/newsfirstlive-kannada/media/post_attachments/wp-content/uploads/2024/11/TIGER-JOHNY.jpg)
ಪ್ರೀತಿ ಪ್ರೇಯಸಿ ಅಂತ ಬಂದಾಗ ಎಂತಹ ದುರ್ಗಮವನ್ನು ದಾಟಬಲ್ಲ. ದುಸ್ಥಿತಿಯನ್ನು ನೀಗಬಲ್ಲವನೂ ಮನುಷ್ಯ ಮಾತ್ರ ಅಂದ್ರೆ ಅದು ನಾವು ಭ್ರಮಿಸಿರುವುದು ಅಷ್ಟೇ. ಪ್ರೀತಿ ಪ್ರೇಮ ಕಾಮಗಳೆಲ್ಲವೂ ಎಲ್ಲ ಪ್ರಾಣಿಗಳ ಹೃದಯದಲ್ಲಿ ಬೆಸೆದುಕೊಂಡಿರುವ ಒಂದು ಅವ್ಯಕ್ತ ಭಾವ. ಇದಕ್ಕೆ ನಿದರ್ಶನವೇ ಮಹಾರಾಷ್ಟ್ರದ ಜಾನಿ ಎಂಬ ಗಂಡು ಹುಲಿ. ಇದು ತನ್ನ ಪ್ರೇಯಸಿಯನ್ನು ಹುಡುಕಿಕೊಂಡು ಸುಮಾರು 300 ಕಿಲೋ ಮೀಟರ್​ ವರೆಗೂ ಪ್ರಯಾಣ ಮಾಡಿದೆ.
ಮಹಾರಾಷ್ಟ್ರದ ತಿಪೇಶ್ವರ ವನ್ಯಜೀವಿ ಅಭಯಾರಣ್ಯದಿಂದ ತೆಲಂಗಾಣದವರೆಗೂ ಈ ಒಂದು ಹುಲಿ ನಡೆದುಕೊಂಡು ಹೋಗಿರುವ ಬಗ್ಗೆ ಹಾಗೂ ಅದರ ಚಲನವನಗಳ ಬಗ್ಗೆ ರೆಡಿಯೋ ಕಾಲರ್​ನಲ್ಲಿ ರೆಕಾರ್ಡ್ ಆಗಿದೆ.
ಜಾನಿ ತನ್ನ ಈ ಪ್ರೇಮಯಾನವನ್ನು ಅಕ್ಟೋಬರ್ ಮೊದಲ ವಾರದಿಂದಲೇ ಆರಂಭಿಸಿದ್ದಾನೆ. ಮಹಾರಾಷ್ಟ್ರದ ನಂದೇದ್ ಜಿಲ್ಲೆಯ ಕಿನ್ವತ್ ತಾಲೂಕಿನಿಂದ ಪ್ರಣಯಕ್ಕಾಗಿ ಈತನ ಪ್ರೇಮ ಪ್ರಯಾಣ ಶುರುವಾಗಿದೆ. ಒಂದೊಂದೇ ಅರಣ್ಯವನ್ನು ದಾಟುತ್ತ. ಗದ್ದೆ ಹೋಲಗಳನ್ನು ದಾಟುತ್ತ ಸಾಗಿದ ಜಾನಿ ಬೋತ್ ಮಂಡಲ, ಅದಿಲಬಾದ್ ಹಾಗೂ ನಿರ್ಮಲ ಜಿಲ್ಲೆಯನ್ನು ದಾಟಿಕೊಂಡು ಹೋಗಿದ್ದಾನೆ. ನಿರ್ಮಲ ಜಿಲ್ಲೆಯಲ್ಲಿ ಕುಂತಾಲಾ, ಸಾರಂಗಪುರ, ಮಮದಾ, ಮತ್ತು ಪೆಂಬಿ ಮಂಡಲ್ಸ್​ಗಳನ್ನು ದಾಟಿ, ಹೆದ್ದಾರಿ, ಕಚ್ಚಾ ರಸ್ತೆ ಹೊಲ ಹೀಗೆ ದಾರಿ ಕಂಡಲ್ಲೆಲ್ಲಾ ತನ್ನ ಹೆಜ್ಜೆಯ ಗುರುತನ್ನು ಮೂಡಿಸಿಕೊಂಡು ಹೋಗಿದ್ದಾನೆ. ಇತ್ತೀಚೆಗಷ್ಟೇ ಹೈದ್ರಾಬಾದ್ ನಾಗಪುರ್ ಹೈವೇ ನಂಬರ್ 44ನ್ನು ಕ್ರಾಸ್ ಮಾಡುವಾಗ ಸಾರ್ವಜನಿಕರಿಗೆ ಕಾಣಿಸಿಕೊಂಡ ಜಾನಿ ಆತಂಕ ಸೃಷ್ಟಿಸಿದ್ದ.
ಇದನ್ನೂ ಓದಿ: 88 ವರ್ಷಗಳ ಹಿಂದಿನ ನಂಬಿಕೆ ಸುಳ್ಳಾಯ್ತು.. ಕಾಳಿಂಗ ಸರ್ಪದ ಮಹಾ ರಹಸ್ಯ ಬಯಲು; ಏನದು ಗೊತ್ತಾ?
