newsfirstkannada.com

‘ತೆನೆ’ ಜೊತೆಗೆ ‘ಕಮಲ’ ದೋಸ್ತಿ.. ನಾಳೆ BJP ಜೊತೆಗಿನ ಮೈತ್ರಿ ಬಗ್ಗೆ ಸಸ್ಪೆನ್ಸ್​ ರಿವೀಲ್​ ಮಾಡುತ್ತಾ JDS?​

Share :

09-09-2023

  ನಾಳೆ ಜೆಡಿಎಸ್​​ ಸಭೆಯಲ್ಲಿ ಪ್ರಕಟ ಆಗುತ್ತಾ ಮೈತ್ರಿ?

  ಸಿದ್ದು-ಡಿಕೆ ಓಟಕ್ಕೆ ಬ್ರೇಕ್​​​, ಹಳೇ ಮೈಸೂರು ಮೇಲೆ ಹಿಡಿತ

  ಕಮಲ-ದಳ’ ದೋಸ್ತಿ ಕನ್ಫರ್ಮ್​ ಮಾಡಿದ ಬಿಎಸ್​ವೈ

ವಿಧಾನಸಭಾ ಹೀನಾಯ ಸೋಲು, ಬಿಜೆಪಿ-ಜೆಡಿಎಸ್​​ನ್ನ ಹತ್ತಿರಕ್ಕೆ ತಂದಿದೆ.. ವಿಧಾನಸಭೆ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಬಿಜೆಪಿ, ತೆನೆ ಹೊರುವ ಲೆಕ್ಕಾಚಾರದಲ್ಲಿದೆ.. ದಳಪತಿ ಸಹ ಕಮಲಪತಿ ಆಗಿ ಚೇಂಜ್​​​ ಆಗುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಮಂಡ್ಯದಿಂದ ಡೆಲ್ಲಿವರೆಗೂ ಮೈತ್ರಿ ಮಂಥನ ಶುರುವಾಗಿದೆ.

ಶೋ ಮಿ ಒನ್​ ಪಾರ್ಟಿ ದ್ಯಾಟ್​​ ಹ್ಯಾಸ್​​ ನಾಟ್​​ ಅಸೋಸಿಯೆಟೇಡ್​​ ವಿಥ್​ ಬಿಜೆಪಿ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಜೊತೆ ಗುರುತಿಸಿಕೊಳ್ಳದ ಒಂದಾದ್ರೂ ಪಕ್ಷವನ್ನ ತೋರಿಸಿ. ಹೀಗೆ ಬೊಟ್ಟು ಮಾಡಿ ಅವತ್ತು ಕುಟುಕಿದ್ದ ಗೌಡರ ಭವಿಷ್ಯದ ರಾಜಕೀಯ ಹೆಜ್ಜೆಗಳು ಅವತ್ತೆ ಸ್ಪಷ್ಟವಾಗಿದ್ವು. ಈ ಸಿಟ್ಟು ಅಸಹನೆಗೆ ಕಾರಣ ಕಾಂಗ್ರೆಸ್​​ನ ಸೈಲೆಂಟ್​​ ಆಪರೇಷನ್​​​ ಹಸ್ತದ ಆಟ. ಈ ಆಟಕ್ಕೆ ಬ್ರೇಕ್​​​ ಹಾಕಲು ದಳಪತಿಗೆ ಈ ದಾಳ ಉರುಳಿಸೋದು ಅನಿವಾರ್ಯ ಆಗಿದೆ. ದೂರದ ಡೆಲ್ಲಿಯಲ್ಲಿ ಮಾಜಿ ಪ್ರಧಾನಿ ಗೌಡರು ಶೇಕ್​ಹ್ಯಾಂಡ್​​ ಮಾಡಿದ್ದಾರೆ.

ಸಿದ್ದು-ಡಿಕೆ ಓಟಕ್ಕೆ ಬ್ರೇಕ್​​​, ಹಳೇ ಮೈಸೂರು ಮೇಲೆ ಹಿಡಿತ!

