newsfirstkannada.com

ಮಣಿಪುರದ ಮಹಿಳೆಯರ ವಿವಸ್ತ್ರ ಕೃತ್ಯಕ್ಕೆ ಖಂಡನೆ; ಬೆಂಗಳೂರಿನಲ್ಲಿ ಪ್ರಗತಿಪರರ ಪ್ರತಿಭಟನೆ!

Share :

21-07-2023

    ಮಣಿಪುರದಲ್ಲಿ ಮನುಕುಲವೇ ತಲೆ ತಗ್ಗಿಸುವ ಕೃತ್ಯ!

    ಮಹಿಳೆ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

    ಬೆಂಗಳೂರಿನಲ್ಲಿ ಪ್ರಗತಿಪರ ಸಂಘಟನೆಗಳ ಹೋರಾಟ

ಬೆಂಗಳೂರು: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದ ವಿಡಿಯೋ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆರೋಪಿಗಳ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳುವಂತೆ ಇಡೀ ದೇಶ ಆಗ್ರಹಿಸುತ್ತಿದೆ. ಈ ಬೆನ್ನಲ್ಲೇ ಎಚ್ಚೆತ್ತ ಮಣಿಪುರ ಪೊಲೀಸ್ ಅಧಿಕಾರಿಗಳು ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು, ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರನ್ನು ಖಂಡಿಸಿ ಭಾರೀ ಹೋರಾಟಗಳು ನಡೆಯುತ್ತಿದೆ. ಇಂದು ಬೆಂಗಳೂರಿನಲ್ಲಿ ಪ್ರಗತಿಪರ ಸಂಘಟನೆಗಳು ಹೋರಾಟ ಮಾಡಿವೆ. ಟೌನ್​​ ಹಾಲ್​ ಮುಂದೆ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿವೆ.

ದಲಿತ, ಮಹಿಳಾ ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದು ನಮ್ಮ ದೇಹ, ನಿಮ್ಮ ಯುದ್ಧ ಭೂಮಿಯಲ್ಲ ಎಂದು ಘೋಷಣೆ ಕೂಗುವ ಮೂಲಕ ಸಿಟ್ಟು ಹೊರಹಾಕಿದ್ರು. ಸಾಮಾಜಿಕ ಹೋರಾಟಾರ್ತಿ ಅಕೈ ಪದ್ಮಶಾಲಿ ಸೇರಿದಂತೆ ವಕೀಲರು ಮತ್ತು ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣಿಪುರದ ಮಹಿಳೆಯರ ವಿವಸ್ತ್ರ ಕೃತ್ಯಕ್ಕೆ ಖಂಡನೆ; ಬೆಂಗಳೂರಿನಲ್ಲಿ ಪ್ರಗತಿಪರರ ಪ್ರತಿಭಟನೆ!

https://newsfirstlive.com/wp-content/uploads/2023/07/bng-3-1.jpg

Load More