newsfirstkannada.com

ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯದಲ್ಲಿ ಬಿರುಕು.. 15 ವರ್ಷದ ಸಂಸಾರಕ್ಕೆ ಡಿವೋರ್ಸ್​​ ಕೊಡಲು ತಯಾರಿ..?

Share :

Published June 26, 2024 at 10:03am

    ಟಾಲಿ​ವುಡ್​ ಆಯಿತು ಈಗ ಕಾಲಿವುಡ್​ನಲ್ಲೂ ಡಿವೋರ್ಸ್​ ಮಾತು

    ಕಳೆದ ಕೆಲವು ವರ್ಷಗಳಿಂದ ಇಬ್ಬರು ಒಟ್ಟಿಗೆ ಇಲ್ವಾ?

    ಎಲ್ಲರ ಸಮ್ಮುಖದಲ್ಲಿ ಸಂಪ್ರದಾಯದಂತೆ ಮದುವೆ ಆಗಿದ್ದ ಸ್ಟಾರ್ ನಟ

ಸಿನಿಮಾ ರಂಗದಲ್ಲಿ ವಿಚ್ಛೇದನ (ಡಿವೋರ್ಸ್​) ಪ್ರಕರಣಗಳು ಈಗೀಗ ಹೆಚ್ಚಾಗಿ ಕೇಳಿ ಬರುತ್ತಿವೆ. ಸ್ಯಾಂಡಲ್​ವುಡ್​ನಲ್ಲಿ ದೊಡ್ಮನೆ ಕುಡಿ ಯುವ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಚಂದನ್ ಶೆಟ್ಟಿ, ನಿವೇದಿತಾ ಬೇರೆ ಬೇರೆಯಾಗಿದ್ದಾರೆ. ಟಾಲಿವುಡ್​ನಲ್ಲಿ ಸಮಂತಾ, ನಾಗಚೈತನ್ಯಗೆ ಡಿವೋರ್ಸ್ ನೀಡಿದ್ದಾರೆ. ಈ ಎಲ್ಲದರ ಮಧ್ಯೆ ತಮಿಳು ಸಿನಿಮಾ ಕ್ಷೇತ್ರದಲ್ಲೂ ಈಗ ಡಿವೋರ್ಸ್ ಸದ್ದು ಮಾಡುತ್ತಿದ್ದು ಸ್ಟಾರ್ ನಟ ಜಯಂ ರವಿ ತನ್ನ ಹೆಂಡತಿ ಆರತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ.. 10 ವರ್ಷದ ಬಳಿಕ ಲೋಕಸಭೆಗೆ ಅಧಿಕೃತ ವಿಪಕ್ಷ ನಾಯಕ!

ನಟ ಜಯಂ ರವಿ ತಮಿಳು ಇಂಡಸ್ಟ್ರಿಯಲ್ಲಿ ತಮ್ಮದೇ ನಟನೆಯಿಂದ ಅಭಿಮಾನಿಗಳ ಮನ ಗೆದ್ದಂತವರು. ಇವರು ಪತ್ನಿ ಆರತಿಗೆ ಡಿವೋರ್ಸ್ ನೀಡುವ ಸಿದ್ಧತೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಈ ಇಬ್ಬರ ಮಧ್ಯೆ ಬಿರುಕು ಇರುವುದಂತೂ ನಿಜ, ಒಂದೇ ಮನೆಯಲ್ಲಿ ಇಬ್ಬರು ಒಟ್ಟಿಗೆ ಇಲ್ಲವೆಂದು ಕಾಲಿವುಡ್​​ ಕ್ಷೇತ್ರದಲ್ಲಿ ಪಿಸು ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ತ್ರಿಶಾ ಜೊತೆ ಡೇಟಿಂಗ್ ಮಾಡ್ತಿದ್ದಾರಾ ದಳಪತಿ ವಿಜಯ್.. ಕುತೂಹಲ ಮೂಡಿಸಿದ ಇಬ್ಬರ ಫೋಟೋಸ್..!

2009ರಲ್ಲಿ ಜಯಂ ರವಿ, ಆರತಿಯನ್ನು ವಿವಾಹವಾಗಿದ್ದರು. ಬಳಿಕ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ಮಕ್ಕಳು ಯಾರ ಜೊತೆ ಇದ್ದಾರೆ ಎಂಬುವುದು ತಿಳಿದಿಲ್ಲ. ಇಲ್ಲಿಗೆ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 15 ವರ್ಷ ಕಳೆಯುತ್ತ ಬರುತ್ತಿದೆ. ಇಷ್ಟು ವರ್ಷ ಕಾಲ ಪರಸ್ಪರ ಆತ್ಮೀಯರಾಗಿದ್ದ ಈ ಜೋಡಿ ಇದೀಗ ದಿಢೀರ್ ಅಗಲಿಕೆಯ ಸುದ್ದಿ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಉಲ್ಟಾ ಹೊಡೆದ ಆಪ್ತ.. ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​..!

ಕಾಲಿವುಡ್​ನಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜಯಂ ರವಿ ಹಾಗೂ ಪತ್ನಿ ಆರತಿ ನಡುವೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯವಿದೆ. ಹೀಗಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಆರತಿ ತನ್ನ ಇನ್​ಸ್ಟಾದಲ್ಲಿ ಗಂಡನ ಎಲ್ಲ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಆದರೆ ಈ ಬಗ್ಗೆ ಜಯಂ ರವಿ ಎಲ್ಲಿಯು ಅಧಿಕೃತವಾಗಿ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯದಲ್ಲಿ ಬಿರುಕು.. 15 ವರ್ಷದ ಸಂಸಾರಕ್ಕೆ ಡಿವೋರ್ಸ್​​ ಕೊಡಲು ತಯಾರಿ..?

https://newsfirstlive.com/wp-content/uploads/2024/06/JAYAM_RAVI.jpg

Load More