ವಿಧಾನಸಭೆ ಸೋತ ಬಳಿಕ ದಳಪತಿಗಳು ಮೈಕೊಡವಿ ಎದ್ದಿದ್ದಾರೆ. ಸೋಲನ್ನೇ ಸವಾಲಾಗಿ ಸ್ವೀಕರಿಸಿದ ದಳ​ ನಾಯಕರು, ಗೆಲುವಿನ ಹಸಿವು ನೀಗಿಸಿಕೊಳ್ಳಲು ಪಣತೊಟ್ಟಿದ್ದಾರೆ. ಈ ಹಸಿವಿನ ಜೊತೆ ಸುರಕ್ಷೆಯ ಆತಂಕದಲ್ಲಿ ದಳಪತಿಗಳು ಇದ್ದಂತೆ ಕಾಣಿಸ್ತಿದೆ. ಸತತ ಸೋಲಿನಿಂದ ಸಂಪನ್ಮೂಲ, ಸಮಯ, ಕಾರ್ಯಕರ್ತರ ವಿಶ್ವಾಸ ಗಳಿಸಲು ಸಾಧ್ಯವಾಗ್ತಿಲ್ಲ. ಈ ಕಾರಣಕ್ಕೆ ನಿರ್ದಿಷ್ಟ ಕ್ಷೇತ್ರಗಳತ್ತ ಗುರಿ ಇಟ್ಟು ದಾಳಿ ನಡೆಸಲು ತೆನೆ ಪಾರ್ಟಿ ಸಿದ್ಧವಾದಂತಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಗತ ವೈಭವಕ್ಕೆ ಜಾರಲು, ಕಮಲ ಪಾರ್ಟಿಯ ಊರುಗೋಲು ಬಯಸಿದೆ.

ಫೈನಲ್​​​​ ರಿಪೋರ್ಟ್​​ಗೆ ಸಜ್ಜಾದ ಕಮಲ-ದಳ!

ಸದ್ಯಕ್ಕೆ ಒಂದು ಗೋಲು ಹೊಡೆದಿರುವ ಗೌಡ್ರು, ಸೀಟು ಹಂಚಿಕೆಯನ್ನ ಮಾಜಿ ಸಿಎಂ ಹೆಚ್​ಡಿಕೆ ಹೆಗಲಿಗೆ ಹಾಕಿದ್ದಾರೆ. ಸೆಪ್ಟಂಬರ್ 13ನೇ ತಾರೀಖು ಕಮಲ-ದಳ ಮೈತ್ರಿ ಬಗ್ಗೆ ಕಂಪ್ಲೀಟ್​ ರಿಪೋರ್ಟ್​ ಹೊರ ಬೀಳಲಿದೆ. ದೆಹಲಿಯಲ್ಲಿ ಬುಧವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಜೊತೆ ಜೆಡಿಎಸ್​ ಉಪ ವರಿಷ್ಠ ಮಾಜಿ ಸಿಎಂ ಹೆಚ್​ಡಿಕೆ ಭೇಟಿ ಆಗುವ ಸಾಧ್ಯತೆ ಇದೆ. ಅದೇ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಫೈನಲ್ ಆಗಲಿದೆ ಅನ್ನೋ ನಿರೀಕ್ಷೆ ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ.

ಕಾಂಗ್ರೆಸ್​​ ಅಧಿಕಾರಕ್ಕೆ ಬಂದ ಬಳಿಕ ಜೆಡಿಎಸ್​​ನಲ್ಲಿ ಅಸ್ತಿತ್ವದ ಕಂಟಕ ಶುರುವಾಗಿದೆ. ಎರಡು ದಿನದ ಹಿಂದಷ್ಟೇ ಮಾಜಿ ಪ್ರಧಾನಿ ದೇವೇಗೌಡ್ರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿತ್ತು. ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಎಲ್ಲರೂ ಸೇರಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚಿಸಿದ್ದರು. ಲೋಕಸಭೆ ಚುನಾವಣೆ, ಬಿಜೆಪಿ ಜೊತೆಗಿನ ಮೈತ್ರಿ, ಪಕ್ಷದ ಭವಿಷ್ಯದ ಕುರಿತು ನಾಳೆ ಬೆಳಗ್ಗೆ 10:30ಕ್ಕೆ ಅರಮನೆ ಮೈದಾನದಲ್ಲಿ ಜೆಡಿಎಸ್​​​​ ಸಮಾವೇಶ ಸೇರ್ತಿದೆ.. ಈ ಸಮಾವೇಶದಲ್ಲೇ ಸ್ಪಷ್ಟ ನಿರ್ಧಾರವೊಂದು ಪ್ರಕಟ ಆಗಲಿದೆ.

