ಬಿಜೆಪಿ ವಿರೋಧಿ ಕೂಟದಿಂದಲೇ ‘ದಳಪತಿ’ ಔಟ್!
ಮೈತ್ರಿಕೂಟದಿಂದ ದಳ ಹೊರಗಿಟ್ಟು ರಾಜಕಾರಣ!
ದಳಪತಿಗಳ ಮೇಲೆ ಮುಗಿಬಿದ್ದು ‘ಕೈ’ ಡಬಲ್ ಗೇಮ್
ಬೆಂಗಳೂರು: ರಾಜಕೀಯ ಕೃಷಿಯಲ್ಲಿ ಆರು ದಶಕ ಕಳೆದ ಗೌಡರಿಗೆ ಇದು ಸಂದಿಗ್ಧ ಕಾಲ. ಮೊದಲ ಬಾರಿಗೆ ಬಿಜೆಪಿ ವಿರೋಧಿ ಕೂಟದಿಂದಲೇ ದಳಪತಿ ನೇತೃತ್ವದ ಜೆಡಿಎಸ್ ಔಟ್ ಆಗಿದೆ. ನಿತೀಶ್ ನೇತೃತ್ವದಲ್ಲಿ ಜಂಟಿ ಯುದ್ಧಕ್ಕೆ ಸನ್ನದ್ಧವಾಗ್ತಿರುವ ನವ ಕೂಟ, ದಳಪತಿಗೆ ಆಹ್ವಾನ ನೀಡಿಲ್ಲ. ಇನ್ನೊಂದ್ಕಡೆ, ಬಿಜೆಪಿ ಜೊತೆ ಮೈತ್ರಿ ಸುಳಿವು ಸಿಕ್ಕಿದ್ದು, ಕಾಂಗ್ರೆಸ್ಗೆ ಶಿರುಂಡೆ ಸಿಕ್ಕಷ್ಟೇ ಖುಷಿ ಆಗಿದೆ.
ಶೋ ಮಿ ಒನ್ ಪಾರ್ಟಿ, ಅಸೋಸಿಯೇಟ್ ವಿಥ್ ಬಿಜೆಪಿ.ರಾಷ್ಟ್ರಮಟ್ಟದಲ್ಲಿ ಬಿಜೆಪಿ ಜೊತೆ ಗುರುತಿಸಿಕೊಳ್ಳದ ಒಂದಾದ್ರೂ ಪಕ್ಷವನ್ನ ತೋರಿಸಿ. ಹೀಗೆ ಬೊಟ್ಟು ಮಾಡುತ್ತಾ ಕುಟುಕಿದ್ದ ಮಾಜಿ ಪ್ರಧಾನಿ ದೇವೇಗೌಡರು, ಭವಿಷ್ಯದ ರಾಜಕೀಯ ಲೆಕ್ಕಾಚಾರಗಳನ್ನ ಭಿನ್ನವಾಗಿ ವಿಶ್ಲೇಷಿಸಿದ್ದರು. ತಮ್ಮ ಪಕ್ಷದ ನಡೆ, ನುಡಿ ಬಗ್ಗೆ ಸಸ್ಪೆನ್ಸ್ ಆಗಿಯೇ ಇಟ್ಟ ಹೆಜ್ಜೆಗಳನ್ನ ಗುರುತಿಸುವಂತಿತ್ತು.
ದಳಪತಿಗಳ ಮೇಲೆ ಮುಗಿಬಿದ್ದು ಕಾಂಗ್ರೆಸ್ ಡಬಲ್ ಗೇಮ್!
