newsfirstkannada.com

ಬಡ ಹೈನುಗಾರನ ಖಾತೆಗೆ 257 ಕೋಟಿ ರೂಪಾಯಿಗೆ ಜಾಕ್​ಪಾಟ್​; ಬೆಚ್ಚಿಬಿದ್ದ ಅಧಿಕಾರಿಗಳು..

Share :

Published September 3, 2024 at 8:31am

    ಈ ಗ್ರಾಮವೊಂದರಲ್ಲಿ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ

    ಹಣ ಕಳುಹಿಸುತ್ತಿರುವ ವ್ಯಕ್ತಿಯ ಬಗ್ಗೆ ಯಾರಿಗೂ ಗೊತ್ತಿಲ್ಲ

    ಭಾರೀ ಗೋಲ್ಮಾಲ್ ಆಗಿರುವ ಶಂಕೆ, ಪೊಲೀಸರಿಂದ ತನಿಖೆ

ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲೆಯ ರತನ್ ಪುರಿ ಪ್ರದೇಶದ ಗ್ರಾಮವೊಂದರಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನ ಹೆಸರಿನ ಬ್ಯಾಂಕ್ ಖಾತೆಯಲ್ಲಿ 257 ಕೋಟಿ ರೂಪಾಯಿ ನಮೂದು ಪತ್ತೆಯಾಗಿದೆ. ಆದರೆ ಹಣ ಕಳುಹಿಸುತ್ತಿರುವ ವ್ಯಕ್ತಿಯ ಬಗ್ಗೆ ಯುವಕನಿಗೆ ತಿಳಿದಿಲ್ಲ.

ಪ್ರಕರಣ ದಾಖಲಿಸಿಕೊಂಡಿರುವ ಮುಜಾಫರ್​​ನಗರ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಮಾಹಿತಿಗಳ ಪ್ರಕಾರ, ರತನ್​ಪುರಿ ನಿವಾಸಿ ಅಶ್ವಿನಿ ಕುಮಾರ್​​​ ಖಾತೆಗೆ ಹಣ ಹಾಕಲಾಗಿದೆ. ಅಶ್ವಿನಿ ಕುಮಾರ್​​ನಿಂದ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ದಾಖಲೆಗಳನ್ನು ವಂಚಿಸಲಾಗಿದೆ. ಈತ ನೀಡಿದ ದಾಖಲೆಗಳ ಆಧಾರದ ಮೇಲೆ ನಕಲಿ ಖಾತೆ ಮತ್ತು ನಕಲಿ ಕಂಪನಿಯನ್ನು ತೆರೆಯಲಾಗಿದೆ. ಇದರಿಂದ ಜಿಎಸ್​ಟಿಯ ಇ-ವೇ (e-way bill) ಬಿಲ್ಲಿಂಗ್​ನಲ್ಲಿ ವಂಚನೆ ಮಾಡಲಾಗಿದೆ.

ಇದನ್ನೂ ಓದಿ:ಮುಡಾ ಹಗರಣದಲ್ಲಿ ಓರ್ವ ಅಧಿಕಾರಿಯ ತಲೆದಂಡ; ಇತ್ತ ಚಾಮುಂಡಿ ಮೊರೆ ಹೋದ CM

ಜಿಎಸ್​ಟಿ ಅಧಿಕಾರಿಗಳಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಶ್ವಿನಿ ಕುಮಾರ್​ನಿಂದ ಯಾವುದೇ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಂಡಿಲ್ಲ. ಜೊತೆಗೆ ಆತನ ಕುಟುಂಬಸ್ಥರು ಕೂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಯಾವುದೋ ರಾಜಕೀಯ ನಾಯಕನಿಗೆ ಸಂಬಂಧಿಸಿದ ನಕಲಿ ಕಂಪನಿ ಎಂದು ಹೇಳಲಾಗುತ್ತಿದೆ. ತನಿಖೆಯ ನಂತರವೇ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ. ಆದರೆ ಈ ಸುದ್ದಿ ಆ ಊರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಡೇರಿ ನಿರ್ವಾಹಕನ ಮಗನ ಖಾತೆಗೆ ಇಷ್ಟೊಂದು ಹಣ ಬಂದಿದ್ದು ಹೇಗೆ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.

ಇದನ್ನೂ ಓದಿ:ಬಾಲ್ಯದಲ್ಲಿ ತಂದೆಯನ್ನ ಕಳೆದುಕೊಂಡರು, ಅಪಘಾತದಲ್ಲಿ ಕಾಲು ಹೋಯಿತು.. ಕುಗ್ಗದೇ ಭಾರತಕ್ಕೆ 2ನೇ ಬಾರಿಗೆ ಚಿನ್ನ ತಂದ್ಕೊಟ್ಟ ಧೀರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಡ ಹೈನುಗಾರನ ಖಾತೆಗೆ 257 ಕೋಟಿ ರೂಪಾಯಿಗೆ ಜಾಕ್​ಪಾಟ್​; ಬೆಚ್ಚಿಬಿದ್ದ ಅಧಿಕಾರಿಗಳು..

https://newsfirstlive.com/wp-content/uploads/2024/07/Money.jpg

Load More