newsfirstkannada.com

2ನೇ ಹೆಂಡತಿ ಮನೆ ಮೇಲಿಂದ ಆತ್ಮಹತ್ಯೆ ಮಾಡಿಕೊಂಡ JDS ಮುಖಂಡ .. ಆ ಪತ್ನಿ ಮೇಲೆ ಈ ಪತ್ನಿಗೆ ಅನುಮಾನ

Share :

31-08-2023

    ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿರುವ ಘಟನೆ

    ಚಿಕಿತ್ಸೆ ಫಲಕಾರಿಯಾಗದೆ ರಿಯಲ್​ ಎಸ್ಟೇಟ್​​ ಉದ್ಯಮಿ ಸಾವು

    ಮುಂಜಾನೆ 3 ಗಂಟೆಗೆ ಕಟ್ಟಡದಿಂದ ಬಿದ್ದು ಜೆಡಿಎಸ್‌ ಮುಖಂಡ ಸಾವು

ಉದ್ಯಮಿಯೊಬ್ಬರ ಸಾವು ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗ್ಬಿಟ್ಟಿದೆ. ಆ ಎರಡು ಕುಟುಂಬಗಳು ಯಾವುದಂದ್ರೆ, ಮೊದಲನೇ ಪತ್ನಿ ಕುಟುಂಬ ಇನ್ನೊಂದು ಎರಡನೇ ಪತ್ನಿಯ ಕುಟುಂಬ. ಹಾಗಾದ್ರೆ, ಆ ನಿಗೂಢ ಸಾವಿನ ಹಿಂದಿನ ರಹಸ್ಯವೇನು?

ಇವರ ಹೆಸರು ಮಾರಾಂಜಿನಪ್ಪ. ವಯಸ್ಸು 62. ಬೆಂಗಳೂರಿನ ನಾಗರಭಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಇವರ ಮನೆಯಿದೆ. ಆ ಮನೆಯಿಂದ ಇವತ್ತು ಮುಂಜಾನೆ 3 ಗಂಟೆಗೆ ಬಿದ್ದು ಸಾವನ್ನಪ್ಪಿದ್ದಾರೆ ಅನ್ನೋದು ಎರಡನೇ ಪತ್ನಿ ಗೀತಾ ಅವರ ವಾದ. ಮಾರಾಂಜಿನಪ್ಪ ಬಿದ್ದ ನಂತರ ಆಸ್ಪತ್ರೆಗೆ ದಾಖಲಿಸಿದೆವು. ಆದ್ರೆ, ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮಾರಾಂಜಿನಪ್ಪ ಸಾವನ್ನಪ್ಪಿದರು ಅಂತಾ ಗೀತಾ ಅವರ ಕಡೆಯವರ ವಾದ.

ಯಾವಾಗ ಈ ವಿಷಯ ಮೊದಲೇ ಪತ್ನಿ ಉಮಾದೇವಿಯವರು ಆಸ್ಪತ್ರೆಗೆ ಆಗಮಿಸಿ ನೋಡಿದಾಗ, ಗಂಡ ಮೃತಪಟ್ಟಿರೋದು ಗೊತ್ತಾಯ್ತು. ಆದ್ರೆ, ಉಮಾದೇವಿ ಅವ್ರು, ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿ, ಕೊಲೆ ಆರೋಪ ಮಾಡಿದ್ದಾರೆ. ನನ್ನ ಗಂಡ ಮಾರಾಂಜಿನಪ್ಪನವರನ್ನ ಎರಡನೇ ಪತ್ನಿ ಗೀತಾ, ಹಲ್ಲೆ ಮಾಡಿ ಕೊಲೆ ಮಾಡಿರಬಹುದು ಎಂದು ಆರೋಪಿಸಿರೋ ಉಮಾದೇವಿ, ಅವ್ರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಜೆಡಿಎಸ್‌ ಮುಖಂಡರೂ ಆಗಿದ್ದ ಮರಾಂಜಿನಪ್ಪ, ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ಮನ್‌. ಇವರ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿತ್ತು, ಗೀತಾ ನಾಪತ್ತೆಯಾಗಿದ್ದಾರೆ. ಈ ಪ್ರಕರಣ ಕೈಗೆತ್ತಿಕೊಂಡಿರೋ ಅನ್ನಪೂರ್ಣೇಶ್ವರಿನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2ನೇ ಹೆಂಡತಿ ಮನೆ ಮೇಲಿಂದ ಆತ್ಮಹತ್ಯೆ ಮಾಡಿಕೊಂಡ JDS ಮುಖಂಡ .. ಆ ಪತ್ನಿ ಮೇಲೆ ಈ ಪತ್ನಿಗೆ ಅನುಮಾನ

https://newsfirstlive.com/wp-content/uploads/2023/08/Maranjinappa.jpg

Load More