ರಿಷಬ್ ಶೆಟ್ಟಿಗೆ ಜೂನಿಯರ್ ಎನ್ಟಿಆರ್ ಧನ್ಯವಾದ ಹೇಳಿದ್ದು ಏಕೆ?
ದೇವಸ್ಥಾನದಲ್ಲಿ ಬೇರೇನೂ ವಿಚಾರ ಮಾತಾಡಲ್ಲ ಎಂದ ತೆಲುಗು ನಟ
ಕಾಂತಾರ ಪ್ರೀಕ್ವೆಲ್ನಲ್ಲಿ ಜೂ.ಎನ್ಟಿಆರ್ ಅಭಿನಯ ಮಾಡುತ್ತಾರಾ?
ಉಡುಪಿ: ಟಾಲಿವುಡ್ನ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಅವರು ತನ್ನ ತಾಯಿಯ ಜೊತೆ ಬಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಕೊಲ್ಲೂರು ಮೂಕಾಂಬಿಕಾ ದರ್ಶನ ಕೂಡ ಜೂ.ಎನ್ಟಿಆರ್ ಫ್ಯಾಮಿಲಿ ಪಡೆದುಕೊಂಡಿದೆ. ಇದೇ ವೇಳೆ ಕಾಂತಾರ ಸಿನಿಮಾದಲ್ಲಿ ಅಭಿನಯ ಕುರಿತು ಜೂ. ಎನ್ಟಿಆರ್ ಮಾತಾಡಿದ್ದಾರೆ.
ಇದನ್ನೂ ಓದಿ: 40 ವರ್ಷಗಳ ಹಿಂದಿನ ಹರಕೆ ತೀರಿಸಿದ Jr NTR; ಉಡುಪಿ ಶ್ರೀಕೃಷ್ಣನಿಗೆ ಸ್ಟಾರ್ ನಟನ ಅಮ್ಮ ಏನೆಂದು ಬೇಡಿಕೊಂಡಿದ್ದರು?
ಕೊಲ್ಲೂರು ಮೂಕಾಂಬಿಕಾ ದರ್ಶನ ಚೆನ್ನಾಗಿ ಆಗಿದೆ. ದೇವತೆಯ ದರ್ಶನ ಮಾಡಿಸಿದ ರಿಷಬ್ ಶೆಟ್ಟಿಯವರಿಗೆ ತುಂಬಾ ಧನ್ಯವಾದಗಳು. ಕಾಂತಾರ ಮೂವಿಯ ಪ್ರೀಕ್ವೆಲ್ನಲ್ಲಿ ನಾನು ನಟನೆ ಮಾಡುವುದು ಏನು ನಿರ್ಧಾರ ಆಗಿಲ್ಲ. ಕಾಂತಾರ ಸಿನಿಮಾದಲ್ಲಿ ಅಭಿನಯ ಮಾಡುವುದನ್ನು ರಿಷಬ್ ಶೆಟ್ಟಿಯವರೇ ಪ್ಲಾನ್ ಮಾಡಬೇಕು. ರಿಷಬ್ ಏನೇ ಪ್ಲಾನ್ ಮಾಡಿದರೂ ನಟನೆ ಮಾಡಲು ನಾನು ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭರ್ಜರಿ ರೋಸ್ ಸೆಲೆಬ್ರೆಷನ್.. ಉಂಗುರ ಬದಲಿಸಲು ತರುಣ್ ಸುಧೀರ್- ಸೋನಲ್ ರೆಡಿ; ಎಲ್ಲಿ?
ಆಂಧ್ರ ಪ್ರದೇಶದಲ್ಲಿ ವಾಯ್ಸ್ ಆಫ್ ವುಮೆನ್ಸ್ ವರದಿ ಬಿಡುಗಡೆಗೆ ನಟಿಯರ ಆಗ್ರಹ ವಿಚಾರಕ್ಕೆ ಮಾತನಾಡಿದ ಅವರು ದೇವಸ್ಥಾನದಲ್ಲಿ ಆ ವಿಚಾರ ಮಾತನಾಡಲ್ಲ. ಮೊದಲು ಪ್ರಮೋದ್ ಶೆಟ್ಟಿಯವರ ಲಾಫಿಂಗ್ ಬುದ್ಧ ಸಿನಿಮಾ ನೋಡುತ್ತೇನೆ ಎಂದು ಹೇಳಿ, ಪ್ರಮೋದ್ ಶೆಟ್ಟಿಗೆ ಜೂ.ಎನ್ಟಿಆರ್ ಅಭಿನಂದನೆ ತಿಳಿಸಿದರು. ದರ್ಶನ್ ಕುರಿತು ನಟ ಏನನ್ನು ಪ್ರತಿಕ್ರಿಯೆ ನೀಡಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