ಶಕ್ತಿ ಯೋಜನೆಗೆ ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ
ರಾಜ್ಯಾದ್ಯಂತ ಸರ್ಕಾರಿ ಸಾರಿಗೆಯ ಬಸ್‌ಗಳಲ್ಲಿ ಫ್ರೀಯಾಗಿ ಓಡಾಟ
ಯೋಜನೆಯ ಲೋಗೋ, ಸ್ಮಾರ್ಟ್ ಕಾರ್ಡ್ ಮಾದರಿ ಅನಾವರಣ
ಚುನಾವಣೆಗೂ ಮುನ್ನ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್ ಸರ್ಕಾರ ಸದ್ಯ ಗ್ಯಾರಂಟಿ ಯೋಜನೆಯ ಜಾರಿಗಾಗಿ ಕಸರತ್ತು ನಡೆಸುತ್ತಿದೆ. ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಾಲು ಸಾಲು ಗೊಂದಲಗಳಿದ್ದು ಅದನ್ನ ಸರ್ಕಾರ ಬಗೆಹರಿಸಲು ಯತ್ನಿಸ್ತಿದೆ. ಈ ನಡುವೆ ಶಕ್ತಿ ಯೋಜನೆ ಬಗ್ಗೆ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಕಿಕ್ ಸ್ಟಾರ್ಟ್
ಪಂಚ ಕಜ್ಜಾಯದಂತಹ ಪಂಚ ಗ್ಯಾರಂಟಿಗಳ ಪೈಕಿ ಅತೀ ಪ್ರಮುಖವಾದವುಗಳಂದ್ರೆ 200 ಯುನಿಟ್ ಉಚಿತ್ ವಿದ್ಯುತ್ ಹಾಗೂ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ. ಇವೆರಡು ಯೋಜನೆಗಳಿಂದಲೇ ರಾಜ್ಯದಲ್ಲಿ ಗದ್ದಲ-ಗಲಾಟೆಗಳು ನಡೆದಿದ್ದವು. ಸದ್ಯ ಈಗ ಇದೇ ಶಕ್ತಿ ಯೋಜನೆಗೆ ಶಕ್ತಿ ತುಂಬಿ ಗ್ಯಾರಂಟಿಯನ್ನು ಜಾರಿಗೆ ತರಲು ಸರ್ಕಾರ ಮುನ್ನಡಿ ಇಟ್ಟಿದೆ.
ಜೂನ್ 11 ರಂದು ‘ಶಕ್ತಿ’ಗೆ ಚಾಲನೆ
‘ಶಕ್ತಿ’ಗೆ ಗೈಡ್ಲೈನ್ಸ್
ರಾಜ್ಯದೊಳಗಿನ ಪ್ರಯಾಣಿಕರಿಗೆ ಮಾತ್ರ ಉಚಿತ ಪ್ರಯಾಣ ಅವಕಾಶ ಮಾಡಿಕೊಡುತ್ತದೆ. ರಾಜಹಂಸ, ನಾನ್ ಎಸಿ ಸ್ಲೀಪರ್, ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್ಗಳು ಇ.ವಿ. ಪವರ್ ಪ್ಲಸ್ಗೆ ಇದು ಅನ್ವಯಿಸಲ್ಲ. ಬಿಎಂಟಿಸಿ ಹೊರತುಪಡಿಸಿ ಉಳಿದೆಲ್ಲಾ ಸಾರಿಗೆ ಸಂಸ್ಥೆಗಳಲ್ಲಿ ಶೇಕಡಾ 50% ಆಸನಗಳು ಪುರುಷರಿಗೆ ಮೀಸಲಿಡಬೇಕು. ಶಕ್ತಿ ಕಾರ್ಡ್ ದತ್ತಾಂಶ ಆಧರಿಸಿ ಉಚಿತ ಪ್ರಯಾಣದ ವೆಚ್ಚವನ್ನ ಸಾರಿಗೆ ನಿಗಮಗಳಿಗೆ ಸರ್ಕಾರವೇ ಭರಿಸುತ್ತೆ. ಎಲ್ಲಾ ಮಹಿಳೆಯರಿಗೂ ಮೂರು ತಿಂಗಳೊಳಗೆ ಸೇವಾ ಸಿಂಧು ಮೂಲಕ ಅರ್ಜಿ ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಸರ್ಕಾರ ನೀಡಿರುವ ಯಾವುದಾದರೊಂದು ಗುರುತಿನ ಚೀಟಿ ಪರಿಗಣಿಸಿ ಉಚಿತ ಪ್ರಯಾಣ ಟಿಕೆಟ್ ನೀಡಲಾಗುತ್ತದೆ. ಶೂನ್ಯ ಟಿಕೆಟ್ ವಿತರಿಸುವ ಮುನ್ನ ಗುರುತಿನ ಚೀಟಿ ಪರಿಶೀಲಿಸಬೇಕು ಅಂತ ಸಾರಿಗೆ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ನಿರ್ವಾಹಕರ ಜವಾಬ್ದಾರಿಗಳೇನು?
ಒಟ್ಟಾರೆ ಶಕ್ತಿ ಯೋಜನೆಗೆ ಶಕ್ತಿ ನೀಡಲು ಸರ್ಕಾರ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಿದೆ. ಇದೇ ಭಾನುವಾರದಂದು ಗ್ಯಾರಂಟಿಗೆ ಚಾಲನೆ ನೀಡಲಿದ್ದು ಮಹಿಳೆಯರು ಉಚಿವಾಗಿ ಬಸ್ನಲ್ಲಿ ಎಲ್ಲೆಂದರಲ್ಲಿ ಓಡಾಡಬಹುದು. ಇದರಿಂದ ಇನ್ಮುಂದೆ ಮಹಿಳೆಯರ ಪ್ರಯಾಣ ದುಪ್ಪಟ್ಟು ಅಥವಾ ಇನ್ನೂ ಹೆಚ್ಚಾಗುವುದಂತೂ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