newsfirstkannada.com

ದಳಪತಿಗಳಿಗೆ ಹೊಸ ಭವಿಷ್ಯವಾಣಿ; ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರನ್ನು ಭೇಟಿ ಮಾಡಿದ್ದೇಕೆ ಹೆಚ್‌.ಡಿ ರೇವಣ್ಣ?

Share :

06-08-2023

    ತೆಲಂಗಾಣದ ಖ್ಯಾತ ಜ್ಯೋತಿಷಿ ರೇವಣ್ಣ ಕುಟುಂಬಕ್ಕೆ ಹೇಳಿದ್ದೇನು?

    ದೊಡ್ಡ, ದೊಡ್ಡ ಲೀಡರ್‌ಗಳಿಗೆ ಆಶೀರ್ವಾದ ಮಾಡೋ ಜ್ಯೋತಿಷಿ

    ವೇಣುಸ್ವಾಮಿ ಕೈಯಲ್ಲಿ ಪೂಜೆ ಮಾಡಿಸಿದ್ರೆ ರಾಜಕೀಯ ಯಶಸ್ಸು!

ಹಾಸನ: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಮುಹೂರ್ತ, ಶಕುನ, ಶುಭಕಾಲದ ಮೇಲೆ ಬಹಳಷ್ಟು ನಂಬಿಕೆ. ನಿಂಬೆಹಣ್ಣು ಅಂದ್ರೆ ರೇವಣ್ಣ, ರೇವಣ್ಣ ಅಂದ್ರೆ ನಿಂಬೆಹಣ್ಣು ಅನ್ನೋ ಮಾತು ರಾಜ್ಯ ರಾಜಕೀಯದಲ್ಲಿದೆ. ರಾಜಕೀಯ ಸಭೆ ಸಮಾರಂಭಗಳಲ್ಲಿ ಅಷ್ಟೇ ಯಾಕೆ ವಿಧಾನಸೌಧಕ್ಕೆ ಎಂಟ್ರಿ ಕೊಡುವಾಗಲೇ ರೇವಣ್ಣ ಅವರು ಕೈಯಲ್ಲಿ ನಿಂಬೆಹಣ್ಣು ಹಿಡಿದು ಕೊಂಡು ಬಂದ ಎಷ್ಟೋ ಪ್ರಸಂಗಗಳಿವೆ. ಭವಿಷ್ಯ, ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ ಇರುವ ಹೆಚ್‌.ಡಿ ರೇವಣ್ಣ ಅವರು ಇತ್ತೀಚೆಗೆ ತೆಲಂಗಾಣದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರನ್ನು ಭೇಟಿ ಮಾಡಿದೆ. ವೇಣುಸ್ವಾಮಿ ಅವರಿಂದ ರೇವಣ್ಣ ಅವರ ಕುಟುಂಬ ಆಶೀರ್ವಾದ ಪಡೆದಿದ್ದು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು.

ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರನ್ನು ಭೇಟಿ ಮಾಡಿದ ಬಗ್ಗೆ ಖುದ್ದು ಹೆಚ್‌.ಡಿ ರೇವಣ್ಣ ಅವರೇ ಮಾತನಾಡಿದ್ದಾರೆ. ಹಾಸನದಲ್ಲಿ ಮಾತನಾಡಿದ ರೇವಣ್ಣ ಅವರು ಏನ್ ತೆಲಂಗಾಣನೋ ಅದೇನ್ ಗೊತ್ತಿಲ್ಲಪ್ಪಾ. ನಾನ್ಯಾಕೆ ತೆಲಂಗಾಣಕ್ಕೆ ಹೋಗಲಿ, ಅದರಲ್ಲಿ ವಿಶೇಷತೆ ಏನಿಲ್ಲ. ನನಗೆ ಅವರ ಹೆಸರು ಗೊತ್ತಿಲ್ಲ. ಬೆಂಗಳೂರಿನ ನಮ್ಮ ಮನೆಗೆ ಬಂದು ಆಶೀರ್ವಾದ ಮಾಡ್ತೀನಿ ಅಂದ್ರು, ಮಾಡಿ ಅಂದೆ ಅಷ್ಟೇ ಎಂದಿದ್ದಾರೆ.

