newsfirstkannada.com

×

‘ವೀರ ಮದಕರಿ’ಯಲ್ಲಿ ಕಿಚ್ಚ ಸುದೀಪ್ ಮಗಳಾಗಿ ನಟಿಸಿದ್ದ ಈ ನಟಿ ಇಂದು ಸ್ಟಾರ್ ಹೀರೋಯಿನ್.. ಯಾರಿವಳು ಸುಂದರಿ..?

Share :

Published August 19, 2023 at 11:01am

    ‘ಧೂಮಂ’ ಚಿತ್ರದಲ್ಲಿ ಮಿಂಚಿದ್ದ ಜೆರುಶಾ ಕ್ರಿಸ್ಟೋಫರ್

    ವೀರ ಮದಕರಿ ಚಿತ್ರದಲ್ಲಿ ನಟಿಸಿದ್ದ ಬೆಂಗಳೂರಿನ ಜೆರುಶಾ

    ಸುಮಾರು 50ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಮಿಂಚಿಂಗು..!

ಕಳೆದ ಒಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ನಟಿ ಜೆರುಶಾ ಕ್ರಿಸ್ಟೋಫರ್ ಸುದ್ದಿ ಆಗುತ್ತಿದ್ದಾರೆ. ಕಳೆದ ಜೂನ್ 23 ರಂದು ತೆರೆ ಕಂಡಿದ್ದ ಪವನ್ ಕುಮಾರ್ ನಿರ್ದೇಶನದ ಫಹಾದ್ ಫಾಸಿಲ್ ನಟನೆಯ ‘ಧೂಮಂ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಇದೀಗ ಈ ನಟಿಯ ಸಂದರ್ಶನ ಒಂದರ ಸಣ್ಣ ತುಣುಕು ವೈರಲ್ ಆಗಿದೆ. ಕಾರಣ, ಜೆರುಶಾ ಕ್ರಿಸ್ಟೋಫರ್ ಹಿಂದೆ ಬಾಲನಟಿಯಾಗಿ ಕಿಚ್ಚ ಸುದೀಪ್ ಚಿತ್ರದಲ್ಲಿ ನಟಿಸಿದ್ದರು ಅನ್ನೋದು. ಹೌದು, ‘ವೀರ ಮದಕರಿ’ ಚಿತ್ರದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದೆ ಎಂದು ಜೆರುಶಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಂದಹಾಗೆ ತೆಲುಗಿನ ‘ವಿಕ್ರಮಾರ್ಕುಡು’ ರಿಮೇಕ್ ಚಿತ್ರ ವೀರ ಮದಕರಿ. ಕಿಚ್ಚ ಸುದೀಪ್ ಹಾಗೂ ರಾಗಿಣಿ ದ್ವಿವೇದಿ ಅಭಿನಯದ ‘ವೀರ ಮದಕರಿ’ 2009ರಲ್ಲಿ ತೆರೆಕಂಡಿತ್ತು. ಅಂದು ಸುದೀಪ್ ಚಿತ್ರದಲ್ಲಿ ಮಗಳಾಗಿ ನಟಿಸಿದ್ದ ನಟಿ, ಇಂದು ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ತುಂಬಾ ಕ್ಯೂಟ್ ಆಗಿ ಮಾತನಾಡುವ ಜೆರುಶಾ, ವೀಕ್ಷಕರನ್ನು ಇಂಪ್ರೆಸ್​ ಮಾಡ್ತಿದ್ದಾರೆ.

ಬೆಂಗಳೂರಿನವರಾದ ಇವರು, ಜೆರುಶಾ ಹಲವು ಜಾಹೀರಾತುಗಳಲ್ಲೂ ನಟಿಸಿದ್ದಾರೆ. ಸಂದರ್ಶನದ ವಿಡಿಯೋ ತುಣುಕನ್ನು 7 ದಿನಗಳ ಹಿಂದಷ್ಟೇ ಇನ್​ಸ್ಟಾಗ್ರಾಮ್​​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. 23 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದ್ದು, ಫಾಲೋವರ್ಸ್​ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ನಿಮಗೆ ಕನ್ನಡ ಕೂಡ ಬರುತ್ತಾ? ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಅಂದು ಸುದೀಪ್​ಗೆ ಮಗಳಾಗಿ ನಟಿಸಿದ್ದೀರಿ. ಇವತ್ತು ಹೀರೋಯಿನ್ ಕೂಡ ಆಗಬಹುದು ಎಂದಿದ್ದಾರೆ.

View this post on Instagram

A post shared by Adarsh Sakare (@adarshsakare)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ವೀರ ಮದಕರಿ’ಯಲ್ಲಿ ಕಿಚ್ಚ ಸುದೀಪ್ ಮಗಳಾಗಿ ನಟಿಸಿದ್ದ ಈ ನಟಿ ಇಂದು ಸ್ಟಾರ್ ಹೀರೋಯಿನ್.. ಯಾರಿವಳು ಸುಂದರಿ..?

https://newsfirstlive.com/wp-content/uploads/2023/08/VEERAMADAKARI.jpg

Load More