/newsfirstlive-kannada/media/post_attachments/wp-content/uploads/2024/08/abhishek-aishwary-divorce.jpg)
ಮುಂಬೈ: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ, ಇದು ಬಾಲಿವುಡ್​​ನ ಅತಿ ಸುಂದರ ಜೋಡಿಗಳಲ್ಲಿ ಒಂದು ಕಳೆದ ಕೆಲವು ದಿನಗಳಿಂದ ಈ ಜೋಡಿಯ ಬಗ್ಗೆ ನೂರಾರು ಊಹಾಪೂಹಗಳು ಹರಿದಾಡುತ್ತಿದ್ದವು. ಸದ್ಯದಲ್ಲಿಯೇ ಬಾಲಿವುಡ್​ನ ಬ್ಯೂಟಿಫುಲ್ ಜೋಡಿ ನಂಟು ಡಿವೋರ್ಸ್​ ಎಂಬ ಪದದಿಂದ ಮುರಿದು ಬೀಳಲಿದೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಈಗ ಅದೇ ವಿಚಾರವಾಗಿ ಜಯಾ ಬಚ್ಚನ್ ಅವರ ಹಳೆಯ ಸಂದರ್ಶನಗಳು ಮುನ್ನೆಲೆಗೆ ಬರ್ತಿವೆ. ಈ ಹಿಂದೆ ಕಾಫಿ ವಿತ್ ಕರಣ್​ ಶೋಗೆ ಆಗಮಿಸಿದ್ದ ಜಯಾ ಬಚ್ಚನ್, ಅಮಿತಾ ಬಚ್ಚನ್ ಹಾಗೂ ಐಶ್ವರ್ಯ ನಡುವಿನ ಬಾಂಧವ್ಯವನ್ನು ತೆರೆದಿಟ್ಟಿದ್ದರು.
ಅಮಿತಾಬ್​ ಬಚ್ಚನ್, ಐಶ್​ಳನ್ನು ಎಂದಿಗೂ ಸೊಸೆಯಂತೆ ನೋಡಿಯೇ ಇಲ್ಲ. ಅವಳನ್ನು ನೋಡಿದಾಗಲೆಲ್ಲಾ ಅವರಿಗೆ ಏನೋ ಒಂದು ರೀತಿಯ ಸಂತೋಷ, ನಮ್ಮ ಮನೆಗೆ ಶ್ವೇತಾ (ಬಚ್ಚನ್ ಮಗಳು) ಬಂದಾಗ ಯಾವ ರೀತಿಯ ಒಂದು ಕಣ್ಣಲ್ಲಿ ಹೊಳಪು ಕಾಣುತ್ತಿತ್ತೊ ಅದೇ ರೀತಿಯ ಹೊಳಪು ಐಶ್ವರ್ಯಳನ್ನು ನೋಡಿದಾಗ ಅಮಿತಾಬ್​ಗೆ ಕಾಣುತ್ತಿತ್ತು. ಶ್ವೇತಾ ಪತಿಯ ಮನೆಗೆ ಹೋದ ಬಳಿಕ ಐಶ್ವರ್ಯ ಅವಳ ಜಾಗವನ್ನು ತುಂಬಿದ್ದಾಳೆ ಎಂದು ಜಯಾಬಚ್ಚನ್ ಹೇಳಿದ್ರು. ಆ ವಿಡಿಯೋ ಈಗ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಒಂದು ವಿಡಿಯೋವನ್ನಿಟ್ಟುಕೊಂಡು ಬಚ್ಚನ್ ಅಭಿಮಾನಿಗಳು ಇಷ್ಟು ಬಾಂಧವ್ಯವಿರುವ ಮನೆತನದಲ್ಲಿ ಬಿರುಕು ಮೂಡಲು ಸಾಧ್ಯವೇ ಇಲ್ಲ ಎಂದು ಮಾತನಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us