ವಿಧಾನಸಭಾ ಸೋಲಿನ ಬೆನ್ನಲ್ಲೇ ಬಿಜೆಪಿ ಲೋಕಸಭೆಗೆ ತೆರೆಮರೆ ಸಿದ್ಧತೆ ಆರಂಭಿಸಿದೆ. ಕಳೆದ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಬಿಜೆಪಿ, ತೆನೆ ಜೊತೆ ಮೈತ್ರಿ ಲೆಕ್ಕಾಚಾರದಲ್ಲಿದೆ. ಇತ್ತ, ಸೋಲನ್ನೇ ಸವಾಲಾಗಿ ಸ್ವೀಕರಿಸಿದ ಜೆಡಿಎಸ್, 2024ರಲ್ಲಿ ಬೇರೆ ಗುರಿಯೊಂದಿಗೆ ರಹಸ್ಯ ಹೆಜ್ಜೆ ಇಟ್ಟಿದೆ. ಈ ಹೆಜ್ಜೆಯ ಗೆಜ್ಜೆನಾದ ಕೇಳಿಸಿದ್ದು ಕಳೆದ ತಿಂಗಳು ಗೌಡರು ಆಡಿದ ಅದೊಂದು ಮಾತು.
ಕಳೆದ ತಿಂಗಳು ಪಾಟ್ನಾದಲ್ಲಿ ಬಿಜೆಪಿ ವಿರೋಧಿ ಕೂಟ ಒಗ್ಗಟ್ಟಿನ ಮಂತ್ರ ಪಠಿಸಿತ್ತು. ಅದೇ ಹೊತ್ತಲ್ಲಿ ಗೌಡರು ಆಡಿದ ಮಾತುಗಳು, ದಿಕ್ಕು ದೆಸೆಯನ್ನ ಜಾತ್ಯಾತೀತ ಪಾರ್ಟಿ ಬದಲಿಸುವ ಸುಳಿವು ನೀಡಿತ್ತು.
‘ಬಿಜೆಪಿ ಜೊತೆ ಸೇರದ ಒಂದು ಪಕ್ಷ ತೋರಿಸಿ’ ಎಂಬ ಹೆಚ್ಡಿಡಿಯ ಒಂದು ಮಾತು ರಾಜ್ಯ ಕಾಂಗ್ರೆಸ್ ಪಾಲಿಗೆ ಆಹಾರ ಆಗಿದ್ದು, ದಳಪತಿಗಳ ವಿರುದ್ಧ ತಿರುಗಿ ಬೀಳಲು ಕಾರಣವಾಗಿದೆ. ನಡು ಮಧ್ಯಾಹ್ನ ಟ್ವೀಟ್ ಮಾಡಿದ ಸಚಿವ ದಿನೇಶ್ ಗುಂಡೂರಾವ್, ಜೆಡಿಎಸ್ ಬೆನ್ನಿಗೆ ತಿವಿದಿದ್ದಾರೆ. ಬಿಜೆಪಿಯ ಬಿ ಟೀಮ್, ಜಾತ್ಯಾತೀತದ ನಕಲಿ ಶಾಮ ಅಂತ ಗೇಲಿ ಮಾಡಿದ್ದಾರೆ.
2
JDS ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ.2006 ರಲ್ಲಿ BJP ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ HDK ಎಳ್ಳು ನೀರು ಬಿಟ್ಟಿದ್ದರು.
ಆಗಲೇ JDSನ ಅವನತಿ ಶುರುವಾಗಿದ್ದು.
2004ರಲ್ಲಿ 59 ಸ್ಥಾನ ಗೆದ್ದಿದ್ದ JDS ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯಾತೀತ ಸಿದ್ದಾಂತವೇ ಕಾರಣ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 16, 2023
ಬಿಜೆಪಿ ಬಿ ಟೀಂ ಜೆಡಿಎಸ್ ಎಂದು ಅನೇಕ ಬಾರಿ ಹೇಳಿದ್ದೆವು. ಹೆಚ್ಡಿಕೆ ನಮ್ಮ ಮಾತು ಸತ್ಯ ಎಂಬುದನ್ನ ನಿರೂಪಿಸಲು ಹೊರಟಿದ್ದಾರೆ. ಜೆಡಿಎಸ್ಗೆ ಯಾವುದೇ ತತ್ವ ಸಿದ್ದಾಂತಗಳಿಲ್ಲ. ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್ಗೆ ಯಾವ ಸಿದ್ದಾಂತವಿದೆ? ಅದೊಂದು ಅವಕಾಶವಾದಿ ಪಕ್ಷ. ಅಧಿಕಾರಕ್ಕಾಗಿ ಯಾರ ಜೊತೆಗಾದ್ರೂ ಸೈ. ಜೆಡಿಎಸ್ ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ. ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡ್ತಿರುವ ಹೆಚ್ಡಿಕೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತ ವಿಪಕ್ಷ ನಾಯಕನಾಗಬಹುದು. ಈ ಮೂಲಕವಾದ್ರೂ ಹೆಚ್ಡಿಕೆಯವರ ಸುಳ್ಳು ಜಾತ್ಯಾತೀತತೆಯ ನಕಲಿ ಶ್ಯಾಮನ ಅವತಾರ ಕೊನೆಯಾಗಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ವರಿಷ್ಠರು-ಗೌಡ್ರ ಮಧ್ಯೆ ನಡೆದಿದ್ಯಾ ಮಾತುಕತೆ?
