newsfirstkannada.com

ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷರು ಬರುತ್ತಿಲ್ಲವೇಕೆ..? ಈ ಬಗ್ಗೆ ಜೋ ಬೈಡನ್ ಹೇಳಿದ್ದೇನು..?

Share :

Published September 4, 2023 at 10:52am

    ಚೀನಾ ಅಧ್ಯಕ್ಷರ ಕಡೆ ಒಲವು ತೋರಿದ ಅಮೆರಿಕ ಅಧ್ಯಕ್ಷ

    ಸೆಪ್ಟೆಂಬರ್ 9, 10 ರಂದು ದೆಹಲಿಯಲ್ಲಿ ಜಿ20 ಶೃಂಗಸಭೆ

    ಶಕ್ತಿಶಾಲಿ ರಾಷ್ಟ್ರಗಳು ಈ ಶೃಂಗಸಭೆಯಲ್ಲಿ ಭಾಗವಹಿಸಲಿವೆ

ನವದೆಹಲಿ: ಭಾರತದಲ್ಲಿ ಇದೆ 9 ರಿಂದ 10ರ ವರೆಗೆ ನಡೆಯುವ ಜಿ20 ಶೃಂಗಸಭೆಯು ಚೀನಾ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವುದು ನನಗೆ ಬೇಸರ ತರಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಮೆರಿಕದ ಡೆಲವೇರ್​ನ ರೆಹೋಬೋತ್ ಬೀಚ್​ನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಚೀನಾದ ಅಧ್ಯಕ್ಷರಾದ ಕ್ಷಿ ಜಿನ್ ಪಿಂಗ್ ಕಡೆಗೆ ಒಲವು ತೋರಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ. ಇದು ನನಗೆ ಅತೀವ ಬೇಸರ ತರಿಸಿದೆ. ಅವರು ಭಾರತಕ್ಕೆ ಬಾರದಿದ್ದರು ನಾನು ಅವರನ್ನು ಭೇಟಿ ಮಾಡಿ ಬರುತ್ತೇನೆ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್

ದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗಾಗಿ ಜೋ ಬೈಡನ್ ಅವರು ಇದೇ ಸೆಪ್ಟೆಂಬರ್ 7 ರಿಂದ 10 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ನಂತರ ಅವರು ಏಷ್ಯಾ ಜೊತೆ ಯುಎಸ್​ನ ಸಂಬಂಧವನ್ನು ಬಲಬಡಿಸುವುದಕ್ಕಾಗಿ ವಿಯೇಟ್ನಾಂಗೆ ಭೇಟಿ ನೀಡಲಿದ್ದಾರೆ. ಭಾತರ ಮತ್ತು ವಿಯೇಟ್ನಾಂ ಎರಡು ಯುಎಸ್​ನ ಸಂಬಂಧಗಳನ್ನು ಬಯಸುತ್ತಾರೆ. ಹೀಗಾಗಿ ಇದು ನಮಗೂ ಸಹಾಯಕವಾಗಬಹುದು ಎಂದು ಜೋ ಬೈಡನ್ ಹೇಳಿದ್ದಾರೆ.

ಭಾರತವು ಜಿ20 ಶೃಂಗಸಭೆಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಿಗೆ ಆತಿಥ್ಯ ವಹಿಸುತ್ತಿದೆ. ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ಈ ಶೃಂಗಸಭೆ ನಡೆಯಲಿದೆ. ಚೀನಾದ ಅಧ್ಯಕ್ಷರು ಹಾಜರಾಗಬಹುದು ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಶೃಂಗಸಭೆ ಆರಂಭವಾದ ಮೇಲೆಯೇ ಎಲ್ಲದಕ್ಕೂ ಉತ್ತರ ಸಿಗಲಿದೆ. ಇನ್ನು ಈ ಶೃಂಗಸಭೆಯ ವ್ಯವಸ್ಥೆಗಳು ದೇಶದ ಪ್ರತಿಷ್ಠೆ ಹಾಗೂ ಪ್ರಧಾನಿ ಮೋದಿಯವರ ಗೌರವವನ್ನು ಉತ್ತುಂಗಕ್ಕೆ ಏರಿಸಲಿವೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷರು ಬರುತ್ತಿಲ್ಲವೇಕೆ..? ಈ ಬಗ್ಗೆ ಜೋ ಬೈಡನ್ ಹೇಳಿದ್ದೇನು..?

https://newsfirstlive.com/wp-content/uploads/2023/09/MODI_US_PRESIDENT.jpg

Load More