newsfirstkannada.com

ಸೌಜನ್ಯ ಕೇಸ್​​ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಹೆಸರು ಕೇಳಿ ಬಂದ ಆರೋಪ; ಸಿಡಿದೆದ್ದ ಮಂಜುನಾಥ ಸ್ವಾಮಿ ಭಕ್ತರು

Share :

05-08-2023

  ಸಮಾವೇಶದಲ್ಲಿ ನ್ಯಾಯಕ್ಕಾಗಿ ಸೌಜನ್ಯ ತಾಯಿ ಪಟ್ಟು..!

  ಪ್ರಕರಣದ ಹೆಸರಲ್ಲಿ ಧರ್ಮಸ್ಥಳಕ್ಕೆ ಅವಹೇಳನ ಆರೋಪ

  ಸೌಜನ್ಯ ಕೇಸ್​ನಲ್ಲಿ ಕೇಳಿ ಬರ್ತಿದೆಯಾ ಶ್ರೀಕ್ಷೇತ್ರದ ಹೆಸರು?

ಬೆಂಗಳೂರು: 11 ವರ್ಷಗಳ ಬಳಿಕ ಮತ್ತೆ ನ್ಯಾಯಕ್ಕಾಗಿ ರಾಜ್ಯದಲ್ಲಿ ಪ್ರತಿಭಟನೆ ಹಾದಿ ಹಿಡಿದಿದೆ. ಆದ್ರೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳವನ್ನು ಅವಹೇಳನ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದ್ಯಾವಾಗ ಶ್ರೀಕ್ಷೇತ್ರದ ಹೆಸರು ಕೇಳಿಬರ್ತಿದ್ದಂತೆ ಮಂಜುನಾಥನ ಭಕ್ತರು ಸಿಡಿದೆದಿದ್ದಾರೆ. ಒಂದ್ಕಡೆ ಜಸ್ಟಿಸ್‌ ಫಾರ್‌ ಸೌಜನ್ಯ ಅಂತ ಕೂಗುತ್ತಿದ್ರೆ.. ಮತ್ತೊಂದು ಕಡೆ ಶ್ರೀಕ್ಷೇತ್ರದ ಪರವಾಗಿ ರಾರಾಜಿಸುತ್ತಿರೋ ಭಿತ್ತಿಪತ್ರ. ಸೌಜನ್ಯ ಪ್ರಕರಣದಲ್ಲಿ ಶ್ರೀಕ್ಷೇತ್ರದಲ್ಲಿ ಹೆಸರು ಕೇಳಿ ಬರುತ್ತಿದ್ದಂತೆ ಸಿಡಿದೆದ್ದಿರೋ ಭಕ್ತರು ಬೃಹತ್ ಸಮಾವೇಶ ನಡೆಸಿದ್ದರು. ಅದರಲ್ಲಿ ಸೌಜನ್ಯ ತಾಯಿ ಕೂಡ ಭಾಗಿಯಾಗಿದ್ದರು.

ಸೌಜನ್ಯ ಪ್ರಕರಣದಲ್ಲಿ ಕೇಳಿ ಬರ್ತಿದೆ ಶ್ರೀಕ್ಷೇತ್ರದ ಹೆಸರು
ಧರ್ಮಸ್ಥಳದ ಅವಹೇಳನ ಖಂಡಿಸಿ ಸಿಡಿದೆದ್ದ ಭಕ್ತರು

ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಲಿ, ಶ್ರೀಕ್ಷೇತ್ರದ ಮೇಲಿನ ಸುಳ್ಳು ಆರೋಪ ಕೊನೆಗಾಣಲಿ ಎಂಬ ಧ್ಯೇಯವಾಕ್ಯದಡಿ ಸಮಾವೇಶ ನಡೆಸಲಾಯ್ತು. ಬೆಳ್ತಂಗಡಿಯ ಉಜಿರೆ ಎಸ್‌ಡಿಎಂ ಕಾಲೇಜು ಮುಂಭಾಗ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ವತಿಯಿಂದ ನಡೆದ ಸಮಾವೇಶದಲ್ಲಿ, ಸುಳ್ಳು ಆರೋಪ ಸೋಲಲಿ. ಧರ್ಮಸ್ಥಳದ ಮಂಜುನಾಥಸ್ವಾಮಿಗೆ ಜಯವಾಗಲಿ ಎಂಬ ಭಿತ್ತಿ ಪತ್ರದೊಂದಿಗೆ ಭಕ್ತಾಧಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದರು. ಇನ್ನು ಸಮಾವೇಶದಲ್ಲಿ ಶಾಸಕ ಹರೀಶ್ ಪೂಂಜಾ, ಪ್ರತಾಪ್ ಸಿಂಹ ನಾಯಕ್, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್‌ ಸೇರಿದಂತೆ ಪ್ರಮುಖರು ಭಾಗಿಯಾಗಿದ್ರು. ಮಳೆಯನ್ನು ಲೆಕ್ಕಿಸದೇ ಸಮಾವೇಶದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ನ್ಯಾಯಕ್ಕಾಗಿ ಸೌಜನ್ಯ ತಾಯಿ ಪಟ್ಟು

ಒಂದು ಕಡೆ ಶ್ರೀಕ್ಷೇತ್ರದ ಪರವಾಗಿ ಸಮಾವೇಶ ನಡೆಯುತ್ತಿದ್ರೆ, ಮತ್ತೊಂದು ಕಡೆ ಜಸ್ಟಿಸ್ ಫಾರ್ ಸೌಜನ್ಯ ಎಂಬ ಭಿತ್ತಿಪತ್ರದೊಂದಿಗೆ, ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ ಅವ್ರು ಕುಟುಂಬಸ್ಥರು ನ್ಯಾಯಕ್ಕಾಗಿ ಮೊರೆ ಇಟ್ಟಿದ್ರು. ಸೌಜನ್ಯ ಫೋಟೋ ಹಿಡಿದು ವೇದಿಕೆ ಹತ್ತಲು ಮುಂದಾಗಿದ್ದವರನ್ನ ಪೊಲೀಸರು ಅರ್ಧದಲ್ಲೇ ತಡೆಹಿಡಿದ್ರು. ಸೌಜನ್ಯ ಪ್ರಕರಣದಲ್ಲಿ ಶ್ರೀಕ್ಷೇತ್ರದ ಹೆಸ್ರು ಬರಬಾರ್ದು ಎಂದ್ರೆ ಸೂಕ್ತ ತನಿಖೆ ಆಗ್ಬೇಕು ಅನ್ನೋದು ಸೌಜನ್ಯ ಕುಟುಂಬಸ್ಥರ ಆಗ್ರಹವಾಗಿದ್ರೆ..ಇದ್ರಲ್ಲಿ ಶ್ರೀಕ್ಷೇತ್ರದ ಹೆಸರು ಹಾಳಾಗ್ತಿದೆ. ಹೀಗಾಗಿ ಸೂಕ್ತ ತನಿಖೆ ಆಗ್ಬೇಕು ಅನ್ನೋದು ಮಂಜುನಾಥನ ಭಕ್ತರ ಆಗ್ರಹವಾಗಿದೆ. ಈ ಬೆಳವಣಿಗೆಯಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌಜನ್ಯ ಕೇಸ್​​ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಹೆಸರು ಕೇಳಿ ಬಂದ ಆರೋಪ; ಸಿಡಿದೆದ್ದ ಮಂಜುನಾಥ ಸ್ವಾಮಿ ಭಕ್ತರು

https://newsfirstlive.com/wp-content/uploads/2023/08/bjp-10.jpg

Load More