newsfirstkannada.com

ಜೆಟ್ ಏರ್‌ವೇಸ್​​ಗೆ ಬಿಗ್ ಶಾಕ್.. ಬರೋಬ್ಬರಿ 358 ಕೋಟಿ ಮೌಲ್ಯದ ಆಸ್ತಿ ಸೀಜ್ ಮಾಡಿದ ಜಾರಿ ನಿರ್ದೇಶನಾಲಯ..!

Share :

02-11-2023

    ಅಕ್ರಮ ಹಣ ವರ್ಗಾವಣೆ ಕೇಸ್​​ನಲ್ಲಿ ಆಸ್ತಿ ಸೀಜ್

    ಜೆಟ್ ಏರ್​​ವೇಸ್​ ಮಾಲೀಕ ನರೇಶ್ ಗೋಯಲ್ ಆಸ್ತಿ ಜಪ್ತಿ

    ಲಂಡನ್, ದುಬೈನಲ್ಲಿರುವ ಆಸ್ತಿಯೂ ಸೀಜ್ ಮಾಡಲಾಗಿದೆ

ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್‌ನ (Jet Airways) ಸಂಸ್ಥಾಪಕ ನರೇಶ್ ಗೋಯಲ್, ಪತ್ನಿ ಅನಿತಾ ಗೋಯಲ್ ಮತ್ತು ಪುತ್ರ ನಿವಾನ್ ಗೋಯಲ್ ವಿರುದ್ಧ ಜಾರಿ ನಿರ್ದೇಶನಾಲಯ (Directorate of Enforcement) ಮಹತ್ವದ ಕ್ರಮಕೈಗೊಂಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಂಡನ್, ದುಬೈ ಮತ್ತು ವಿವಿಧ ರಾಜ್ಯಗಳಲ್ಲಿರುವ ಅವರ ಆಸ್ತಿಗಳನ್ನು ಜಪ್ತಿ ಮಾಡಿದೆ. ವರದಿಗಳ ಪ್ರಕಾರ ಬರೋಬ್ಬರಿ 538 ಕೋಟಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಇವರ ವಿರುದ್ಧ ಜಾರಿ ನಿರ್ದೇಶನಾಲಯ ಪಿಎಂಎಲ್​ಎ (Prevention of Money Laundering Act 2002) ಅಡಿಯಲ್ಲಿ ಎಫ್​ಐಆರ್ ದಾಖಲಿಸಿಕೊಂಡು ಇಡಿ ತನಿಖೆ ನಡೆಸುತ್ತಿದೆ.

ಆಸ್ತಿ ಸೀಜ್ ಮಾಡುವ ಒಂದು ದಿನ ಮುಂಚೆ ಇಡಿ ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಕೆ ಮಾಡಿತ್ತು. ಕೆನರಾ ಬ್ಯಾಂಕ್​ಗೆ 538 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಇ.ಡಿ ಗೋಯಲ್ ದಂಪತಿ ಮತ್ತು ಇತರ ನಾಲ್ಕು ಕಂಪನಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಜೆಟ್ ಏರ್ ಪ್ರೈವೇಟ್ ಲಿಮಿಟೆಡ್, ಜೆಟ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ಜೆಟ್ ಏರ್‌ವೇಸ್ ಲಿಮಿಟೆಡ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಆಗಿದೆ.

ಜೆಟ್ ಏರ್‌ವೇಸ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ 538.05 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಹೇಳಿಕೊಂಡಿದೆ. ಜಪ್ತಿಯಾದ ಆಸ್ತಿಗಳಲ್ಲಿ 17 ವಸತಿ ಫ್ಲಾಟ್‌ಗಳು, ಬಂಗಲೆಗಳು, ಕಮರ್ಷಿಯಲ್ ಪ್ಲೇಸ್​ಗಳು ಸೇರಿವೆ ಇಡಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೆಟ್ ಏರ್‌ವೇಸ್​​ಗೆ ಬಿಗ್ ಶಾಕ್.. ಬರೋಬ್ಬರಿ 358 ಕೋಟಿ ಮೌಲ್ಯದ ಆಸ್ತಿ ಸೀಜ್ ಮಾಡಿದ ಜಾರಿ ನಿರ್ದೇಶನಾಲಯ..!

https://newsfirstlive.com/wp-content/uploads/2023/11/Jet-Airways.jpg

Load More