newsfirstkannada.com

ಚಿನ್ನದ ಅಂಗಡಿ ಮಾಲೀಕರಿಗೆ ಪೊಲೀಸರಿಂದ ಕಿರುಕುಳ, ಬೆದರಿಕೆ; ಸದನದಲ್ಲಿ MLC ಟಿ.ಎ ಶರವಣ ಆಕ್ರೋಶ

Share :

17-07-2023

    ಸಿಟಿ ಮಾರ್ಕೆಟ್, ಚಿಕ್ಕಪೇಟೆ, ಅವಿನ್ಯೂ ರಸ್ತೆಗಳಲ್ಲಿ ವಸೂಲಿ

    ರಿಕವರಿಗೆ ಹೋಗುವಾಗ ಪೊಲೀಸ್ ಡ್ರೆಸ್‌ ಧರಿಸಿ ಹೋಗುತ್ತಿಲ್ಲ

    ನಿರಪರಾಧಿಗೆ ಅವಮಾನ ಎದುರಿಸೋ ಸಂದರ್ಭ ಬರಬಾರದು

ರಾಜ್ಯಾದ್ಯಂತ ಮತ್ತು ಬೆಂಗಳೂರು ನಗರದಲ್ಲಿ ಗಿರವಿ ಅಂಗಡಿ ಹಾಗೂ ಚಿನ್ನದ ಅಂಗಡಿ ಮಾಲೀಕರಿಗೆ ರಿಕವರಿ ನೆಪದಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಪೊಲೀಸರ ಶೋಷಣೆ, ಅಮಾನವೀಯವಾಗಿ ವರ್ತಿಸುತ್ತಿರುವುದರ ಕುರಿತಂತೆ ವಿಧಾನಪರಿಷತ್‌ನಲ್ಲಿ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರಲ್ಲಿ ಜೆಡಿಎಸ್ ಎಂಎಲ್‌ಸಿ ಟಿ.ಎ ಶರವಣ ಅವರು ಪ್ರಶ್ನಿಸಿದ್ದಾರೆ.

ರಿಕವರಿ ನೆಪದಲ್ಲಿ ಪೊಲೀಸರು ನೀಡುತ್ತಿರುವ ಶೋಷಣೆ ತೀವ್ರ ಮಟ್ಟದ್ದಾಗಿದೆ. ಅಲ್ಲಿ ನಡೆಯುವಂತಹ ಸಂಭಾಷಣೆಯನ್ನು ಚಿತ್ರೀಕರಿಸಬೇಕೆಂದಿದ್ದರೂ ಕೂಡ ಪೊಲೀಸರು ನಿಯಮವನ್ನು ಪಾಲಿಸುತ್ತಿಲ್ಲ. ರಿಕವರಿಗೆ ಹೋಗುವಾಗ ಪೊಲೀಸ್ ಡ್ರೆಸ್‌ ಅನ್ನು ಧರಿಸಿ ಹೋಗುತ್ತಿಲ್ಲ. ಅವರ ಜೊತೆ ಮಾನವೀಯತೆಯನ್ನು ಮರೆತು ನಡೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಯುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಈ ವೇಳೆ ಶರವಣ ಅವರು ಒತ್ತಾಯಿಸಿದ್ದಾರೆ.

ಹಲಸೂರು ಗೇಟ್, ಸಿಟಿ ಮಾರ್ಕೆಟ್, ಚಿಕ್ಕಪೇಟೆ, ಅವಿನ್ಯೂ ರಸ್ತೆಗಳಲ್ಲಿ ಈ ರೀತಿಯ ವಸೂಲಿಗಳು ಹೆಚ್ಚುತ್ತಿದೆ. ಬಹುತೇಕ ಉತ್ತರ ಭಾರತದ ಜನರು ಇಲ್ಲಿ ಅಂಗಡಿಯನ್ನು ತೆರೆದು ಜೀವನ ನಡೆಸುತ್ತಿರುತ್ತಾರೆ. ಅವರನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ನಮ್ಮ ರಾಜ್ಯದ ಮೇಲೆ ಅವರಿಗೆ ಬೇಸರ ಮೂಡುವಂತಾಗುತ್ತದೆ. ಅಪರಾಧಿಗಳಿಗೆ ಶಿಕ್ಷೆ ಆಗಬಹುದು ಆದರೆ ಯಾವ ನಿರಪರಾಧಿಗೂ ಅವಮಾನ ಎದುರಿಸುವ ಸಂದರ್ಭ ಬರಬಾರದು ಹಾಗೂ ಶಿಕ್ಷೆ ದೊರಕ ಬಾರದೆಂದು ಟಿ.ಎ ಶರವಣ ಅವರು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನದ ಅಂಗಡಿ ಮಾಲೀಕರಿಗೆ ಪೊಲೀಸರಿಂದ ಕಿರುಕುಳ, ಬೆದರಿಕೆ; ಸದನದಲ್ಲಿ MLC ಟಿ.ಎ ಶರವಣ ಆಕ್ರೋಶ

https://newsfirstlive.com/wp-content/uploads/2023/07/T-A-Sharavana.jpg

Load More