newsfirstkannada.com

ಚುನಾವಣೆಯಲ್ಲಿ ಹೀನಾಯ ಸೋಲು; JDS ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ

Share :

24-05-2023

    ಚುನಾವಣೆಯಲ್ಲಿ ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ JDSಗೆ ಗೆಲುವು

    ಕಾಂಗ್ರೆಸ್​ನಿಂದ ರಾಜೀನಾಮೆ ನೀಡಿ ಜೆಡಿಎಸ್​ ಸೇರಿದ್ದ ಇಬ್ರಾಹಿಂ

    UT ಖಾದರ್​​ರನ್ನು ಸ್ಪೀಕರ್ ಮಾಡಿದ್ಕೆ ಬೇಸರ ವ್ಯಕ್ತಪಡಿಸಿದ JDS ನಾಯಕ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಬೆನ್ನಲ್ಲೇ JDS ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ರಾಜಿನಾಮೆ ನಿರ್ಧಾರದ ಬಗ್ಗೆ ತಿಳಿಸಿದರು. ಇವತ್ತು ದೇವೇಗೌಡರು ಮುಖಂಡರ ಸಭೆ ಕರೆದಿದ್ದಾರೆ. ಫಲಿತಾಂಶ ಬಂದ ಮಾರನೇ ದಿನವೇ ಸೋಲಿನ ನೈತಿಕ ಹೊಣೆಯನ್ನು ಹೊತ್ತಿದ್ದೇನೆ. ಇವತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ‌ ಸಲ್ಲಿಸಿದ್ದೇನೆ ಎಂದರು.

ಇದೇ ವೇಳೆ ಕಾಂಗ್ರೆಸ್​ ಸರ್ಕಾರದ ಬಗ್ಗೆ ಮಾತನಾಡಿ, ಹೊಸ ಸರ್ಕಾರ ರಚನೆಯಾಗಿದೆ, ಶುಭವಾಗಲಿ ಎಂದರು. ಇದೇ ವೇಳೆ ನೀವು ಕಾಂಗ್ರೆಸ್‌ನಲ್ಲಿದ್ದರೆ ಮಂತ್ರಿಯಾಗುತ್ತಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಇಬ್ರಾಹಿಂ, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗ್ತೀವಿ. ಯು.ಟಿ.ಖಾದರ್‌ನ ಡಿಸಿಎಂ ಮಾಡಬಹುದಿತ್ತಲ್ಲ. ಈಗ ಅವರು ಎದ್ದೇಳಂಗೂ ಇಲ್ಲ, ಮಾತಾಡಂಗೂ ಇಲ್ಲ ಎಂದು ಗೇಲಿ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣೆಯಲ್ಲಿ ಹೀನಾಯ ಸೋಲು; JDS ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಬ್ರಾಹಿಂ ರಾಜೀನಾಮೆ

https://newsfirstlive.com/wp-content/uploads/2023/05/IBRAHIM.jpg

Load More