ಕ್ರಿಕೆಟ್ ಲೋಕದ ಸೂಪರ್ ಸಿಕ್ಸ್ ಇಲ್ಲಿವೆ
ಅಹ್ಮದಾಬಾದ್ ಹೋಟೆಲ್ಗಳಿಗೆ ಫುಲ್ ಡಿಮ್ಯಾಂಡ್; ಯಾಕೆ
ವಿಶ್ವಕಪ್ನಲ್ಲಿ ಧವನ್ ಬದಲಿ ಆಟಗಾರ
ಇದಪ್ಪಾ ಅದೃಷ್ಟ ಅಂದ್ರೆ
ತಮಿಳುನಾಡು ಪ್ರೀಮಿಯರ್ ಲೀಗ್ ದಿನೇ ಕಳೆದಂತೆ ಅಚ್ಚರಿ ವಿದ್ಯಮಾನಗಳಿಗೆ ಸಾಕ್ಷಿಯಾಗ್ತಿದೆ. ಬ್ಯಾಟ್ಸ್ಮನ್ ರನೌಟ್ ಆಗಿದ್ರೂ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ಗೆ ರೆಫರ್ ಮಾಡಿಲ್ಲ. ಇನ್ನೂ ಸಲೀಮ್ ತಂಡದ ಯಾವೊಬ್ಬ ಆಟಗಾರ ಕೂಡ ರನ್ ಔಟ್ಗೆ ಅಪೀಲ್ ಮಾಡದೇ ಸುಮ್ಮನಾಗಿದ್ದಾರೆ. ಕೋವಲ್ ತಂಡದ ಎಸ್ ಸುಜಯ್ ರನ್ ಕದಿಯುವ ವೇಳೆ ಅವರ ಶರೀರ ಗಾಳಿಯಲ್ಲಿತ್ತು. ಕ್ರೀಸ್ ನಲ್ಲಿದ್ದರು ಅವರ ಬ್ಯಾಟ್ ಹಾಗೂ ಎರಡು ಕಾಲುಗಳು ಏರ್ನಲ್ಲಿದ್ದವು. ಇದನ್ನು ಅಂಪೈರ್ ಮತ್ತು ಫೀಲ್ಡರ್ಸ್ ಗಮನಿಸಿಲ್ಲ. ಕೊನೆಗೆ ರಿಪ್ಲೇನಲ್ಲಿ ಈ ವಿಚಾರ ಗೊತ್ತಾಗಿದೆ.
ಅಹ್ಮದಾಬಾದ್ ಹೋಟೆಲ್ಗಳಿಗೆ ಫುಲ್ ಡಿಮ್ಯಾಂಡ್
2023ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಅಹ್ಮದಾಬಾದ್ ಹೋಟೆಲ್ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಿದೆ. ಟೂರ್ನಿ ಆರಂಭಕ್ಕೆ ಇನ್ನೂ ಮೂರುವರೆ ತಿಂಗಳು ಬಾಕಿ ಇದೆ. ಆಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಒಂದು ದಿನ ವಾಸ್ತವ್ಯಕ್ಕೆ ಐವತ್ತು ಸಾವಿರ ರೂಪಾಯಿ ನೀಡಬೇಕಿದೆ. ಅಕ್ಟೋಬರ್ 15 ರಂದು ನಡೆಯುವ ಭಾರತ-ಪಾಕಿಸ್ತಾನ ಹಾಗೂ ಫೈನಲ್ ಪಂದ್ಯ ಅಹ್ಮದಾಬಾದ್ನಲ್ಲಿ ನಡೆಯಲಿದೆ. ಹೀಗಾಗಿ ಇಲ್ಲಿನ ಹೋಟೆಲ್ಗಳಿಗೆ ಡಿಮ್ಯಾಂಡ್ ಹೆಚ್ಚಿದೆ.
‘ಆಯ್ಕೆ ನನ್ನ ಕೈಯಲ್ಲಿ ಇಲ್ಲ’
ಅಭಿಮನ್ಯು ಈಶ್ವರನ್ ವೆಸ್ಟ್ಇಂಡೀಸ್ ಸರಣಿಗೆ ಆಯ್ಕೆಯಾಗದ ಬಗ್ಗೆ ಮೊದಲ ಬಾರಿ ಮೌನ ಮುರಿದಿದ್ದಾರೆ. ನಾನು ಸದಾ ಉತ್ತಮ ಕ್ರಿಕೆಟರ್ ಆಗಲು ಬಯಸುವೆ. ಪ್ರತಿ ದಿನವೂ ಆಟವನ್ನು ಉತ್ತಮಗೊಳಿಸಿಕೊಳ್ಳುವೆ. ಇಷ್ಟಾಗಿಯೂ ಅವಕಾಶ ಸಿಕ್ಕಿಲ್ಲ.ಆಯ್ಕೆ ನನ್ನ ಕೈಯಲ್ಲಿ ಇಲ್ಲ. ಆದರೆ ನಾನು ಆಟವನ್ನ ಮಾತ್ರ ದಿನೇ ದಿನೇ ಉತ್ತಪಡಿಸಿಕೊಳ್ಳಬಲ್ಲಷ್ಟೇ ಎಂದು ಅಭಿಮನ್ಯು ಈಶ್ವರನ್ ಹೇಳದ್ದಾರೆ.
ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ಅಡ್ಡಿಪಡಿಸಿದ ಇಂಧನ ಪ್ರತಿಭಟನಾಕಾರರು
ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದ ಘಟನೆ ಜರುಗಿದೆ. ಪಂದ್ಯದ ಮೊದಲ ಸೆಷನ್ ವೇಳೆ ಅಂಗಳಕ್ಕೆ ಪ್ರವೇಶಿಸಿದ ಇಂಧನ ಪ್ರತಿಭಟನಾಕಾರರು ಆರೆಂಜ್ ಪೌಡರನ್ನ ಚೆಲ್ಲಿದ್ದಾರೆ. ಆಗ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜಾನಿ ಬೇರ್ಸ್ಟೋವ್ ಪ್ರತಿಭಟನಾಕಾರನನ್ನ ಹೊರಕ್ಕೆ ಹೊತ್ತೊಯ್ದಿದ್ರು. ಕೆಲ ನಿಮಿಷಗಳ ಬಳಿಕ ಪಂದ್ಯ ಮತ್ತೆ ಆರಂಭಗೊಂಡಿತು. ಆದರೆ ಸೆಕ್ಯೂರಿಟಿ ಕಣ್ತಪ್ಪಿಸಿ ಪ್ರತಿಭಟನಾಕಾರರು ಅಂಗಳಕ್ಕೆ ಓಡಿ ಬಂದಿದ್ದಕ್ಕೆ ನೆಟ್ಟಿಗರು ಇಸಿಬಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
Good start to the 2nd test.
Bairstow has done some heavy lifting already😂😂 #Ashes2023 pic.twitter.com/f0JcZnCvEr— Ashwin 🇮🇳 (@ashwinravi99) June 28, 2023
ವಿಂಡೀಸ್ ಟೆಸ್ಟ್ಗೂ ಮುನ್ನ 2 ಅಭ್ಯಾಸ ಪಂದ್ಯ
WTC ಫೈನಲ್ಗೂ ಮುನ್ನ ಅಭ್ಯಾಸ ಪಂದ್ಯಗಳನ್ನಾಡದೆ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ, ಈಗ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ಸರಣಿ ಆರಂಭಕ್ಕೂ 2 ಅಭ್ಯಾಸ ಪಂದ್ಯಗಳನ್ನಾಡಲು ಮುಂದಾಗಿದೆ. ಜುಲೈ 2ಕ್ಕೆ ಬ್ರಿಡ್ಜ್ಟೌನ್ ತಲುಪಲಿರುವ ಟೀಮ್ ಇಂಡಿಯಾ ಕ್ಯಾಂಪ್, ಬ್ರಬಡೋಸ್ನ ಸ್ಥಳೀಯ ತಂಡದ ಜೊತೆ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಟೆಸ್ಟ್ ಸರಣಿ ಜುಲೈ 12ರಿಂದ ಆರಂಭವಾಗಲಿದೆ.
ಏಕದಿನ ವಿಶ್ವಕಪ್ನಲ್ಲಿ ಧವನ್ ಬದಲಿ ಆಟಗಾರ?
ಈಗಾಗ್ಲೇ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಇದರ ಬೆನ್ನಲ್ಲೇ ಶಿಖರ್ ಧವನ್ ಏಕದಿನ ವಿಶ್ವಕಪ್ನಲ್ಲಿ ಬದಲಿ ಆಟಗಾರನಾಗಿ ಸ್ಥಾನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅವರ ಬದಲಿ ಧವನ್ ಆಯ್ಕೆಗೆ ಚಿಂತನೆ ನಡೆದಿದೆ ಎಂಬುವುದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಸ್ಟಾರ್ ಓಪನರ್ ಅನ್ನಿಸಿಕೊಂಡಿದ್ದ ಧವನ್ಗೆ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ. 2022ರ ಡಿಸೆಂಬರ್ನಲ್ಲಿ ಅವರು ಭಾರತದ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್