newsfirstkannada.com

ಆ ಎರಡು ಸೋಲು ಸಿ.ಟಿ.ರವಿಗೆ ಮುಳುವಾಯ್ತಾ..? ಸಿಟಿ ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗೋದು ಅನುಮಾನ..!

Share :

Published July 29, 2023 at 11:43am

Update July 29, 2023 at 11:50am

    ರಾ.ಪ್ರ. ಕಾರ್ಯದರ್ಶಿ ಸ್ಥಾನದಿಂದ ಯಾಕೆ ಕೊಕ್ ಗೊತ್ತಾ?

    ಸಿಟಿ ರವಿಗೆ ಯಾಕೆ ರಾಜ್ಯಾಧ್ಯಕ್ಷ ಸ್ಥಾನ ಅನುಮಾನ ಗೊತ್ತಾ?

    ಲೋಕಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುತ್ತಾರಾ?

ಬೆಂಗಳೂರು: ಲೋಕಸಭೆ ಚುನಾವಣೆಯ ತಯಾರಿಯಲ್ಲಿರುವ ಬಿಜೆಪಿ, ಪಕ್ಷದಲ್ಲಿ ಮೇಜರ್ ಸರ್ಜರಿ ಮಾಡಿಕೊಳ್ತಿದೆ. ಅಂತೆಯೇ ಕರ್ನಾಟಕದ ರಾಜಕಾರಣಿ ಸಿಟಿ ರವಿಗೆ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸ್ಥಾನದಿಂದ ಕೊಕ್ ನೀಡಲಾಗಿದೆ.

ಸಿ.ಟಿ.ರವಿಗೆ ಕೊಕ್ ನೀಡಿದ್ದು, ಹಲವು ಚರ್ಚೆಗಳಿಗೆ ಹಾಗೂ ಕುತೂಹಲಕ್ಕೂ ಕಾರಣವಾಗಿದೆ. ಯಾಕಂದ್ರೆ ರಾಷ್ಟ್ರೀಯ ಪ್ರಧಾನಾಕಾರ್ಯದರ್ಶಿ ಸ್ಥಾನದಿಂದ ಕಳಗಿಳಿಸಿ ರಾಜ್ಯ ಬಿಜೆಪಿ ಅಧ್ಯಕ್ಷರ ಹುದ್ದೆ ನೀಡುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಮತ್ತೊಂದು ಕಡೆ, ಸಿಟಿ ರವಿ ಅವರನ್ನು ಯಾಕೆ ಪ್ರಧಾನಕಾರ್ಯದರ್ಶಿ ಸ್ಥಾನದಿಂದ ಕಳಗೆ ಇಳಿಸಿದರು ಎಂಬುವುದು ಕೂಡ ಚರ್ಚೆಯ ವಿಷಯವೇ.

ಇದನ್ನೂ ಓದಿ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೊಕ್.. ಬಿಜೆಪಿ ರಾಜ್ಯಾಧ್ಯಕ್ಷ ಆಗ್ತಾರಾ ಸಿಟಿ ರವಿ..?

ಆ ಎರಡು ಸೋಲು ಮುಳುವಾಯ್ತಾ..?

ಹಲವು ಯಡವಟ್ಟಿನಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಕಳೆದುಕೊಂಡಿದೆ. ಇದು 2024ರ ಲೋಕ ಸಭಾ ಚುನಾವಣೆಯಲ್ಲಿ ಪುನರಾವರ್ತನೆ ಆಗಬಾರದು ಅನ್ನೋದು ಬಿಜೆಪಿ ಲೆಕ್ಕಾಚಾರ. ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸಿಟಿ ರವಿ ಪ್ರಮುಖ ಕಾರ್ಯ ನಿರ್ವಹಿಸಿದ್ದರು. ಆದರೆ ಅವರ ಕಾರ್ಯವೈಖರಿ ಹೈಕಮಾಂಡ್ ನಾಯಕರಿಗೆ ಸಮಾಧಾನ ತಂದಿಲ್ಲ ಎನ್ನಲಾಗಿದೆ. ಒಂದು ರಾಜ್ಯದಲ್ಲಿ (ಕರ್ನಾಟಕ) ಅಧಿಕಾರ ಕಳೆದುಕೊಂಡರೆ, ಮತ್ತೊಂದು ರಾಜ್ಯದಲ್ಲಿ (ತಮಿಳುನಾಡು) ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ. ಹೀಗಾಗಿ ಹೈಕಮಾಂಡ್ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿ.ಟಿ ರವಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೊಕ್..!

ಮಾತ್ರವಲ್ಲ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಸಿಟಿ ರವಿ ಸೋಲು ಕಂಡಿದ್ದಾರೆ. ಹೀಗಾಗಿ ಲೋಕಸಭೆ ಗೆಲ್ಲಬೇಕು ಅಂದರೆ ಇಡಿ ದೇಶದಲ್ಲಿ ಬಿಜೆಪಿ ಸಂಘಟನೆ ಆಗಬೇಕು. ಪ್ರತಿಯೊಂದು ರಾಜ್ಯದಲ್ಲೂ ಕೂಡ ಬಿಜೆಪಿಗೆ ಗಣನೀಯ ಸ್ಥಾನದಲ್ಲಿ ಏರಿಕೆ ಆಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಿಜೆಪಿಯಲ್ಲಿ ಭರ್ಜರಿ​ ಸರ್ಜರಿ ಆಗಿದೆ ಎಂದು ಹೇಳಲಾಗಿದೆ.

ಮತ್ತೊಂದು ಕಡೆ ಸಿಟಿ ರವಿ ರಾಷ್ಟ್ರ ಬಿಟ್ಟು ರಾಜ್ಯ ರಾಜಕಾರಣಕ್ಕೆ ವಾಪಸ್ ಆಗ್ತಾರೆ ಎಂಬ ಚರ್ಚೆಯೂ ಜೋರಾಗಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಆಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದು ಸಿಟಿ ರವಿಗೆ ಅನುಮಾನ ಎಂಬ ಗುಸುಗುಸು ಇದೆ. ಮತ್ತೊಂದು ಚರ್ಚೆ ಎಂದರೆ ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗುತ್ತಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ಎರಡು ಸೋಲು ಸಿ.ಟಿ.ರವಿಗೆ ಮುಳುವಾಯ್ತಾ..? ಸಿಟಿ ರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗೋದು ಅನುಮಾನ..!

https://newsfirstlive.com/wp-content/uploads/2023/07/CTRAVI.jpg

Load More