newsfirstkannada.com

ತೆಲುಗಿನಲ್ಲೂ ಕನ್ನಡದ ಈ ನಟಿಯದ್ದೇ ಹವಾ.. ತೆರೆ ಹಿಂದಿನ ಅಸಲಿ ಕಥೆ ಬಿಚ್ಚಿಟ್ಟ ಪಲ್ಲವಿ ಗೌಡ!

Share :

09-09-2023

    ಅದ್ಭುತ ನಟನೆ ಮೂಲಕ ತೆಲುಗಿನ ಅಂಗಳದಲ್ಲಿ ನಟಿ ಮಿಂಚಿಂಗ್​​

    ತೆಲುಗು ಧಾರಾವಾಹಿಯಲ್ಲಿ ಕನ್ನಡ ನಟಿಯರದ್ದೇ ಹವಾ ಜೋರು!

    ಆ ಕುಟುಂಬದ ರಕ್ಷಣೆಗೆ ನಿಂತಿದ್ದಾಳೆ ಕಿರುತೆರೆ ನಟಿ ಪಲ್ಲವಿ ಗೌಡ!

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಹೆಚ್ಚಾಗಿ ರಾರಾಜಿಸುತ್ತಾ ಇರೋದು ನಮ್ಮ ಕನ್ನಡಿಗರು. ಕಿರುತೆರೆಯಲ್ಲಂತೂ ನಮ್ಮ ಕಲಾವಿದರಿಗೆ ಬಹು ಬೇಡಿಕೆ ಸ್ಥಾನಮಾನವಿದೆ. ತಮ್ಮ ಅದ್ಭುತ ಪ್ರತಿಭೆ ಮೂಲಕ ಭಾಷೆಯ ಬ್ಯಾರಿಯರ್​ ಇಲ್ಲದೆ ತೆಲುಗು ವೀಕ್ಷಕರ ಮನಸ್ಸು ಗೆದ್ದಿರೋ ಚೆಲುವೆ ಎಂದರೆ ಅದು ಜೋಡಿ ಹಕ್ಕಿ ಖ್ಯಾತಿಯ ನಟಿ ಪಲ್ಲವಿ ಗೌಡ.

ಹೌದು, ಇತ್ತೀಚೆಗೆ ಜೀ ತೆಲುಗು ವಾಹಿನಿಯಲ್ಲಿ ಪ್ರಾರಂಭವಾದ ಸೀರಿಯಲ್​ನಲ್ಲಿ ನಟಿ ಪಲ್ಲವಿ ಅವರು ಬ್ಯೂಟಿಫುಲ್​ ಆಗಿರೋ ಪಾತ್ರ ಮಾಡುತ್ತಿದ್ದಾರೆ. ಆ ಸೀರಿಯಲ್​​ ಹೆಸರು ‘‘ನಿಂದು ನೂರೆಲ್ಲ ಸಾಹವಾಸಂ’’​. ಈ ಕತೆಯ ಓಪನಿಂಗ್​​ ಸೀನ್​ ಶೂಟ್​ ಆಗಿದ್ದು ಕೊಡೆಕೆನಲ್​ನಲ್ಲಿ. ಆ ಶೂಟಿಂಗ್​ ಎಕ್ಸ್​ಪಿರಿಯನ್ಸ್​ನ ಶೇರ್​ ಮಾಡಿಕೊಂಡಿದ್ದಾರೆ ನಟಿ ಪಲ್ಲವಿ ಗೌಡ.

ಈ ಸೀರಿಯಲ್​ ಕತೆ ತುಂಬಾ ವಿಭಿನ್ನವಾಗಿದ್ದು, ಇದರಲ್ಲಿ ನಾಯಕಿ ಅನಾಥೆಯಾಗಿರುತ್ತಾಳೆ. ಅನಾಥಾಶ್ರಮದಲ್ಲಿ ಬೆಳೆದ ಹುಡುಗಿಯನ್ನ ಮದುವೆ ಆಗುತ್ತಾನೆ ಆರ್ಮಿ ಆಫಿಸರ್​​. ಕಾಲಾನಂತರ ನಾಯಕಿ ಸಾವನ್ನಪ್ಪುತ್ತಾಳೆ. ಮಕ್ಕಳ ಜವಾಬ್ದಾರಿ ನಾಯಕನ ಮೇಲೆ ಬಿಳುತ್ತೆ. ಆದರೆ ಆತ್ಮವಾಗಿ ಆ ಕುಟುಂಬದ ರಕ್ಷಣೆಗೆ ನಿಲ್ಲುತ್ತಾಳೆ ನಾಯಕಿ ಪಲ್ಲವಿ ಗೌಡ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲುಗಿನಲ್ಲೂ ಕನ್ನಡದ ಈ ನಟಿಯದ್ದೇ ಹವಾ.. ತೆರೆ ಹಿಂದಿನ ಅಸಲಿ ಕಥೆ ಬಿಚ್ಚಿಟ್ಟ ಪಲ್ಲವಿ ಗೌಡ!

https://newsfirstlive.com/wp-content/uploads/2023/09/pallavi-gowda-2.jpg

Load More