ದಳಪತಿಯ ಲಾಭದ ಲೆಕ್ಕಾಚಾರ!

ಚರ್ಚೆ 1 : ಹಳೆ ಮೈಸೂರು ಭಾಗದದಲ್ಲಿ ಜೆಡಿಎಸ್- ಕಾಂಗ್ರೆಸ್ ನಡುವೆ ನೇರ ಫೈಟ್
ಚರ್ಚೆ 2 : ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸೆಳೆದ ಮತ ಮರಳಿ ಪಡೆಯಬಹುದು
ಚರ್ಚೆ 3 : ಬಿಜೆಪಿ ಬೆಂಬಲಿಸಿದ್ರೆ, ಸಾಂಪ್ರದಾಯಿಕ ವಿರೋಧಿ ‘ಕೈ’ ಸೋಲಿಸಬಹುದು
ಚರ್ಚೆ 4 : ಹಳೇ ಮೈಸೂರು ಭಾಗದಲ್ಲಿ ಕಳೆದುಕೊಂಡ ವಿಶ್ವಾಸ ಮತ್ತೆ ಗಳಿಸಬಹುದು
ಚರ್ಚೆ 5 : ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಜೆಡಿಎಸ್​​ಗೆ ಹೆಚ್ಚು ಬಲ
ಚರ್ಚೆ 6 : ಸಂದರ್ಭ ಬಂದ್ರೆ ಕೇಂದ್ರದ ಬಿಜೆಪಿ ಸರ್ಕಾರದ ಭಾಗವಾಗಿ ಇರಬಹುದು
ಚರ್ಚೆ 7 : ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸದಂತೆ ತಡೆಗೋಡೆ
ಚರ್ಚೆ 8 : ಕಳೆದ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸೋತಿರುವ ದಳ

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಫೈಟ್ ಇದೆ. ಕಳೆದ ಚುನಾವಣೆಯಲ್ಲಿ ಅದೇ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸೆಳೆದ ಮತಗಳನ್ನ ಮೈತ್ರಿಯಾದ್ರೆ ಮರಳಿ ಪಡೆಯುವ ಲೆಕ್ಕಾಚಾರ ದಳಪತಿ ಹೊಂದಿದ್ದಾರೆ. ಬಿಜೆಪಿ ಬೆಂಬಲಿಸಿದ್ರೆ, ಸಾಂಪ್ರದಾಯಿಕ ವಿರೋಧಿ ಕಾಂಗ್ರೆಸ್​​ನ ಈ ಮೂಲಕ ಸೋಲಿಸೋದು ಸಲೀಸು. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಕಳೆದುಕೊಂಡ ವಿಶ್ವಾಸವನ್ನ ಮತ್ತೆ ಗಳಿಸಬಹುದು. ಹಾಗೇನಾದ್ರೂ ಆದ್ರೆ, ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಜೆಡಿಎಸ್​​ಗೆ ಹೆಚ್ಚು ಬಲ ಸಿಕ್ಕಂತಾಗಲಿದೆ. ಸಂದರ್ಭ ಬಂದ್ರೆ ಕೇಂದ್ರದ ಬಿಜೆಪಿ ಸರ್ಕಾರದ ಭಾಗವಾಗಿಯೂ ಇರಬಹುದು. ಇನ್ನು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸದಂತೆ ಮೈತ್ರಿ ಮೂಲಕ ತಡೆಗೋಡೆ ನಿರ್ಮಿಸಿದಂತೆಯೂ ಆಗಲಿದೆ. ಕಳೆದ ಬಾರಿ ಮೈತ್ರಿಯಿಂದ ಜಸ್ಟ್​ ಒಂದು ಸ್ಥಾನ ಗೆದ್ದಿದ್ದ ತೆನೆ ಪಾರ್ಟಿ, ಈಗ ಬಿಜೆಪಿ ಮೈತ್ರಿಯಿಂದ ನಾಲ್ಕು ಸ್ಥಾನಕ್ಕೆ ಬೇಡಿಕೆ ಒಡ್ಡಿದೆ.