ಹುಬ್ಬಳ್ಳಿಯಲ್ಲಿ ಈ ಮೈತ್ರಿ ಮಾತುಕತೆ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಸುಳಿವು ನೀಡಿದ್ದಾರೆ. ವರಿಷ್ಠರ ಮಾತುಕತೆ ಬಳಿಕ ಮುಂದಿನ ರಾಜಕೀಯ ಬೆಳವಣಿಗೆ ಅಂತ ಪ್ರತಿಕ್ರಿಯಿಸಿದ್ದಾರೆ.
ಮೈತ್ರಿಕೂಟದಿಂದ ಜೆಡಿಎಸ್ ಹೊರಗಿಟ್ಟು ರಾಜಕಾರಣ!?
ಅಷ್ಟಕ್ಕೂ ಆರು ದಶಕಗಳ ಕಾಲ ರಾಜಕಾರಣ ಮಾಡಿದ ಗೌಡರ ಸಿಟ್ಟಿಗೆ ಕಾರಣ, ಮೈತ್ರಿಕೂಟ ನೀಡದ ಆಹ್ವಾನ. ನಾಡಿದ್ದು ನಡೆಯುವ ಮೈತ್ರಿಕೂಟ ಸಭೆಗೆ ಇದುವರೆಗೂ ಜೆಡಿಎಸ್ಗೆ ಆಹ್ವಾನವೇ ನೀಡಿಲ್ಲ. ಪಾಟ್ನಾದ ಸಭೆಗೂ ನಿತೀಶ್ ಆ್ಯಂಡ್ ಟೀಮ್ ಇನ್ವೈಟ್ ಮಾಡಿರಲಿಲ್ಲ. ಇದರ ಹಿಂದೆ ಕಾಂಗ್ರೆಸ್ ಕೈವಾಡ ಇರೋದು ಸ್ಪಷ್ಟ. ಕಾಂಗ್ರೆಸ್ ಗಟ್ಟಿ ಇರುವ ರಾಜ್ಯಗಳಲ್ಲಿ ಬೇರೆ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧವಿಲ್ಲ ಅನ್ನೋದು ಈ ಬೆಳವಣಿಗೆ ಪುಷ್ಠಿ ನೀಡ್ತಿದೆ.
ಒಟ್ಟಾರೆ, ಒಂದೆಡೆ ಬಿಜೆಪಿ ತನ್ನ ಮೈತ್ರಿಯನ್ನು ವಿಸ್ತರಿಸಲು ಮುಂದಾಗಿದೆ. ಈ ದಿಸೆಯಲ್ಲಿ ಜೆಡಿಎಸ್ಗೆ ಗಾಳ ಹಾಕಿದೆ. ಆದ್ರೆ, ಹಳೇ ಮೈಸೂರು ಭಾಗದಲ್ಲಿನ ಸೀಟ್ ಶೇರಿಂಗ್ಗಾಗಿ ದಳ ಇಡುವ ಬೇಡಿಕೆ ಒಪ್ಪಿಕೊಳ್ಳುವ ಸಾಧ್ಯತೆಗಳು ವಿರಳವಾಗಿದ್ದು, ಚೌಕಾಸಿ ನಡೆಯಲಿದೆ.