newsfirstkannada.com

×

ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ತಾರಾ ಜೆಸಿ ಮಾಧುಸ್ವಾಮಿ? ಈ ಬಗ್ಗೆ ಮಾಜಿ ಮಿನಿಸ್ಟರ್​ ಏನಂದ್ರು?

Share :

Published July 2, 2023 at 5:08pm

Update July 2, 2023 at 5:09pm

    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು

    ಕಾಂಗ್ರೆಸ್​ಗೆ ಸೆಡ್ಡು ಹೊಡೆಯಲು ಲೋಕಸಭೆಗೆ ಬಿಜೆಪಿ, ಜೆಡಿಎಸ್​​​ ಮೈತ್ರಿ

    ಕ್ಷೇತ್ರ ತಪ್ಪುವ ಭಯದಿಂದ ಕಾಂಗ್ರೆಸ್​ ಸೇರ್ತಾರಾ ಜೆ.ಸಿ ಮಾಧುಸ್ವಾಮಿ?

ತುಮಕೂರು: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಜೆಸಿ ಮಾಧುಸ್ವಾಮಿ ಅವರು ಬಿಜೆಪಿ ತೊರೆದು ಕಾಂಗ್ರೆಸ್​ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಈ ಸುದ್ದಿ ಬೆಂಕಿಯಂತೆ ಹರಡಿದ ಬೆನ್ನಲ್ಲೇ ಜೆಸಿ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಜೆಸಿ ಮಾಧುಸ್ವಾಮಿ, ನಾನು ಕಾಂಗ್ರೆಸ್​ಗೆ ಹೋಗುತ್ತೇನೆ ಎಂದು ಯಾವ ಮುಠ್ಠಾಳ ಹೇಳಿದ್ದು. ನಾನು ಕಾಂಗ್ರೆಸ್​ ಸಿದ್ದಾಂತ ವಿರೋಧ ಮಾಡಿಕೊಂಡು ಬೆಳೆದವನು. ನಾನು ಹೇಗೆ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಲು ಸಾಧ್ಯ ಎಂದರು.

ಇಡೀ ಜೀವಮಾನ ಕಾಂಗ್ರೆಸ್​​ ವಿರೋಧ ಮಾಡಿದವನು ನಾನು. ನನಗೆ ಕಾಂಗ್ರೆಸ್​ ಸೇರುವ ದುಸ್ಥಿತಿ ಇನ್ನೂ ಬಂದಿಲ್ಲ. ಜಯಪ್ರಕಾಶ್ ನಾರಾಯಣ್ ಹೋರಾಟದಲ್ಲಿ ಭಾಗಿಯಾಗಿದ್ದ ನಾನು ಕಾಂಗ್ರೆಸ್​​ ಯಾಕೆ ಸೇರಲಿ? ಈ ಬಗ್ಗೆ ನನ್ನ ಕಾರ್ಯಕರ್ತರು ತಲೆ ಕೆಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್​​ ಮೈತ್ರಿ!

ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ, ಜೆಡಿಎಸ್​ ಮೈತ್ರಿಯಾಗಲಿದೆ ಎಂಬ ಸುದ್ದಿ ಹರಡಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರೇ ಮಾಜಿ ಪ್ರಧಾನಿ ದೇವೇಗೌಡರ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್​​ಗೆ ಸೆಡ್ಡು ಹೊಡೆಯಲು ಬಿಜೆಪಿಯೊಂದಿಗೆ ಜೆಡಿಎಸ್​​ ಕೈ ಜೋಡಿಸಲಿದೆ. ಒಂದು ವೇಳೆ ಹೀಗಾದರೆ ಜೆಸಿ ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ಕ್ಷೇತ್ರವೂ ತನ್ನ ಕೈ ತಪ್ಪಲಿದೆ. ಆದ್ದರಿಂದ ಇವರು ಬಿಜೆಪಿ ತೊರೆದು ಕಾಂಗ್ರೆಸ್​ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ತಾರಾ ಜೆಸಿ ಮಾಧುಸ್ವಾಮಿ? ಈ ಬಗ್ಗೆ ಮಾಜಿ ಮಿನಿಸ್ಟರ್​ ಏನಂದ್ರು?

https://newsfirstlive.com/wp-content/uploads/2023/07/JC-Madhuswamy.jpg

Load More