newsfirstkannada.com

ಬಿಜೆಪಿ, ಜೆಡಿಎಸ್​​ ಮೈತ್ರಿ ಘೋಷಿಸಿದ HDD; ಸೀಟು ಹಂಚಿಕೆ ಬಗ್ಗೆ ಹೇಳಿದ್ದೇನು..?

Share :

10-09-2023

    ಜೆಡಿಎಸ್​ ಸಭೆಯಿಂದ ಹೊರಗುಳಿದ ಶರಣಗೌಡ

    ‘ಮೈತ್ರಿ’ ಬಗ್ಗೆ ಘಂಟಾಘೋಷವಾಗಿ ನುಡಿದ ಗೌಡರು

    ಅಖಾಡಕ್ಕಿಳಿಯಲು ಸಜ್ಜಾದ ‘ಕಮಲದಳ’ ಮೈತ್ರಿ!

ತೆನೆ ಹೊತ್ತ ಮಹಿಳೆ ಮತ್ತೊಮ್ಮೆ ಕಮಲ ಮುಡಿಯಲು ಸಜ್ಜಾಗಿದ್ದಾಳೆ. ಆದರೆ ಟಿಕೆಟ್​ ಬಗ್ಗೆ ಇನ್ನೂ ಖಾತ್ರಿಯಾಗಿಲ್ಲ. ಈ ನಡುವೆ ಇವತ್ತು ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಬೃಹತ್‌ ಸಮಾವೇಶ ನಡೆದಿದ್ದು, ಪಕ್ಷದ ವರಿಷ್ಠರಾಗಿರೋ ಗೌಡವರು ಮೈತ್ರಿ ಬಗ್ಗೆ ಘಂಟಾಘೋಷವಾಗಿ ಮಾತನಾಡಿದ್ದಾರೆ. ಜೆಡಿಎಸ್​ ಪಕ್ಷ ಉಳಿಸುವ ವಿಚಾರ ಪ್ರಸ್ತಾಪಿಸಿ ಭಾವುಕರಾಗಿದ್ದಾರೆ.

ಕಮಲ-ದಳ ಮೈತ್ರಿ. ಇದು ಈ ಬಂಧ ಇಂದು ನಿನ್ನೆಯದಲ್ಲ. 2006 ರಿಂದ 2008 ರವರೆಗೆ ಬಿಎಸ್​ ಯಡಿಯೂರಪ್ಪ ಹಾಗೂ ಹೆಚ್​ಡಿ ಕುಮಾರಸ್ವಾಮಿ ಈ ಅನುಬಂಧಕ್ಕೆ ನಾಂದಿ ಹಾಡಿದ್ದರು. ಅದು ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷದ ಜೊತೆಗೆ ದಳಪತಿಗಳು ದೋಸ್ತಿ ಮಾಡಿಕೊಂಡ್ರೂ ಬಳಿಕ ಜಂಗೀ ಕುಸ್ತಿ ಆಡಿ ಮೈತ್ರಿಯ ಕೊಂಡಿ ಹರಿದುಕೊಂಡು ಹೊರಬಂದಿದ್ದಾರೆ. ಈಗ ಮತ್ತೆ ಆ ಮೈತ್ರಿಗೆ ಸುಗ್ಗಿಕಾಲ ಬಂದಿದೆ. ಭವಿಷ್ಯದ ಅಸ್ತಿತ್ವಕ್ಕಾಗಿ ಈ ಸಲ ಕೇಸರಿ ಜೊತೆ ಹಸಿರು ಒಂದಾಗೋಣ ಬಾ ಅಂತಿದೆ. ಈ ಮೈತ್ರಿ ವಿಚಾರವಾಗಿಯೇ ಮಹತ್ವದ ಖಾಸ್​ಬಾತ್​ ನಡೆದಿದೆ.

ಮೈತ್ರಿ ಚರ್ಚೆ ನಡುವೆ ಜೆಡಿಎಸ್​ ಮಹತ್ವದ ಮೀಟಿಂಗ್
ಹೆಚ್​.ಡಿ ದೇವೇಗೌಡ ನೇತೃತ್ವದಲ್ಲಿ ಬೃಹತ್ ಸಮಾವೇಶ

ಲೋಕಸಮರಕ್ಕೆ ಕಮಲದ ಜೊತೆ ದಳ ಸೇರೋಕೆ ಮುಂದಾಗಿರುವಾಗಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್​ ಹೆಚ್​.ಡಿ ದೇವೇಗೌಡ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಿ ದಳದ ಶಕ್ತಿ ಪ್ರದರ್ಶನ ಮಾಡಿದೆ. ಲೋಕಸಭಾ ಚುನಾವಣೆಗೆ ದಳಪಡೆ ಮಾಸ್ಟರ್​ ಪ್ಲಾನ್ ಮಾಡಿದ್ದು ಬಿಜೆಪಿ ಜೊತೆ ಮೈತ್ರಿ ಕುರಿತು ಅಭಿಪ್ರಾಯ ಸಂಗ್ರಹ ಮಾಡಲೆಂದೇ ಈ ಸಮಾವೇಶ ಮಾಡಿದೆ. ಆಪರೇಷನ್​ ಹಸ್ತ ಕಟ್ಟಿ ಹಾಕಲು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಈ ಮೆಗಾ ಪ್ಲಾನ್ ಮಾಡಿದ್ದು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಬಿಜೆಪಿ ದೋಸ್ತಿ ಬಗ್ಗೆ ಹೆಚ್.ಡಿ. ದೇವೇಗೌಡ ಘೋಷಣೆ
ಪ್ರಾದೇಶಿಕ ಪಕ್ಷ ಉಳಿಸುವಂತೆ ಕಾರ್ಯಕರ್ತರಿಗೆ ಭಾವುಕ ಕರೆ

