ಕಾಂಗ್ರೆಸ್ ನಾಯಕರ ಆಪರೇಷನ್ ಆಟಕ್ಕೆ ಬ್ರೇಕ್ ಹಾಕಲು ಪ್ಲಾನ್!
ಎರಡು ದಿನಗಳ ಕಾಲ ಹಾಸನದಲ್ಲೇ ವಾಸ್ತವ್ಯ ಹೂಡಿದ 18 ಶಾಸಕರು
ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಏನು ಬೇಕಾದ್ರೂ ಆಗಬಹುದು
ಬೆಂಗಳೂರು: ರಾಜಕೀಯ ಅನ್ನೋದೇ ಹಾಗೆ ಇಲ್ಲಿ ಯಾರು ಶತ್ರುಗಳಲ್ಲ.. ಯಾರು ಮಿತ್ರರೂ ಅಲ್ಲ. ಯಾವಾಗ ಏನು ಬೇಕಾದ್ರೂ ಆಗಬಹುದು ಅನ್ನೋದೇ ರಾಜಕಾರಣದ ನಿಜವಾದ ಲೆಕ್ಕಾಚಾರ. ರಾಜ್ಯದಲ್ಲಿ ಆಪರೇಷನ್ ರಾಜಕೀಯ ಆಗಾಗ ಸದ್ದು ಮಾಡುತ್ತಲೇ ಇದೆ. ಈ ಆಪರೇಷನ್ ಆಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ ನಾಯಕರು ಹಾಸನಾಂಬೆಯ ಮೊರೆ ಹೋಗಿದ್ದಾರೆ. ಹಾಸನಾಂಬೆಯ ಸನ್ನಿಧಿಯಲ್ಲಿ ಜೆಡಿಎಸ್ ಶಾಸಕರು ಪಕ್ಷ ಬಿಟ್ಟು ಹೋಗಲ್ಲ ಎಂದು ಭರವಸೆ ಕೊಟ್ಟಿದ್ದಾರೆ.
ಇತ್ತೀಚೆಗೆ ಜೆಡಿಎಸ್ ಶಾಸಕರೆಲ್ಲಾ ಹಾಸನ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಶಕ್ತಿ ದೇವತೆ ಹಾಸನಾಂಬೆಯ ದರ್ಶನ ಪಡೆಯೋದು ಒಂದು ವಿಚಾರವಾದ್ರೆ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಆಪರೇಷನ್ ಆಟಕ್ಕೆ ಬ್ರೇಕ್ ಹಾಕೋದು ಪ್ರಮುಖವಾದ ಅಜೆಂಡಾವಾಗಿದೆ.
ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ್ದ ಜೆಡಿಎಸ್ ಶಾಸಕರು ಎರಡು ದಿನಗಳ ಕಾಲ ಹಾಸನದಲ್ಲೇ ವಾಸ್ತವ್ಯ ಹೂಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹೆಚ್‌ಡಿಕೆ ಸೇರಿ ಜೆಡಿಎಸ್‌ನ 18 ಶಾಸಕರು ಹಾಜರಿದ್ದರು.
ಸಭೆಯಲ್ಲಿ ಜೆಡಿಎಸ್ ಶಾಸಕರ ಜೊತೆ ಹೆಚ್.ಡಿ ಕುಮಾರಸ್ವಾಮ ಅವರು ಒನ್ ಟು ಒನ್ ಚರ್ಚೆ ನಡೆಸಿದ್ದಾರೆ. ಚರ್ಚೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಏಕೆ ಅನಿವಾರ್ಯ ಅಂತ ಮನವರಿಕೆ ಮಾಡಿಕೊಟ್ಟಿದ್ದಾರೆ. ಜೊತೆಗೆ ಕಾಂಗ್ರೆಸ್ನಲ್ಲಿರುವ ಆಂತರಿಕ ಕಚ್ಚಾಟದ ಬಗ್ಗೆ ಚರ್ಚೆ ನಡೆಸಲಾಗಿದೆ.
ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು. ಆದ್ದರಿಂದ ದುಡುಕಿನ ನಿರ್ಧಾರ ತಗೋಬೇಡಿ. ಕಾಂಗ್ರೆಸ್ ನಾಯಕರ ಆಮಿಷಕ್ಕೆ ಒಳಗಾಗಬೇಡಿ ಅಂತ ಶಾಸಕರಿಗೆ ತಿಳುವಳಿಕೆ ಹೇಳಲಾಗಿದೆ. ಕುಮಾರಸ್ವಾಮಿ ಅವರು ತಮ್ಮ ಶಾಸಕರಿಗೆ ಕಿವಿಮಾತು ಹೇಳಲಾಗಿದ್ದು, ನೀವು ತಗೊಳ್ಳೋ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಶಾಸಕರು ಹೇಳಿದ್ದಾರೆ. ಹಾಸನಾಂಬೆಯ ಸನ್ನಿಧಿಯಿಂದಲೇ ಜೆಡಿಎಸ್ ಒಗ್ಗಟ್ಟು ಪ್ರದರ್ಶನ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಹಾಸನಾಂಬೆಯ ಸನ್ನಿದಿಯಲ್ಲಿ ಜೆಡಿಎಸ್ ಶಾಸಕರು ಜೆಡಿಎಸ್ ಬಿಡಲ್ಲವೆಂದು ದಳಪತಿಗಳೆದುರು ಆಣೆ ಮಾಡಿದ್ದಾರೆ ಎನ್ನಲಾಗಿದೆ. ಹಾಸನಾಂಬೆಯ ಮೇಲೆ ಆಣೆ ಮಾಡಿ ಪಕ್ಷಕ್ಕೆ ನಿಷ್ಠೆಯಿಂದ ಇರೋದಾಗಿ ಕುಮಾರಸ್ವಾಮಿ ಅವರಿಗೆ ಭರವಸೆ ಸಿಕ್ಕಿದೆ. ಈ ಆಣೆ ಪ್ರಮಾಣದಿಂದ ಕಾಂಗ್ರೆಸ್ ಆಪರೇಷನ್ ಆಟಕ್ಕೆ ದಳಪತಿಗಳು ಬ್ರೇಕ್ ಹಾಕುವ ಲೆಕ್ಕಾಚಾರದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