newsfirstkannada.com

×

ಮನೆಗೆ ನುಗ್ಗಿ ಗುಂಡಿಟ್ಟು ಪತ್ರಕರ್ತನ ಹತ್ಯೆಗೈದ ದುಷ್ಕರ್ಮಿಗಳು.. 2 ವರ್ಷದ ಹಿಂದೆ ಸಹೋದರನ ಕೊಲೆಗೈದಿದ್ದ ಪಾತಕಿಗಳು

Share :

Published August 18, 2023 at 11:37am

    ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳು ಪರಾರಿ

    ಜಿಲ್ಲಾ ವರದಿಗಾರನಾಗಿದ್ದ ಪತ್ರಕರ್ತ ವಿಮಲ್ ಕುಮಾರ್

    ಗುಂಡು ಹಾರಿಸಿ ಎಸ್ಕೇಪ್​ ಆದ ನಾಲ್ವರು ದುಷ್ಕರ್ಮಿಗಳು

ಪಾಟ್ನಾ: ಪತ್ರಕರ್ತನ ಮನೆಗೆ ನಾಲ್ವರು ದುಷ್ಕರ್ಮಿಗಳು ನುಗ್ಗಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಮಲ್​ ಕುಮಾರ್​ ಗುಂಡಿನ ದಾಳಿಗೆ ಬಲಿಯಾದ ಪತ್ರಕರ್ತ. ಇವರು ಹಿಂದಿಯ ರಾಷ್ಟ್ರೀಯ ಮಾಧ್ಯಮದಲ್ಲಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ನಾಲ್ವರು ದುಷ್ಕರ್ಮಿಗಳು ಅವರ ಮನೆಗೆ ನುಗ್ಗಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಪತ್ರಕರ್ತ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ.

ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವಿಮಲ್​ ಕುಮಾರ್​ ಸಾವನ್ನಪ್ಪಿದ್ದಾನೆ. ಆರೋಪಿಗಳು ಕೊಲೆ ಮಾಡಿರೋದು ಏಕೆ ಎಂಬುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. 2 ವರ್ಷಗಳ ಹಿಂದೆ ವಿಮಲ್​ ಅವರ ಸಹೋದರನನ್ನು ಕೊಲೆ ಮಾಡಲಾಗಿತ್ತು ಎಂದು ಹೇಳಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಗೆ ನುಗ್ಗಿ ಗುಂಡಿಟ್ಟು ಪತ್ರಕರ್ತನ ಹತ್ಯೆಗೈದ ದುಷ್ಕರ್ಮಿಗಳು.. 2 ವರ್ಷದ ಹಿಂದೆ ಸಹೋದರನ ಕೊಲೆಗೈದಿದ್ದ ಪಾತಕಿಗಳು

https://newsfirstlive.com/wp-content/uploads/2023/08/BIHAR_JOURNALIST.jpg

Load More