newsfirstkannada.com

ಜೀಪ್​-ಬೈಕ್​ ನಡುವೆ ಭೀಕರ ಅಪಘಾತ; ಕೂಲಿ ಕಾರ್ಮಿಕರಿಬ್ಬರು ಸಾವು

Share :

10-11-2023

  ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

  ಮಡಿಕೇರಿ ಕಡೆಯಿಂದ ಬಂದ ಜೀಪ್ ಡಿಕ್ಕಿ

  ಕೊತ್ತೇಗಾಲ ಗೇಟ್ ಬಳಿ ನಡೆದ ಅಪಫಾತ

ಮೈಸೂರು: ಜೀಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ಕೊತ್ತೇಗಾಲ ಗೇಟ್ ಬಳಿ ನಡೆದಿದೆ. ಭೀಕರ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಅತ್ತಿಗುಪ್ಪೆ ಗ್ರಾಮದ ನಾಗರಾಜು (48) ಹಾಗೂ ಶಿವರಾಜು (45) ಎಂದು ಗುರುತಿಸಲಾಗಿದೆ.

ಸಾವನ್ನಪ್ಪಿದ ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ಹುಣಸೂರು ಕಡೆಯಿಂದ ಸ್ವಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬಂದ ಜೀಪ್ ಡಿಕ್ಕಿ ಹೊಡೆದಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೀಪ್​-ಬೈಕ್​ ನಡುವೆ ಭೀಕರ ಅಪಘಾತ; ಕೂಲಿ ಕಾರ್ಮಿಕರಿಬ್ಬರು ಸಾವು

https://newsfirstlive.com/wp-content/uploads/2023/11/Jeep-And-bike.jpg

Load More