newsfirstkannada.com

ರಿಹಾನ್ನಾಗಿಂತ ಹೆಚ್ಚು ಸಂಭಾವನೆ ಪಡೆದ ಪಾಪ್​ ಸಿಂಗರ್​ ಜಸ್ಟಿನ್; ಅಬ್ಬಬ್ಬಾ! ಎಷ್ಟು ಕೋಟಿ ಗೊತ್ತಾ?

Share :

Published July 7, 2024 at 10:25pm

  ಕೊನೆ ಮಗನ ಮದುವೆಯಲ್ಲಿ ಇಂಧ್ರಲೋಕವನ್ನೆ ಸೃಷ್ಟಿಸಿದ ಮುಕೇಶ್ ಅಂಬಾನಿ

  ಕಳೆದ ಮಾರ್ಚ್​ನಲ್ಲಿ ನಡೆದಿದ್ದ ಅಂಬಾನಿ ಪುತ್ರ ಮೊದಲ ಪ್ರಿ-ವೆಡ್ಡಿಂಗ್ ಸಂಭ್ರಮ

  ಪಾಪ್​ ಸಿಂಗರ್​ ಹಾಡಿಗೆ ಹುಚ್ಚೆದ್ದು ಕುಣಿದ ಜಾಹ್ನವಿ ಕಪೂರ್​, ಸಾರಾ ಅಲಿ ಖಾನ್​

ದೇಶದ ಅತಿ ದೊಡ್ಡ ಸುದ್ದಿ ಏನಪ್ಪಾ ಅಂದ್ರೆ ಮುಕೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ. ಯಾಕಂದ್ರೆ ಇದು ಮದುವೆಯಲ್ಲ ವೈಭವದ ಮಹೋತ್ಸವ. ಕಳೆದ ಮಾರ್ಚ್​ನಲ್ಲಿ ಅಂಬಾನಿ ಪುತ್ರ ಮೊದಲ ಪ್ರಿ-ವೆಡ್ಡಿಂಗ್ ಸಂಭ್ರಮ ನೋಡಿ ಇಡೀ ಜಗತ್ತೆ ಬೆಕ್ಕಸ ಬೆರಗಾಗಿತ್ತು. ಈಗ ಎರಡನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಮತ್ತೆ ಸಂಭ್ರಮ ಮೇಳೈಸಿದೆ. ದೇಶದ ಅತಿದೊಡ್ಡ ಶ್ರೀಮಂತರಲ್ಲಿ ಅಂಬಾನಿ ಕೂಡ ಒಬ್ಬರು ಅನ್ನೋದೆ ಗೊತ್ತಿರುವ ವಿಚಾರ. ಇಂಥಹ ಶ್ರೀಮಂತ ವ್ಯಕ್ತಿಯ ಮಗನ ಮದುವೆ ಅಂದ್ರೆ ಅಲ್ಲಿ ಅದ್ಧೂರಿತನಕ್ಕೆ ಕೊರತೆ ಇರಲ್ಲ. ಇಂಧ್ರಲೋಕವನ್ನೆ ಸೃಷ್ಟಿ ಮಾಡಿರುತ್ತಾರೆ ಅನ್ನೋದು ಈಗಾಗಲೇ ಸಾಬೀತಾಗಿದೆ.

ಅನಂತ್-ರಾಧಿಕಾ ಮದುವೆ ಸಂಭ್ರಮ ಜೋರು! ಧರೆಗಿಳಿದ ಇಂಧ್ರಲೋಕ!

ಭಾರತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿವೆ. ಜುಲೈ 12 ರಿಂದ 14ರವರೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆ ಅದ್ಧೂರಿಯಾಗಿ ನೇರವೇರಲಿದೆ. ಈ ಅದ್ಧೂರಿ ಮದುವೆಯಗಾಗಿ ಕಳೆದ ಒಂದು ವರ್ಷದಿಂದ ಗ್ರ್ಯಾಂಡ್ ಆಗಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಈಗ ಎರಡನೇ ಪ್ರಿ ವೆಡ್ಡಿಂಗ್ ಮಹೋತ್ಸವ ಇಡೀ ಜಗತ್ತು ಕಣ್ಣರಳಿಸಿ ನೋಡುವಂತೆ ಮಾಡಿದೆ. ಡ್ಯಾನ್ಸ್, ಹಾಡು, ಇಂಧ್ರಲೋಕವೇ ಧರೆಗಿಳಿದು ಬಂದಂತಿದೆ.