ಇನ್ನು, ಲೋಕಸಭಾ ಚುನಾವಣೆಯಲ್ಲಿ ಕಮಲ-ತೆನೆ ಮೈತ್ರಿಗೆ ಕಾಂಗ್ರೆಸ್​​ ನಾಯಕರು ತಿರುಗೇಟು ನೀಡಿದ್ದಾರೆ.. ಭಯಭೀತಿ ಈ ಎರಡು ಪಕ್ಷಗಳಿಗೆ ಜನರೇ ಉತ್ತರ ನೀಡ್ತಾರೆ ಅಂತ ಟಾಂಗ್​ ನೀಡಿದ್ದಾರೆ.

ಜೆಡಿಎಸ್ ಬಿಜೆಪಿ ಮೈತ್ರಿ ಕುರಿತು ಮಾತುಕತೆ ಒಂದೆಡೆ ನಡೆಯುತ್ತಿದ್ರೆ, ಮತ್ತೊಂದೆಡೆ ಬಿಜೆಪಿ ಚುನಾವಣಾ ಪ್ರಚಾರದ ಆರಂಭಕ್ಕೆ ಸಿದ್ದತೆ ಮಾಡಿಕೊಳ್ತಿದೆ.. ಸೆಪ್ಟೆಂಬರ್​​ 16 ರಂದು ಪಕ್ಷ ಸಂಘಟನೆ ದೃಷ್ಟಿಯಿಂದ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಲಿದ್ದಾರೆ. ಪಕ್ಷದ ನಾಯಕರು ಮುಳಬಾಗಿಲಿನ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ. ದಳದ ದೋಸ್ತಿಯಿಂದ ಕೋಲಾರ ತೆನೆಪಾಲಾಗುವ ಸಾಧ್ಯತೆ ಇದೆ. ಹಾಗಾಗಿ ಸಂಸದ ಮುನಿಸ್ವಾಮಿ, ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಅಂತ ಹೇಳಿಕೊಂಡಿದ್ದಾರೆ.

1999ರಲ್ಲಿ ಜನ್ಮತಾಳಿದ ಜೆಡಿಎಸ್​ಗೆ ಜಾತ್ಯಾತೀತ ಸಿದ್ಧಾಂತದ ಬುನಾದಿ ತೋಡಿದ ಗೌಡ್ರು, ಮೊದಲ ಬಾರಿಗೆ ಕಮಲಪತಿ ಆಗಿ ಗುರುತಿಸಿಕೊಳ್ಳಲಿದ್ದಾರೆ.. ಒಟ್ಟಾರೆ, ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿ ಪರ್ವಕ್ಕೆ ಹಸ್ತಾಕ್ಷರವಾಗಿದೆ. ಬಿಜೆಪಯಿಂದ ಸಾಲು ಸಾಲು ಹೇಳಿಕೆಗಳು ಪ್ರಕಟವಾಗಿವೆ. ಆದ್ರೆ, ಅಧಿಕೃತವಾಗಿ ಗೌಡರ ಹೇಳಿಕೆಗಾಗಿ ಎಲ್ಲರ ದೃಷ್ಟಿನೆಟ್ಟಿದೆ. ಅಷ್ಟಕ್ಕೂ ಗೌಡರಿಡುವ ಯಾವುದೇ ಹೆಜ್ಜೆ ಇತಿಹಾಸ ಪುಟದ ಭಾಗವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ತೆನೆ’ ಜೊತೆಗೆ ‘ಕಮಲ’ ದೋಸ್ತಿ.. ನಾಳೆ BJP ಜೊತೆಗಿನ ಮೈತ್ರಿ ಬಗ್ಗೆ ಸಸ್ಪೆನ್ಸ್​ ರಿವೀಲ್​ ಮಾಡುತ್ತಾ JDS?​

https://newsfirstlive.com/wp-content/uploads/2023/09/Modi-HD-Deveogowda.jpg

Load More