ಫೇಮಸ್ ಪಾಪ್ ಸಿಂಗರ್ ಮನೆಯಲ್ಲಿ ಸಂಭ್ರಮ ಬಲು ಜೋರು
ಕೆನಾಡದ ಸಿಂಗರ್ಗೆ ಕೋಟಿ ಕೋಟಿ ರೂಪಾಯಿ ಸುರಿದಿದ್ದ ಅಂಬಾನಿ
ಫೋಟೋ ನೋಡಿ ಮುದ್ದಾದ ಮಗುವಿಗೆ ಫ್ಯಾನ್ಸ್ ಶುಭ ಹಾರೈಕೆ
ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ಭಾಗಿಯಾಗಿದ್ದ ಫೇಮಸ್ ಪಾಪ್ ಸಿಂಗರ್ ಮನೆಯಲ್ಲಿ ಸಂಭ್ರಮದ ಮನೆಮಾಡಿದೆ. ಕಾರಣ, ಸಿಂಗರ್ ಜಸ್ಟಿನ್ ಬೀಬರ್ ತಂದೆಯಾಗಿದ್ದಾರೆ.
ಜಸ್ಟಿನ್ ಹಾಗೂ ಹೈಲಿ ದಂಪತಿಗೆ ಗಂಡು ಮಗು ಜನನವಾಗಿದೆ. ಈ ಖುಷಿ ವಿಚಾರವನ್ನು ಜಸ್ಟಿನ್ ಬೀಬರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮುದ್ದಾದ ಮಗುವಿನ ಕಾಲಿನ ಫೋಟೋ ಜೊತೆಗೆ ಜ್ಯಾಕ್ ಬ್ಲೂಸ್ ಬೈಬರ್ ಅಂತ ಹೆಸರನ್ನು ಬರೆದು ಹರಿಬಿಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಮುದ್ದಾದ ಮಗುವಿಗೆ ಶುಭ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ಮುಂಬೈಗೆ ಬಂದ ಜಸ್ಟಿನ್ ಬೈಬರ್.. ಪಾಪ್ ಐಕಾನ್ಗೆ ಮುಖೇಶ್ ಅಂಬಾನಿಯಿಂದ ಕೋಟಿ ಕೋಟಿ ಹಣ!
ಮೇ ತಿಂಗಳಲ್ಲಿ ರೊಮ್ಯಾಂಟಿಕ್ ವೀಡಿಯೊ ಶೇರ್ ಮಾಡಿಕೊಳ್ಳುವ ಮೂಲಕ ಮೊದಲ ಮಗುವಿನ ನಿರೀಕ್ಷಿಸುತ್ತಿದ್ದೇವೆ ಎಂದಿದ್ದರು. 2006ರಲ್ಲಿ ಸೆಲೆನಾ ಗೊಮೆಜ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವಾಗ ಹೈಲಿ ಜಸ್ಟಿನ್ ಅವರನ್ನು ಭೇಟಿಯಾದರು. ಸೆಲೆನಾ ಜೊತೆ ಸಂಬಂಧ ಮುರಿದುಬಿದ್ದ ನಂತರ ಜಸ್ಟಿನ್ ಹೈಲಿಯೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. 2016ರಲ್ಲಿ ಮತ್ತೆ ಡೇಟಿಂಗ್ ಪ್ರಾರಂಭಿಸಿದರು. ಎರಡು ವರ್ಷಗಳ ನಂತರ 2018ರಲ್ಲಿ ಹೇಲಿ ಮತ್ತು ಜಸ್ಟಿನ್ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ರಹಸ್ಯವಾಗಿ ಮದುವೆಯಾದರು. ಒಂದು ವರ್ಷದ ಬಳಿಕ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಮತ್ತೆ ವಿವಾಹವಾದರು.
View this post on Instagram
ಕೆನಾಡದ ಸಿಂಗರ್ ಜಸ್ಟಿನ್ ಬೀಬರ್ ಪಾಪ್ ಐಕಾನ್ ಎಂದೇ ಜನಪ್ರಿಯರು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಜಸ್ಟಿನ್ ಕಾಣಿಸಿಕೊಂಡಿದ್ದರು. ಸಂಗೀತ ಕಾರ್ಯಕ್ರಮದಲ್ಲಿ ಹಾಡುವುದಕ್ಕಾಗಿ 83 ಕೋಟಿ ರೂಪಾಯಿ ನೀಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