ವೇಣುಸ್ವಾಮಿ ಅವರ ಬಳಿ ವಿಶೇಷ ಪೂಜೆ ಮಾಡಿಸಿದ್ದೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಅವರು, ನಾವೆಲ್ಲೂ ಹೋಗಿಲ್ಲ ನಮ್ದು ಯಾವುದೇ ವಿಶೇಷ ಪೂಜೆ ಇಲ್ಲ. ಕೆಲವು ದೊಡ್ಡ, ದೊಡ್ಡ ಲೀಡರ್‌ಗಳಿಗೆ ಆಶೀರ್ವಾದ ಮಾಡಿದ್ದೀನಿ. ನಿಮಗೂ ಮಾಡ್ತಿವಿ ಅಂದ್ರು. ಬಂದು ಆಶೀರ್ವಾದ ಮಾಡಿದ್ರು ಹೋದ್ರು ಅಷ್ಟೇ. ನಾನ್ಯಾಕೆ ವಿಶೇಷ ಪೂಜೆ ಮಾಡಿಸಲು ಹೋಗಲಿ. ನಾನು ಹೊಳೆನರಸೀಪುರದ ಲಕ್ಷ್ಮೀನರಸಿಂಹ, ಮಾವಿನಕೆರೆ ರಂಗನಾಥಸ್ವಾಮಿ, ನಾವು ನಂಬಿರುವುದೇ ಹರದನಹಳ್ಳಿ ಈಶ್ವರ, ಹೊಳೆನರಸೀಪುರದ ಲಕ್ಷ್ಮೀನರಸಿಂಹ, ಮಾವಿನಕೆರೆ ರಂಗನಾಥಸ್ವಾಮಿ. ಈ ಮೂರು ದೇವರು ದೇವೇಗೌಡರನ್ನು ಈ ಮಟ್ಟಕ್ಕೆ ತಂದಿದೆ. ನಮ್ಮನ್ನು ಈ ಮಟ್ಟಕ್ಕೆ ತಂದಿದೆ. ನನ್ನ ಮಕ್ಕಳಿಗೂ ಆಶೀರ್ವಾದ ಮಾಡಿದೆ. ನಮಗೆ ಅದು ಬಿಟ್ಟರೆ ಬೇರೆ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.

ಸ್ವಾಮಿಗಳು ಮನೆಗೆ ಬರುತ್ತಾ ಇರ್ತಾರೆ ಹೋಗುತ್ತಾ ಇರ್ತಾರೆ. ನಾನು ನಂಬಿರೋದು ಶೃಂಗೇರಿ ಜಗದ್ಗುರುಗಳು, ಭಾರತಿತೀರ್ಥ ಸ್ವಾಮಿಗಳು, ವಿದ್ಯಾತೀರ್ಥ ಸ್ವಾಮಿಗಳು. ಇನ್ನು ಸುತ್ತೂರು ಮಠದ ಸ್ವಾಮೀಜಿ, ನಮ್ಮ ಆದಿಚುಂಚನಗಿರಿ ಮಠದ ಸ್ವಾಮಿಗಳು. ಯಾವಾಗಲಾದರೂ ಅಮವಾಸ್ಯೆ ಪೂಜೆಗೆ ವರ್ಷಕ್ಕೆ ಒಂದು ಸಾರಿ ಆದಿಚುಂಚನಗಿರಿ ಮಠಕ್ಕೆ ಹೋಗ್ತೀನಿ. ಸುತ್ತೂರು ಮಠ, ಸಿದ್ಧಗಂಗಾ ಮಠದಲ್ಲಿ ದೊಡ್ಡ ಬುದ್ದಿ ಚಿಕ್ಕಬುದ್ದಿಯವರು ಇದ್ರು ಅದು ಬಿಟ್ಟರೆ ನಮ್ಮಗೆ ಇನ್ನೇನು ಇಲ್ಲ. ನಾನ್ ಎಲ್ಲಿ ತೆಲಂಗಾಣಕ್ಕೆ ಹೋಗಲಿ, ಯಾರೂ ಟಿಕೆಟ್ ಕೊಡೋರು ನಮಗೆ. ಅವರು ಯಾವ ಊರಿನವರು ಅಂತಾ ಗೊತ್ತಿಲ್ಲ. ಬಂದಿದ್ರು ಆಶೀರ್ವಾದ ಮಾಡ್ತಿನಿ ಸ್ವಾಮಿ, ದೊಡ್ಡ ದೊಡ್ಡರಿಗೆ ಆಶೀರ್ವಾದ ಮಾಡಿದ್ದೀನಿ ಅಂದ್ರು. ನನಗೂ ನನ್ನ ಹೆಂಡ್ತಿಗೂ ಒಂದೊಂದು ಹಾರ ಕೊಟ್ರು ಅಷ್ಟೇ ಎಂದು ಮಾಜಿ ಸಚಿವ ಹೆಚ್ ಡಿ.ರೇವಣ್ಣ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ದಳಪತಿಗಳಿಗೆ ಹೊಸ ಭವಿಷ್ಯವಾಣಿ; ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರನ್ನು ಭೇಟಿ ಮಾಡಿದ್ದೇಕೆ ಹೆಚ್‌.ಡಿ ರೇವಣ್ಣ?

https://newsfirstlive.com/wp-content/uploads/2023/08/HD-Revanna-Meets-Venuswamy.jpg

Load More