ಸಮಾವೇಶದಲ್ಲಿ ಬಿಜೆಪಿ ದೋಸ್ತಿ ಬಗ್ಗೆ ಜೆಡಿಎಸ್​ ವರಿಷ್ಠ ಹೆಚ್.ಡಿ. ದೇವೇಗೌಡರು ಬಹಿರಂಗವಾಗಿಯೇ ಘೋಷಿಸಿದ್ದಾರೆ. ಯಾವುದನ್ನೂ ಕದ್ದುಮುಚ್ಚಿ ಮಾಡೋದಿಲ್ಲ. ಸೀಟು ಹಂಚಿಕೆ ಬಗ್ಗೆ ಬಿಜೆಪಿ ವರಿಷ್ಠರು ಹಾಗೂ ಕುಮಾರಸ್ವಾಮಿ ಮಾತಾಡ್ತಾರೆ ಅಂತ ಹೇಳಿದ್ದಾರೆ. ಅಲ್ಲದೇ ಜೆಡಿಎಸ್​ ಪಕ್ಷ ಮುಗಿಸಲು ಕೆಲವರು ಯತ್ನಿಸಿದರೆಂದು ಭಾವುಕರಾಗಿದ್ದು ಪ್ರಾದೇಶಿಕ ಪಕ್ಷವನ್ನ ಉಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇನ್ನು ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಮಾಜಿ ಸಿಎಂ ಹೆಚ್​​ಡಿಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಕಮಲ-ದಳ ಸಮ್ಮಿಲನವನ್ನ ಖಚಿತಪಡಿಸಿದ್ದು ಸೀಟು ಹಂಚಿಕೆ ಬಗ್ಗೆ ಮಾತಾಡಬೇಕಿದೆ ಎಂದಿದ್ದಾರೆ.

ಜೆಡಿಎಸ್​ ಸಭೆಯಿಂದ ಹೊರಗುಳಿದ ಶರಣಗೌಡ ಕಂದಕೂರು

ಇನ್ನು ಇತ್ತ ಕಮಲದ ಜೊತೆ ಸೇರಿ ಪಕ್ಷ ಉಳಿಸುವ ಕೆಲಸ ಮಾಡ್ತಿದ್ದೀವಿ ಅಂತ ದೊಡ್ಡಗೌಡ್ರು ಹೇಳ್ತಿದ್ರೆ ಅತ್ತ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸಭೆಗೆ ಗೈರಾಗಿದ್ದಾರೆ. ನಿನ್ನೆಯಷ್ಟೇ ಬಿಜೆಪಿ ಜೊತೆ ಮೈತ್ರಿಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಶರಣಗೌಡ ಕಂದಕೂರು ಸಭೆಗೆ ಹಾಜರಾಗದೇ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ ಎನ್ನಲಾಗ್ತಿದೆ. ಇನ್ನು ಮೈತ್ರಿ ಬಗ್ಗೆ ನಮ್ಮ ಶಾಸಕರಲ್ಲಿ ಅಸಮಾಧಾನವಿಲ್ಲ ಅಂತ ಬಿಜೆಪಿ ಜೊತೆಗಿನ ಮೈತ್ರಿ ಪರ ಜಿಟಿ ದೇವೇಗೌಡ ಹಾಗೂ ಸಿಎಂ ಇಬ್ರಾಹಿಂ ಬ್ಯಾಟ್​ ಬೀಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿಗೆ ಸಕಾಲ ಕೂಡಿ ಬಂದಿದೆ. ಕೇಸರಿ ಹಾಗೂ ಹಸಿರು ಸೇನೆ ಒಟ್ಟಾಗಿ ಲೋಕಸಮರ ಎದುರಿಸಲು ತಯಾರಾಗಿವೆ. ಇನ್ನೇನು ಕ್ಷೇತ್ರಗಳ ಹಂಚಿಕೆ ಒಂದು ಬಗೆಹರಿದ್ರೆ ಇಬ್ಬರೂ ಒಟ್ಟಾಗಿ ಕಣಕ್ಕಿಳಿಯಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ, ಜೆಡಿಎಸ್​​ ಮೈತ್ರಿ ಘೋಷಿಸಿದ HDD; ಸೀಟು ಹಂಚಿಕೆ ಬಗ್ಗೆ ಹೇಳಿದ್ದೇನು..?

https://newsfirstlive.com/wp-content/uploads/2023/09/jds-4.jpg

Load More