ಕ್ರಿಕೆಟ್ ಲೋಕದಲ್ಲಿ ನಿವೃತ್ತಿಯ ಬಿರುಗಾಳಿ ಎದ್ದಿದೆ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಯಾರೆಲ್ಲ ಯಾರೆಲ್ಲ ನಿವೃತ್ತಿ?
ನಾಲ್ವರಲ್ಲಿ ಇಬ್ಬರು ಭಾರತೀಯರು ಅನ್ನೋದು ಬೇಸರ ವಿಚಾರ
ಕ್ರಿಕೆಟ್ ಲೋಕದಲ್ಲಿ ನಿವೃತ್ತಿಯ ಬಿರುಗಾಳಿ ಎದ್ದಿದೆ. ಕಳೆದ 5 ದಿನಗಳ ಒಳಗೆ ಒಟ್ಟು ನಾಲ್ವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದು, ಅಭಿಮಾನಿಗಳಿಗೆ ತುಂಬಾನೇ ನಿರಾಸೆಯಾಗಿದೆ.
ಯಾರೆಲ್ಲ ನಿವೃತ್ತಿ ಘೋಷಣೆ ಮಾಡಿದ್ದಾರೆ..?
ನಿವೃತ್ತಿಯಾದ ನಾಲ್ವರಲ್ಲಿ ಇಬ್ಬರು ಭಾರತೀಯರು ಅನ್ನೋದು ಬೇಸರದ ವಿಚಾರ. ಟೀಂ ಇಂಡಿಯಾದ ಬರೀಂದರ್ ಬಾಳಸಿಂಗ್ ಸರನ್ (Barinder Balbirsingh Sran) ಅವರು ತಮ್ಮ 31ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ. ಆಗಸ್ಟ್ 29 ರಂದು ಇವರು ನಿವೃತ್ತಿ ಘೋಷಣೆ ಮಾಡಿದರು. 2016ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಇವರಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಜೂನ್ 22, 2016ರಂದು ಜಿಂಬಾಬ್ವೆ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನು ಆಡಿದ್ದರು.
ಇದನ್ನೂ ಓದಿ:ತುಂಬಾ ವರ್ಷಗಳ ನಂತರ.. ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ RCB ಮೂವರು ಹಳೇ ಆಟಗಾರರು..!
ಗೇಬ್ರಿಯಲ್ ವಿದಾಯ
ದಕ್ಷಿಣ ಆಫ್ರಿಕಾದ ಗೇಬ್ರಿಯಲ್ (Shannon Gabriel) ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕಳೆದ 12 ವರ್ಷಗಳಿಂದ ವೆಸ್ಟ್ ಇಂಡೀಸ್ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗಾಗಿ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಪ್ರೀತಿಯ ಆಟವನ್ನು ಅತ್ಯುನ್ನತ ಮಟ್ಟದಲ್ಲಿ ಆಡಿರೋದು ಖುಷಿ ತಂದಿದೆ. ಎಲ್ಲಾ ಒಳ್ಳೆಯ ವಿಷಯಗಳಿಗೂ ಅಂತ್ಯ ಇರಬೇಕು ಎಂದಿದ್ದಾರೆ. 36 ವರ್ಷದ ಗೇಬ್ರಿಯಲ್ ವೆಸ್ಟ್ ವಿಂಡೀಸ್ ಪರ 59 ಟೆಸ್ಟ್, 25 ಏಕದಿನ, 2 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 166, ಏಕದಿನದಲ್ಲಿ 33, ಟಿ-20ಯಲ್ಲಿ ಮೂರು ವಿಕೆಟ್ ಪಡೆದುಕೊಂಡಿದ್ದಾರೆ. ಆಗಸ್ಟ್ 28 ರಂದು ಗೇಬ್ರಿಯಲ್ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿದ್ದಾರೆ.
ಇದೇ ದಿನ ಇಂಗ್ಲಿಷ್ ಕ್ರಿಕೆಟಿಗ ನಂಬರ್ 1 ಮಾಜಿ ಟಿ-20 ಬ್ಯಾಟ್ಸ್ಮನ್ ಡೇವಿಡ್ ಮಲಾನ್ ನಿವೃತ್ತಿ ಘೋಷಣೆ ಮಾಡಿದ್ದಾರೆ. 37 ವರ್ಷದ ಮಲಾನ್ ಇಂಗ್ಲೆಂಡ್ ತಂಡಕ್ಕಾಗಿ 22 ಟೆಸ್ಟ್, 30 ಏಕದಿನ, 62 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲೂ ಶತಕಗಳಿಸಿದ ಕೀರ್ತಿ ಅವರಿಗೆ ಇದೆ. ಟೆಸ್ಟ್ನಲ್ಲಿ 1084, ಏಕದಿನ ಸರಣಿಯಲ್ಲಿ 1450 ಹಾಗೂ ಟಿ-20 ಯಲ್ಲಿ 1892 ರನ್ ಬಾರಿಸಿದ್ದರು.
ಆಗಸ್ಟ್ 24 ರಂದು ಟೀಂ ಇಂಡಿಯಾ ಕಂಡ ದಂತ ಕತೆ ಶಿಖರ್ ಧವನ್ ಕ್ರಿಕೆಟ್ಗೆ ನಿವೃತ್ತಿ ಹೇಳಿದರು. ಧವನ್ ನಿವೃತ್ತಿ ದೇಶದಲ್ಲಿ ಭಾರೀ ಸುದ್ದಿ ಮಾಡಿತ್ತು. 13 ವರ್ಷಗಳ ಕಾಲ ಟೀಂ ಇಂಡಿಯಾಗೆ ಧವನ್ ಆಡಿದ್ದರು.
ಇದನ್ನೂ ಓದಿ:ಸ್ಟಾರ್ಗಳಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