newsfirstkannada.com

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಿಚಾರದಲ್ಲಿ ಜೆಡಿಎಸ್ ಮಾಸ್ಟರ್ ಪ್ಲಾನ್.. ತೆರೆಮರೆಯಲ್ಲೇ ತಂತ್ರ ಹೆಣೆದ ತೆನೆ ಬಳಗ..!

Share :

Published September 13, 2023 at 9:33am

    ಜೆಡಿಎಸ್ ಹಾಗೂ ಬಿಜೆಪಿ ನಡುವೆ ಲೋಕಸಭೆ ಎಲೆಕ್ಷನ್​ಗೆ ಮೈತ್ರಿ

    ಎರಡು ಪ್ರಬಲ ಸಮುದಾಯದ ವೋಟ್​ಗಳ ಸೆಳೆಯುವ ಪ್ಲಾನ್

    ಜೆಡಿಎಸ್ ಸೂಚಿಸುತ್ತಿರೋ ರಾಜ್ಯಾಧ್ಯಕ್ಷ ಅಭ್ಯರ್ಥಿ ಯಾರು ಗೊತ್ತಾ..?

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಖಚಿತವಾಗಿದೆ. ಚುನಾವಣೆ ಪ್ಲಾನ್ ಕರ್ನಾಟಕ ಬಿಜೆಪಿಯಲ್ಲಿ ಜೋರಾಗಿದ್ದರೂ, ರಾಜ್ಯಾಧ್ಯಕ್ಷರ ಆಯ್ಕೆ ಮಾತ್ರ ಇನ್ನೂ ಆಗಿಲ್ಲ. ಈ ಹುದ್ದೆ ಯಾರಿಗೆ ಅನ್ನೋ ಪ್ರಶ್ನೆ ಕಾಡುತ್ತಿರುವ ಹೊತ್ತಿನಲ್ಲಿಯೇ ಸ್ನೇಹ ಚಾಚಿರುವ ಜೆಡಿಎಸ್, ​ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲೂ ಲಾಭ-ನಷ್ಟದ ಲೆಕ್ಕಾಚಾರ ಹಾಕಿದ್ಯಂತೆ.

ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷರ ಪಟ್ಟ ಸಿಕ್ಕಿದ್ರೆ ಹೆಚ್ಚು ಲಾಭ ಅನ್ನೋ ಲೆಕ್ಕಾಚಾರದಲ್ಲಿ ಇದ್ಯಂತೆ. ವಿಜಯೇಂದ್ರ ಅಧ್ಯಕ್ಷರಾದರೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಲಾಭವಾಗಲಿದೆ ಎಂದು ತೆನೆ ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಚರ್ಚೆ ಬೆನ್ನಲ್ಲೇ ಎರಡೂ ಪ್ರಬಲ ಸಮುದಾಯಗಳ ವೋಟ್ ಕ್ರೂಢಿಕರಿಸಲು ಪ್ಲಾನ್ ಕೂಡ ನಡೆಯುತ್ತಿದೆ. ಒಕ್ಕಲಿಗ, ಲಿಂಗಾಯತ ಹಾಗೂ ಯಡಿಯೂರಪ್ಪ ಜೊತೆಗಿರುವ ಸಾಂಪ್ರದಾಯಿಕ ವೋಟ್ ಪಡೆಯಲು ಜೆಡಿಎಸ್ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಲೋಕಸಭಾ ಚುನಾವಣೆ ಪೂರ್ವ ಮೈತ್ರಿಯಲ್ಲಿ ನಾಲ್ಕೈದು ಕ್ಷೇತ್ರವನ್ನು ನೀಡುವಂತೆ ಬಿಜೆಪಿ ಬಳಿ ಡಿಮ್ಯಾಂಡ್ ಮಾಡಿದೆ.

ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರು ಭಾಗದಲ್ಲಿ ಲಿಂಗಾಯತ ವೋಟ್ ಜೊತೆಗೆ ಯಡಿಯೂರಪ್ಪ ಅವರ ವರ್ಚಸ್ಸು ಇದೆ. ಯಡಿಯೂರಪ್ಪರ ವರ್ಚಸ್ಸನ್ನು ವೋಟ್ ಆಗಿ ಬಳಸಿಕೊಳ್ಳಲು ಜೆಡಿಎಸ್ ಪ್ಲಾನ್ ಮಾಡಿದೆ. ಹೀಗಾಗಿ ಬಿ.ವೈ ವಿಜಯೇಂದ್ರ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿದರೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳ ಜೊತೆ ಜೊತೆಗೆ ಲಿಂಗಾಯತ ವೋಟ್ ಕೂಡ ಜೆಡಿಎಸ್​ಗೆ ಬರಲಿದೆ ಅನ್ನೋದು ಜೆಡಿಎಸ್ ನಾಯಕರ ಅಭಿಪ್ರಾಯವಾಗಿದೆ. ಅದರಂತೆ ಜೆಡಿಎಸ್​ನ ನಾಯಕರು ವರಿಷ್ಠರ ಮುಂದೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಹೇಗಿದ್ದರೂ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಜೆಡಿಎಸ್ ಪರ ಇವೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ್ರೆ ಒಕ್ಕಲಿಗ ಜೊತೆ ಲಿಂಗಾಯತ ಹಾಗೂ ಯಡಿಯೂರಪ ಬೆಂಬಲಿತ ವೋಟ್​ಗಳು ಮತ್ತಷ್ಟು ಸರಾಗ ಆಗಲಿದೆ ಅನ್ನೋದು ಜೆಡಿಎಸ್ ಲೆಕ್ಕಾಚಾರ.
ಈಗಾಗಲೇ ಬಿಜೆಪಿ ಮನೆಯಲ್ಲಿ ಯಡಿಯೂರಪ್ಪ ಅವರನ್ನು ದೂರವಿಟ್ಟ ಪರಿಣಾಮ ಸಾಕಷ್ಟು ಲಿಂಗಾಯತ ವೋಟ್ ದೂರವಾಗಿದೆ. ಒಕ್ಕಲಿಗ ಕೋಟೆಯಲ್ಲೂ ಕೆಲ ಸಾಂಪ್ರದಾಯಿಕ ಲಿಂಗಾಯತ ವೋಟ್ ಇದೆ. ಹೀಗಾಗಿ ಬಿಜೆಪಿಯಿಂದ ನಮ್ಮ ಅಭ್ಯರ್ಥಿಗೆ ಸಿಗುವ ಕೆಲವು ಲಿಂಗಾಯತ ಮತ ಡ್ಯಾಮೇಜ್ ಆಗಬಾರದು ಎಂಬುವುದು ಜೆಡಿಎಸ್ ನಾಯಕರ ಆಗ್ರಹ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಿಚಾರದಲ್ಲಿ ಜೆಡಿಎಸ್ ಮಾಸ್ಟರ್ ಪ್ಲಾನ್.. ತೆರೆಮರೆಯಲ್ಲೇ ತಂತ್ರ ಹೆಣೆದ ತೆನೆ ಬಳಗ..!

https://newsfirstlive.com/wp-content/uploads/2023/09/hdkbjp.jpg

Load More