ಅರಣ್ಯ ಇಲಾಖೆಯವರು ಹೇಳುವ ಪ್ರಕಾರ ಗಂಡು ಹುಲಿಗಳು ಹೆಣ್ಣು ಹುಲಿಗಳ ದೇಹದಿಂದ ಬಿಡುಗಡೆಯಾಗಿರುವ ಘಮವನ್ನು ಆಘ್ರಾಣಿಸಿಕೊಂಡು 100 ಕಿಲೋ ಮೀಟರ್ ಸಾಗಬಲ್ಲವಂತೆ. ಈ ಒಂದು ಘಮವೇ ಅವುಗಳ ಕೂಡಿಕೆಗೆ ಸಹಕಾರ ಮಾಡಿಕೊಡುತ್ತವೆ ಎಂದು ಅರಣ್ಯ ಇಲಾಖೆಯ ತಜ್ಞರು ಹೇಳುತ್ತಾರೆ. ಗಂಡು ಹುಲಿಗಳು ದೀರ್ಘ ಪ್ರಯಾಣ ಮಾಡುವುದರಲ್ಲಿ ಪರಿಣಿತ, ಹೊಸ ಪ್ರದೇಶಗಳಿಗೆ ಹೋಗುವುದು ಅವುಗಳಿಗೆ ಅತ್ಯಂತ ಸುಲಭ. ಇದೇ ರೀತಿಯಾಗಿ ಜಾನಿ ಪ್ರಯಾಣ ಶುರುವಾಗಿದೆ. ದಾರಿಯಲ್ಲಿ ಹಸಿವು ನೀಗಿಸಿಕೊಳ್ಳಲು ಜಾನಿ ಹಲವು ಜಾನುವಾರುಗಳ ಪ್ರಾಣ ತೆಗೆದಿದ್ದಾನೆ ಎಂದು ಕೂಡ ವರದಿಯಾಗಿದೆ.
ಇದನ್ನೂ ಓದಿ:ಸಾಕಿದ ನಾಯಿಗೋಸ್ಕರ ಮದುವೆ ಕ್ಯಾನ್ಸಲ್ ಮಾಡಿದ ವಧು.. 7 ವರ್ಷದ ಪ್ರೀತಿಗೆ ಸಡನ್ ಟ್ವಿಸ್ಟ್; ಆಗಿದ್ದೇನು?
ಒಂದು ವೇಳೆ ಜಾನಿ ತೆಲಂಗಾಣದ ಕವಾಲಾ ಹುಲಿ ಮೀಸಲು ಅರಣ್ಯ ಪ್ರದೇಶವನ್ನು ತಲುಪಿದ್ದೇ ಆದ್ರೆ ಅದೊಂದು ದೊಡ್ಡ ಟರ್ನಿಂಗ್ ಪಾಯಿಂಟ್ ಆಗಲಿದೆ ಎಂದು ಅರಣ್ಯ ಇಲಾಖೆಯವರು ಹೇಳಿದ್ದಾರೆ. ಮೀಸಲು ಪ್ರದೇಶ ಜಾನಿಯಿಂದ ಕಳ್ಳಬೇಟೆ ಹಾಗೂ ಅದಕ್ಕೆ ನೆಲೆ ನಿಲ್ಲಲು ಜಾಗದ ಸಮಸ್ಯೆ ಎದುರಿಸಿಬಹುದು ಆದ್ರೆ ಜಾನಿಯಿಂದಾಗಿ ಈ ರಿಸರ್ವ್​ ಫಾರೆಸ್ಟ್​ನಲ್ಲಿ ಹುಲಿಗಳ ಸಂತತಿಗಳು ಹೆಚ್ಚಲಿವೆ ಎಂದು ಹೇಳಿದ್ದಾರೆ.
ಸದ್ಯ ಜಾನಿ ಎಂಬ ಗಂಡು ಹುಲಿ ತನ್ನ ಪ್ರಯಾಣವನ್ನು ಉಟ್ನೂರ್​ನ ಲಲ್ತಕೇಡಿ ಗ್ರಾಮದವರೆಗೆ ನಡೆಸಿದೆ ಅಲ್ಲಿಯ ಅನೇಕ ನಾಗರೀಕರ ಕಣ್ಣಿಗೆ ಈ ಹುಲಿ ಬಿದ್ದಿದೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಗಾಬರಿಯಾಗಬೇಡಿ. ಅದು ಬೇಟೆಗೆ ಬಂದಿಲ್ಲ. ಪ್ರೇಮಿಯನ್ನು ಮೀಟ್ ಮಾಡಲು ಬಂದಿದೆ. ನಿಮಗ್ಯಾವ ತೊಂದರೆಯೂ ಇಲ್ಲ ಎಂದು ಹೇಳಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಜಾನಿ ತನ್ನ ಪ್ರೇಮಿಯನ್ನು ಸಂಧಿಸುವುದು ಬಹುತೇಕ ಪಕ್ಕಾ ಎಂದು ಅರಣ್ಯ ಇಲಾಖೆ ಹೇಳಿದೆ. ಒಂದು ವೇಳೆ ಸಂಧಿಸಿದ್ದೇ ಆದಲ್ಲಿ ಇದು ಅಪ್ಪಟ ಪ್ರೇಮಿಯೊಬ್ಬನ ವಿಜಯದಂತೆ ಅರಣ್ಯ ಇಲಾಖೆಯ ಅನುಭವದ ಪುಟಗಳಲ್ಲಿ ದಾಖಲಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us