View this post on Instagram

A post shared by Ambani Family (@ambani_update)

ಸಂಗೀತ್ ಸಂಭ್ರಮದಲ್ಲಿ ಅಂಬಾನಿ ಮಾಯಾಲೋಕ

ಅನಂತ್ ಅಂಬಾನಿ ಮತ್ತು ರಾಧಿಕಾರ ಮದುವೆ ಸಂಭ್ರಮಕ್ಕೆ ಮುಕೇಶ್ ಅಂಬಾನಿ ಮಾಯಲೋಕವನ್ನೆ ಸೃಷ್ಟಿ ಮಾಡಿಬಿಟ್ಟಿದ್ದಾರೆ. ಜುಲೈ 5ರಂದು ನಡೆದ ಸಂಗೀತ್ ಕಾರ್ಯಕ್ರಮಕ್ಕಾಗಿ ಕಣ್ಣು ಕೊರೈಸುವಂತೆ ವೇದಿಕೆಯನ್ನ ಸೃಷ್ಟಿ ಮಾಡಲಾಗಿತ್ತು. ಈ ಸಂಗೀತ್​ ಮಹೋತ್ಸದಲ್ಲಿ ಬಾಲಿವುಡ್​​ ಸೆಲೆಬ್ರೀಟಿಸ್ ಸಲ್ಮಾನ್ ಖಾನ್, ರಣವೀರ್ ಸಿಂಗ್, ರಣಬೀರ್ ಕಪೂರ್, ಆಲಿಯಾ ಭಟ್, ಸಾರಾ ಅಲಿ ಖಾನ್ ಸೇರಿದಂತೆ ಬಿಟೌನ್ ತಾರೆಯರ ದಂಡೇ ಆಗಮಿಸಿತ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದ ಬಾಲಿವುಡ್ ಸೆಲೆಬ್ರೆಟಿಗಳ ವೆರೈಟಿ ಕಾಸ್ಟೂಮ್​ಗಳನ್ನ ನೋಡೋದಕ್ಕೆ ಎರಡು ಕಣ್ಣು ಸಾಲದು. ಒಬ್ಬೊರದ್ದು ಒಂದೊಂದು ಕಾನ್ಸೆಪ್ಟ್. ಹಬ್ಬದಂತೆ ಸಂಭ್ರಮ ಮೆಳೈಸಿತ್ತು.

ಮಗನ ಮದುವೆ ಅಂದ್ರೆ ಅಲ್ಲಿ ಹೆತ್ತವರಿಗಿಂತ ಹೆಚ್ಚು ಖುಷಿ ಪಡೋರು ಮತ್ಯಾರು ಇರೋದಿಲ್ಲ. ಅವನು ಅದೆಷ್ಟೆ ಶ್ರೀಮಂತನೇ ಆಗಿರಲಿ, ಅಥವಾ ಬಡವನೇ ಆಗಿರಲಿ. ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಅತ್ಯಮೂಲ್ಯ ಕ್ಷಣ. ಹೀಗಾಗಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂಡ ಮಗನ ಮದುವೆ ಸಂಭ್ರಮವನ್ನು ಅದೆಷ್ಟು ಎಂಜಾಯ್ ಮಾಡ್ತಿದ್ದಾರೆ. ಮುಂದೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂತಿದ್ರೆ. ಹಿಂದೆ ಅಂಬಾನಿ ಕುಟುಂಬದ ಮೊಮ್ಮಕಳು ಆಡವಾಡ್ತಿದ್ದಾರೆ. ಇತ್ತ ಮುಕೇಶ್ ಜಾಲಿಯಾಗಿ ಹಾಡು ಹಾಡ್ಕೊಂಡು ಎಂಜಾಯ್ ಮಾಡ್ತಿದ್ದಾರೆ. 60ರ ದಶಕದಲ್ಲಿ ರಿಲೀಸ್ ಆಗಿದ್ದ ಬ್ರಹ್ಮಚಾರಿ ಸಿನಿಮಾದ ಹಾಡನ್ನ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರು ಮೊಮ್ಮಕ್ಕಳೊಂದಿಗೆ ರೀ ಕ್ರಿಯೇಟ್ ಮಾಡಿದ್ದಾರೆ. ಚಕ್ಕೆ ಮೇ ಚಕ್ಕಾ ಎಂಬ ಹಿಂದಿ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ.

ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಮಕ್ಕಳಾದ ಪೃಥ್ವಿ ಮತ್ತು ವೇದಾ, ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ಅವಳಿಗಳಾದ ಆದಿಯಾ ಮತ್ತು ಕೃಷ್ಣ ಜೊತೆ ಅಂಬಾನಿ ದಂಪತಿ ಮಗನ ಮದುವೆ ಖುಷಿಯನ್ನ ಸಂಭ್ರಮಿಸಿದೆ. ಜಗಮಗಿಸುವ ವೇದಿಕೆ, ಕಲರ್ಫುಫುಲ್ ಲೈಟಿಂಗ್ಸ್, ಇದು ಅನಂತ್ ಅಂಬಾನಿ ಮತ್ತು ರಾಧಿಕಾ ಸಂಗೀತ್ ಮಹೋತ್ಸಕ್ಕೆ ರೆಡಿಯಾಗಿದ್ದ ವೇದಿಕೆ. ಅರಮನೆಯಂತ ಸ್ಟೇಜ್​ ಮೇಲೆ ಅಂಬಾನಿ ಕುಟುಂಬ ಭರ್ಜರಿಯಾಗಿ ಎಂಟ್ರಿ ಕೊಟ್ಟಿತ್ತು. ಶಾರುಕ್ ಅಭಿನಯದ ಓಂ ಶಾಂತಿ ಓಂ ಹಾಡಿಗೆ ಅಂಬಾನಿ ಫ್ಯಾಮಿಲಿ ಮಸ್ತ್ ಮಸ್ತ್ ಸ್ಟೆಪ್ ಹಾಕಿತ್ತು. ಕಲರ್ ಫುಲ್ ಕಾಸ್ಟ್ಯೂಮ್​ನಲ್ಲಿ ಒಬ್ಬೊರಾಗಿ ಎಂಟ್ರಿ ಕೊಟ್ಟಿದ್ರು, ಕೊನೆಗೆ ಮೇನ್ ಅಟ್ರಾಕ್ಷನ್ ಅನಂತ್ ಅಂಬಾನಿ ಮತ್ತು ರಾಧಿಕಾ ಎಂಟ್ರಿ ಕೊಟ್ಟಿದ್ರು. ಮೇಕ್ ಸಮ್ ನಾಯ್ಸ್​ ಅಂತ ಫುಲ್ ಕುಣಿದು ಸ್ಟೇಜ್​ನಲ್ಲಿ ದೂಳೆಬ್ಬಿಸಿದ್ರು.

ವಧು ರಾಧಿಕಾ ಡ್ಯಾನ್ಸ್ ನೋಡಿ ಬಾಲಿವುಡ್ ಮಂದಿ ಫಿದಾ!

ಒಂದ್ಕಡೆ ಫ್ಯಾಮಿಲಿ ಡ್ಯಾನ್ಸ್ ಮನಸೂರೆಗೊಳಿಸಿದ್ರೆ, ಇನ್ನೊಂದ್ಕಡೆ ಅನಂತ ಅಂಬಾನಿ ಭಾವಿ ಪತ್ನಿ ರಾಧಿಕಾ ಡ್ಯಾನ್ಸ್ ನೋಡಿ ಬಿಟೌನ್ ಸುಂದರಿಯರು ಶಾಕ್ ಆಗಿದ್ರು. ನವಿಲು ನಾಚುವಂತೆ ರಾಧಿಕಾ ಡ್ಯಾನ್ಸ್ ಮಾಡ್ತಿದ್ರೆ ಬಾಲಿವುಡ ತಾರೆಯರು ಬೆರಗು ಕಣ್ಣಿನಿಂದ ಆ ಡ್ಯಾನ್ಸ್ ಕಣ್ತುಂಬಿಕೊಳ್ಳುತ್ತಿದ್ರು. ಹೌದು, ಅನಂತ್ ಅಂಬಾನಿ ಮತ್ತು ರಾಧಿಕಾ ಸಂಗೀತ್ ಕಾರ್ಯಕ್ರಮದ ಮೇನ್ ಅಟ್ರಾಕಷನ್ ಅಂದ್ರೆ ಅದು ಗಾಯಕ ಜಸ್ಟಿನ್ ಬೀಬರ್. ಈ ಹಿಂದೆ ಮಾರ್ಚ್​ನಲ್ಲಿ ನಡೆದಿದ್ದ ಅದ್ಧೂರಿ ಪ್ರಿ ವೆಡ್ಡಿಂಗ್ ಇವೆಂಟ್​ಗೆ ಪಾಪ್​ ಗಾಯಕಿ ರಿಹಾನ್ನಾ ದೂಳೆಬ್ಬಿಸಿದ್ಳು. ಆದ್ರೆ ಈ ಎರಡನೇ ಪ್ರಿ ವೆಡ್ಡಿಂಗ್​ಗಾಗಿ ಮುಕೇಶ್ ಅಂಬಾನಿ ಹಾಲಿವುಡ್ ಗಾಯಕ ಜಸ್ಟಿನ್ ಬೀಬರ್​​ನನ್ನ ಕರೆಸಿದ್ರು. ಸ್ಟೇಜ್​ ಮೇಲೆ ಬೀಬರ್ ಹಾಡ್ತಿದ್ರೆ ಇತ್ತ ಬಾಲಿವುಡ್ ಮಂದಿ ಹುಚ್ಚೆದ್ದು ಕುಣಿದಿದ್ರು. ಜಾಹ್ನವಿ ಕಪೂರ್​, ಸಾರಾ ಅಲಿ ಖಾನ, ರಣವೀರ್ ಸಿಂಗ್​ ಇಡೀ ವೇದಿಕೆ ತುಂಬಾ ದೂಳೇಬ್ಬಿಸಿಬಿಟ್ಟಿದ್ರು.

