newsfirstkannada.com

ಸಂತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ JCB; ನೋಡ ನೋಡ್ತಿದ್ದಂತೆ ಗೋಬಿ, ಪಾನಿಪೂರಿ ಅಂಗಡಿಗಳೆಲ್ಲಾ ಧ್ವಂಸ; ಏನಾಯ್ತು?

Share :

14-11-2023

    ಜೆಸಿಬಿ ಚಾಲಕನಿಂದ ಬೆಳ್ಳೂರು ಸಂತೆಯಲ್ಲಿ ಅಲ್ಲೋಲ ಕಲ್ಲೋಲ

    ಕುಡಿದ ಮತ್ತಿನಲ್ಲಿ ಅಥವಾ ಗಾಂಜಾ ಮತ್ತಿನಲ್ಲಿ ಚಾಲನೆ ಮಾಡಿದ್ನಾ?

    ಜೆಸಿಬಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಬೆಳ್ಳೂರು ಜನರು

ಮಂಡ್ಯ: ಆ ಗ್ರಾಮದಲ್ಲಿ ಸಂತೆ ನಡೆಯುತ್ತಿತ್ತು. ಬೀದಿ ಬದಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸಲಾಗ್ತಿತ್ತು. ಸಂತೆ ಅಂದ ಮೇಲೆ ನೂರಾರು ಜನರು ಸೇರಿರುತ್ತಾರೆ. ಇಂಥ ಸಂದರ್ಭದಲ್ಲೇ ಏಕಾಏಕಿ ರಸ್ತೆಗೆ ನುಗ್ಗಿದ ಜೆಸಿಬಿಯೊಂದು ಸಾಕಷ್ಟು ಅವಾಂತರವನ್ನೇ ಸೃಷ್ಟಿ ಮಾಡ್ತು. ಸೋಮವಾರದ ಕಾರಣ ಮಂಡ್ಯ ಜಿಲ್ಲೆಯ ಬೆಳ್ಳೂರಲ್ಲಿ ಸಂತೆ ನಡೆಯುತ್ತಿತ್ತು. ಜನರೆಲ್ಲ ವ್ಯಾಪಾರ ವಹಿವಾಟಿನಲ್ಲಿ ಬ್ಯುಸಿಯಾಗಿದ್ದರು. ಇದೇ ವೇಳೆ ಅಲ್ಲೋದು ಜೆಸಿಬಿ ಎಂಟ್ರಿಯಾಗಿತ್ತು. ಒಂದು ಕ್ಷಣ ನೋಡ ನೋಡ್ತಿದ್ದಂತೆ ಬೆಳ್ಳೂರು ಸಂತೆಯಲ್ಲಿ ಅಲ್ಲೋಲ ಕಲ್ಲೋಲವೇ ನಿರ್ಮಾಣವಾಗಿ ಹೋಯ್ತು.

ಬೆಳ್ಳೂರು ಸಂತೆಯಲ್ಲಿ ಜೆಸಿಬಿ ಚಾಲಕನ ಅವಾಂತರ
ಅಡ್ಡಾದಿಡ್ಡಿ ಚಾಲನೆ, ಬೀದಿ ಬದಿ ಅಂಗಡಿಗಳಿಗೆ ಹಾನಿ

ಮಂಡ್ಯದ ಬೆಳ್ಳೂರು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಂತೆ ಹಿನ್ನಲೆ ಸಣ್ಣಪುಟ್ಟ ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ತರಕಾರಿ, ಪಾನಿಪುರಿ, ಟೀ ಅಂಗಡಿ ಸೇರಿ ಹಲವು ಅಂಗಡಿಗಳನ್ನ ಹಾಕಿ ವ್ಯಾಪಾರ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಅದೇ ರಸ್ತೆಯಲ್ಲಿ ಜೆಸಿಬಿಯೊಂದು ನುಗ್ಗಿ ಬಂದಿದೆ. ‌ಕುಡಿದು ವಾಹನ ಚಲಾಯಿಸುತ್ತಿದ್ದ ಚಾಲಕನ ಅವಾಂತರದಿಂದ ಅಂಗಡಿಗಳು, ತಳ್ಳುವ ಗಾಡಿಗೆ, ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಭಯಭೀತರಾದ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ.

ಜೆಸಿಬಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಜನರು

ಇಷ್ಟೆಲ್ಲ ಅವಾಂತರ ಮಾಡಿ, ಅಂಗಡಿ ಮುಂಗಟ್ಟು ಜಖಂಗೊಂಡರು ಕ್ಯಾರೆ ಎನ್ನದ ಚಾಲಕ ಮತ್ತೆ ಜೆಸಿಬಿಯನ್ನ ಅಡ್ಡಾದಿಡ್ಡಿ ಚಲಾಯಿಸಿದ್ದಾನೆ. ಈ ವೇಳೆ ಮತ್ತಷ್ಟು ರೊಚ್ಚಿಗೆದ್ದ ಜನರು ಜೆಸಿಬಿ ಮೇಲೆ ಕಲ್ಲು ತೂರಿದ್ದಾರೆ.‌ ಜೆಸಿಬಿ ನಿಲ್ಲಿಸಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರನ್ನು ಉದ್ರಿಕ್ತರು ತಡೆದು, ಚಾಲಕನಿಗೆ ಧರ್ಮದೇಟು ನೀಡಿದ್ದರು. ಕೊನೆಗೆ ಉದ್ರಿಕ್ತರನ್ನು ಸಮಾಧಾನಗೊಳಿಸಿ, ಚಾಲಕನನ್ನು ವಶಕ್ಕೆ ಪಡೆದುಕೊಂಡರು. ಜನರು ಹಿಗ್ಗಾಮುಗ್ಗ ಥಳಿಸಿದ್ದ ಪರಿಣಾಮ ಚಾಲಕನೂ ಕೂಡ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಇನ್ನು ಜೆಸಿಬಿ ಕುಣಿಗಲ್ ಮೂಲದ ವ್ಯಕ್ತಿಗೆ ಸೇರಿದ್ದು, ಜೆಸಿಬಿ ಚಾಲಕ ಬಿಹಾರ ಮೂಲದ ರಾಜ್ ಕುಮಾರ್ ಎನ್ನಲಾಗ್ತಿದೆ. ಕುಡಿದ ಮತ್ತಿನಲ್ಲಿ ಅಥವಾ ಗಾಂಜಾ ಮತ್ತಿನಲ್ಲಿ ಚಾಲನೆ ಮಾಡಿರಬೇಕು. ಈ ಬಗ್ಗೆ ಸರಿಯಾದ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಒಟ್ಟಾರೆ ಜೆಸಿಬಿ ಚಾಲಕನ ಅವಾಂತರದಿಂದ ಬೆಳ್ಳೂರು ಸಂತೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು. ರಸ್ತೆ ಬದಿ ಹಾಕಲಾಗಿದ್ದು. 10ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದ್ದು, ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಪೊಲೀಸರು, ಅಡ್ಡಾದಿಡ್ಡಿ ಜೆಸಿಬಿ ಚಾಲನೆಗೆ ಕಾರಣ ಏನು ಅನ್ನೊದನ್ನು ಪತ್ತೆ ಹಚ್ಚಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ JCB; ನೋಡ ನೋಡ್ತಿದ್ದಂತೆ ಗೋಬಿ, ಪಾನಿಪೂರಿ ಅಂಗಡಿಗಳೆಲ್ಲಾ ಧ್ವಂಸ; ಏನಾಯ್ತು?

https://newsfirstlive.com/wp-content/uploads/2023/11/mandya-17.jpg

Load More