. ಪಾಕ್​ನಲ್ಲಿ ಟೂರ್ನಿ ನಡೆದ್ರೆ, ಟೀಮ್​ ಇಂಡಿಯಾ ಹೋಗಲ್ಲ. ಹೀಗಾಗಿ ಹೈಬ್ರಿಡ್ ಮಾದರಿ ನಡೆಸುವಂತೆ ಈಗಾಗಲೇ ಬಿಸಿಸಿಐ ಕೇಳಿದೆ. ಈ ತಿಕ್ಕಾಟದ ನಡುವೆಯೇ ಐಸಿಸಿ ಚೇರ್ಮನ್​ ಆಗಿ ಜಯ ಶಾ ನೇಮಕವಾಗಿದ್ದಾರೆ. ಬಿಸಿಸಿಐನಿಂದ ಐಸಿಸಿಗೆ ಹೋಗಿರೋ ಜಯ ಶಾ , ಇದೀಗ ಯಾವ ನಿರ್ಧಾರ ತೆಗೆದುಕೊಳ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

2025ರ ಟೆಸ್ಟ್​ ಚಾಂಪಿಯನ್​​​​​​​​​​​​​​​​​​​​​ಶಿಫ್ ಫೈನಲ್ ಸ್ಥಳಾಂತರವಾಗುತ್ತಾ?
ಕಳೆದ 2 ವಿಶ್ವ ಟೆಸ್ಟ್​ ಚಾಂಪಿಯನ್​​​​​​​​​​​​​​​​​​​​​​​ಶಿಪ್ ಫೈನಲ್​ ಪಂದ್ಯಗಳು ಇಂಗ್ಲೆಂಡ್​ ನಲ್ಲೇ ನಡೆದಿವೆ. ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ ಶಾ ಈ ಬಗ್ಗೆ ಚಕಾರ ಎತ್ತಿದ್ರು. ಹೀಗಾಗಿ ಈ ಬಾರಿ ಟೆಸ್ಟ್ ಚಾಂಪಿಯನ್​​ಶಿಫ್​ ಫೈನಲ್ ಪಂದ್ಯ ಬೇರೆಡೆಗೆ ಶಿಫ್ಟ್​ ಆಗುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ ಇದ್ದೇ ಇದೆ.

ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್​​ನಲ್ಲಿ ಮೂವರು..!

ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್.. ಗ್ಲೋಬಲ್ ಟಾರ್ಗೆಟ್​..!
2028ರ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​​​ ಸೇರಿಸಲಾಗಿದೆ. ಈ ಗ್ಲೋಬಲ್ ಈವೆಂಟ್​ನಲ್ಲಿ ಕ್ರಿಕೆಟ್​ನ ಮರು ಎಂಟ್ರಿ ಹೇಗಿರಬೇಕು ಎಂಬ ರೂಪುರೇಷೆ ಸಿದ್ಧಪಡಿಸೋ ಸವಾಲು ಜಯ ಶಾ ಮುಂದಿದೆ. ಎಷ್ಟು ತಂಡಗಳು ಆಡಬೇಕು. ಯಾವ ಫಾರ್ಮೆಟ್​ ಆಡಬೇಕು. ಟೂರ್ನಿ ಹೇಗೆ ಆಯೋಜಿಸಬೇಕೆಂಬ ಕ್ಲಿಯರ್ ಪ್ಲಾನ್ ಐಸಿಸಿ ಚೇರ್ಮನ್​ ಆಗಿ ಜಯ್​ ಶಾ ಮಾಡಬೇಕಿದೆ.

ಗ್ಲೋಬರ್​ ವೈಸ್ ಕ್ರಿಕೆಟ್​ನ ಪ್ರಮೋಟ್ ಮಾಡಲು ಕಳೆದ ಕೆಲ ವರ್ಷಗಳಿಂದ ಐಸಿಸಿ ಪ್ರಯತ್ನಪಡ್ತಿದೆ. ಸಕ್ಸಸ್​ ಸಿಕ್ಕಿಲ್ಲ. ಈ ವರ್ಷ ಟಿ20 ವಿಶ್ವಕಪ್​ನಲ್ಲಿ USAನಲ್ಲಿ ಟೂರ್ನಿ ಆಯೋಜಿಸಿದ ಮಾಡಿದ ಪ್ರಯತ್ನಗಳು ಕೈ ಹಿಡಿಯಲಿಲ್ಲ. ಹೀಗಾಗಿ ಜಾಗತಿಕವಾಗಿ ಕ್ರಿಕೆಟ್​​ ಬೆಳವಣಿಗೆಗೆ ಯಾವ ನಿರ್ಧಾರ ತೆಗೆದುಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಜಯ್ ಶಾಗೆ ಕ್ರಿಕೆಟ್ ‘ಏನು ಗೊತ್ತು’ ಅಂತಾ ಹಂಗಿಸೋರು ಓದಲೇಬೇಕಾದ ಸ್ಟೋರಿ ಇದು..!

https://newsfirstlive.com/wp-content/uploads/2024/03/JAYA_SHAH.jpg

Load More