ಅದರಲ್ಲೂ ಜಸ್ಟಿನ್ ಫೇಮಸ್ ಸಾಂಗ್ ಬೇಬಿ. ಹಾಡ್ತಿದ್ದಂತೆ ಬಾಲಿವುಡ್ ತಾರೆಯರ ಜೋಶ್ ಇನ್ನೂ ಹೆಚ್ಚಾಗಿತ್ತು. ಬೇಬಿ ಬೇಬಿ ಅಂತ ಹಾಡಿ ಫುಲ್ ಎಂಜಾಯ್ ಮಾಡಿದ್ರು. ಇಡೀ ಸಂಗೀತ್ ಸೆರೆಮನಿಯೇ ಫುಲ್ ರಾಕಿಂಗ್ ಆಗಿತ್ತು, ಮೊದಲ ಸಲ ಭಾರತಕ್ಕೆ ಬಂದಿಳಿದಿದ್ದ ರಿಹಾನ್ನಾ, ಅನಂತ್ ಅಂಬಾನಿಯ ಮದುವೆ ಕಾರ್ಯಕ್ರಮದಲ್ಲಿ ಬೊಂಬಾಟ್ ಶೋ ಕೊಟ್ಟಿದ್ದರು. ಅವತ್ತು ರಿಹಾನ್ನಾ ಒಂದು ದಿನಕ್ಕೆ ಬರೋಬ್ಬರಿ 53 ಕೋಟಿ ಪಡೆದಿದ್ಳು. ಎರಡನೇ ಪ್ರಿ ವೆಡ್ಡಿಂಗ್​ಗಾಗಿ ಭಾರತಕ್ಕೆ ಬಂದಿದ್ದ ಜಸ್ಟಿನ್ ಬೀಬರ್ ಬರೋಬ್ಬರಿ 83 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಅಂಬಾನಿ ಕುಟುಂಬದ ಡ್ಯಾನ್ಸ್ ಕಿಚ್ಚು ಹಚ್ಚಿಸಿದ್ರೆ, ಬಾಲಿವುಡ್ ಬ್ಯೂಟಿಗಳ ಜಬರ್ದಸ್ತ್ ಸ್ಟೆಪ್​ ಇನ್ನೂ ಕಿಕ್​ ಕೊಡುತ್ತೆ. ಸಖತ್ ಜೋಶ್​​ನಲ್ಲಿದ್ದ ಬಾಲಿವುಡ್ ತಾರೆಯರ ಡ್ಯಾನ್ಸ್​​ ಸಂಗೀತ್ ಕಾರ್ಯಕ್ರಮದ ಕಿಚ್ಚನ್ನ ಇನ್ನೂ ಹೆಚ್ಚು ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಹಾನ್ನಾಗಿಂತ ಹೆಚ್ಚು ಸಂಭಾವನೆ ಪಡೆದ ಪಾಪ್​ ಸಿಂಗರ್​ ಜಸ್ಟಿನ್; ಅಬ್ಬಬ್ಬಾ! ಎಷ್ಟು ಕೋಟಿ ಗೊತ್ತಾ?

https://newsfirstlive.com/wp-content/uploads/2024/07/rihana.jpg

Load More