newsfirstkannada.com

ಜ್ಯೂನಿಯರ್​ ಯಶ್ ಆತ್ಮಹತ್ಯೆಗೆ ಯತ್ನ.. ಕಾರಣ ಏನು ಗೊತ್ತಾ?

Share :

30-08-2023

  ಜ್ಯೂನಿಯರ್​ ಯಶ್ ಆಲಮಟ್ಟಿ ಹಿನ್ನೀರಿಗೆ ಜಿಗಿದು ಆತ್ಮಹತ್ಯೆಗೆ ಯತ್ನ

  ನಟ ಯಶ್ ರೀತಿಯಲ್ಲಿ ಮಿಮಿಕ್ರಿ ಮಾಡಿ ಜೀವನ ನಡೆಸುತ್ತಿದ್ದರು

  ಜ್ಯೂನಿಯರ್​ ಯಶ್​​ಗೆ ಬಡ್ಡಿ ನೀಡುವಂತೆ ನಿತ್ಯ ಕಿರುಕುಳ

ಆತನದ್ದು ಕಟ್ಟು ಮಸ್ತಾದ ದೇಹ, ಹೈಟಾಗಿರೊ ಪರ್ಸ್ನಾಲಿಟಿ, ನೋಡೋಕೆ ರಾಕಿಂಗ್ ಸ್ಟಾರ್ ಯಶ್ ಹೋಲಿಕೆ ಇರುವ ಆತ ಜೂ.ಯಶ್ ಅಂತಲೇ ಫೇಮಸ್. ಆದ್ರೆ ಆ ಯುವಕ ಇವತ್ತು ಸಾಲಗಾರರ ಕಿರಿಕಿರಿಗೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ, ಅದೃಷ್ಟವಶಾತ ಪ್ರಾಣಾಪಯಾಯದಿಂದ ಪಾರಾಗಿದ್ದಾನೆ.

ಹೌದು, ಬಾಗಲಕೋಟೆಯ ನವನಗರದ 47 ನೇ ಸೆಕ್ಟರ್‌ನ ನಿವಾಸಿ ಆಗಿರುವ 28 ವರ್ಷದ ಆನಂದ ರಾಂಪೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಾಗಲಕೋಟೆ ನಗರಕ್ಕೆ ಹೊಂದಿಕೊಂಡಿರುವ ಮಲ್ಲಾಪೂರ ಸೇತುವೆ ಮೇಲಿಂದ ಆಲಮಟ್ಟಿ ಹಿನ್ನೀರಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದ್ರೆ ಆತ್ಮಹತ್ಯೆಗೂ ಮುನ್ನ ಸ್ನೇಹಿತನಿಗೆ ಕರೆ ಮಾಡಿ ಸುಸೈಡ್ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಹೀಗಾಗಿ ತಕ್ಷಣ ಸ್ಥಳಕ್ಕೆ ಬಂದಿದ್ದರಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.

ಇನ್ನ ಸುಮಾರು ಏಳೆಂಟು ಜನರಿಂದ ತನಗೆ ಹಣ ನೀಡುವಂತೆ, ಅದ್ರಲ್ಲೂ ಬಡ್ಡಿ ನೀಡುವಂತೆ ನಿತ್ಯ ಕಿರುಕುಳ ನೀಡಿತ್ತಿದ್ದರು. ಮನೆ ಹತ್ತಿರ ಬಂದು ಮರ್ಯಾದೆ ತಗೆತಿವಿ, ಕೈಗೆ ಸಿಕ್ಕರೇ, ಹೊಡಿತಿವಿ, ಎಂದು ಧಮಕಿ ಹಾಕ್ತಿದ್ರು, ಅವರ ಕಿರಿ ಕಿರಿಗೆ ಬೇಸತ್ತು ಮೊಬೈಲ್ ಮಾರಿ ಬಡ್ಡಿ ಕಟ್ಟಿದ್ದೆ. ಕಾರ್, ಬೈಕ್ ಎರಡನ್ನು ತೆಗೆದುಕೊಂಡಿದ್ದಾರೆ. ಸಾಲ ಕೊಡುವಾಗ ಒಂದು ರೀತಿಯ ಬಡ್ಡಿ, ವಾಪಸ್ಸು ಕೊಡುವಾಗ ಹೆಚ್ಚಿನ ಹಣ ಕೊಡಲೇಬೆಕು ಎಂದು ಪೀಡಿಸುತ್ತಿದ್ದರು.

ಮೂರ್ನಾಲ್ಕು ತಿಂಗಳಿಂದ ಯಾವುದೇ ಕಾರ್ಯಕ್ರಮ ಬಂದಿಲ್ಲ. ಸ್ಟೇಜ್ ಶೋ ಮೂಲಕ ನಟ ಯಶ್ ರೀತಿಯಲ್ಲಿ ಮಿಮಿಕ್ರಿ ಮಾಡಿ ಜೀವನ ನಡೆಸುತ್ತಿದ್ದರು, ಜೊತೆಗೆ ಬಾಗಲಕೋಟೆಯ ಜಿಲ್ಲೆಯ ಜನರನ್ನ ರಂಜಿಸುತ್ತಿದ್ದರು ಆನಂದ್ ಅಲಿಯಾಸ್ ಜೂ.ಯಶ್. ಆದ್ರೆ ಯಾವುದೇ ಕಾರ್ಯಕ್ರಮ ಇಲ್ಲದ್ದರಿಂದ ಸಾಲ ತೀರಿಸಲು ಆಗಿಲ್ಲ. ಬಡ್ಡಿಯೂ ಕಟ್ಟಿಲ್ಲ. ಸುಮಾರು 5-6 ಲಕ್ಷದಷ್ಟು ಕೈ ಸಾಲ ಮಾಡಿಕೊಂಡಿದ್ದರಿಂದ ಮೀಟರ್ ಬಡ್ಡಿ ಏರುತ್ತಲೇ ಇರುತ್ತೆ. ಇದ್ರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಪೊಲೀಸ್ರು ತನಹೆ ಸಹಾಯ ಮಾಡಬೇಕು ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜ್ಯೂನಿಯರ್​ ಯಶ್ ಆತ್ಮಹತ್ಯೆಗೆ ಯತ್ನ.. ಕಾರಣ ಏನು ಗೊತ್ತಾ?

https://newsfirstlive.com/wp-content/uploads/2023/08/Juniour-yash.jpg

Load More