newsfirstkannada.com

ಮುಂಬೈಗೆ ಬಂದ ಜಸ್ಟಿನ್ ಬೈಬರ್.. ಪಾಪ್ ಐಕಾನ್​ಗೆ ಮುಖೇಶ್​ ಅಂಬಾನಿಯಿಂದ ಕೋಟಿ ಕೋಟಿ ಹಣ!

Share :

Published July 4, 2024 at 3:59pm

  ಎಲ್ಲ ಸಿಂಗರ್ಸ್​​​ಗಿಂತ ಹೆಚ್ಚು ಹಣ ಪಡೆದಿದ್ದಾರಾ ಜಸ್ಟಿನ್ ಬೈಬರ್?

  ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು

  ಕೆನಾಡದ ಸಿಂಗರ್​ಗೆ ಕೋಟಿ ಕೋಟಿ ರೂಪಾಯಿ ಸುರಿದ ಅಂಬಾನಿ

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭ ಜುಲೈ 12 ರಂದು ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಅಂಬಾನಿ ಫ್ಯಾಮಿಲಿಯಲ್ಲಿ ಸಡಗರ ಮುಗಿಲು ಮುಟ್ಟಿದೆ. ಮನೆ ತುಂಬ ಬಂಧು-ಬಳಗ, ಸ್ನೇಹಿತರು ಸೇರಿದಂತೆ ನೂರಾರು ಜನ ಲವಲವಿಕೆಯಲ್ಲಿ ತೊಡಗಿದ್ದಾರೆ. ಕಿರಿಯ ಪುತ್ರನ ಮದುವೆಗೆ ಕೋಟಿ ಕೋಟಿ ರೂಪಾಯಿಗಳನ್ನ ಸುರಿಯುತ್ತಿರೋ ಮುಖೇಶ್​ ಅಂಬಾನಿ ಕೆನಾಡದ ಸಿಂಗರ್​ ಜಸ್ಟಿನ್ ಬೈಬರ್​ಗೆ ಎಷ್ಟು ಕೋಟಿ ದುಡ್ಡು ಕೊಟ್ಟಿದ್ದಾರೆ ಎಂಬುದು ಕೇಳಿದ್ರೆ ಶಾಕ್ ಆಗ್ತೀರಾ!.

ಇದನ್ನೂ ಓದಿ: BREAKING: ನಟ ದರ್ಶನ್‌ಗೆ ಮತ್ತೆ ಜೈಲೇ ಗತಿ.. ನ್ಯಾಯಾಂಗ ಬಂಧನ ವಿಸ್ತರಣೆ; ಎಷ್ಟು ದಿನ?

ಕೆನಾಡದ ಸಿಂಗರ್​ ಜಸ್ಟಿನ್ ಬೈಬರ್​ ಪಾಪ್ ಐಕಾನ್ ಎಂದೇ ವಿಶ್ವದ್ಯಾಂತ ಪರಿಚಯ. ಈಗಾಗಲೇ ಜಸ್ಟಿನ್ ಬೈಬರ್​ ಮುಂಬೈಗೆ ಆಗಮಿಸಿದ್ದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಸಂಗೀತಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದಕ್ಕಾಗಿಯೇ ಪಾಪ್ ಸೆನ್ಸೇಷನ್ ಜಸ್ಟಿನ್ ಬೈಬರ್ ಅವರು 83 ಕೋಟಿ ರೂಪಾಯಿಗಳನ್ನು ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಟರ್​​​ನ್ಯಾಷನಲ್ ಪಾಪ್​ ಸೆನ್ಸೇಷನ್​ ರಿಹಾನ್ನಾ, ಬೆಯೋನ್ಸ್ ಮತ್ತು ಎಕಾನ್‌ಗಿಂತ ಬೈಬರ್​ ಅಧಿಕ ಹಣ ಪಡೆದಿದ್ದಾರೆ ಎನ್ನಲಾಗಿದೆ. ಕೇವಲ ಒಂದು ಕಾರ್ಯಕ್ರಮಕ್ಕಾಗಿ ಮುಖೇಶ್ ಅಂಬಾನಿ ಭಾರೀ ಮೊತ್ತದ ಹಣ ಕೊಟ್ಟಿದ್ದಕ್ಕೆ ಎಲ್ಲರೂ ಅಶ್ಚರ್ಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!

View this post on Instagram

A post shared by Viral Bhayani (@viralbhayani)

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ನಾಳೆ (ಜು.5) ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಬಾಲಿವುಡ್​ ನಟ, ನಟಿಯರು, ಉದ್ಯಮಿಗಳು, ಕ್ರಿಕೆಟರ್ಸ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇಂತಹ ಅದ್ಧೂರಿ ಸಮಾರಂಭದಲ್ಲಿ ಪಾಪ್ ಐಕಾನ್ ಜಸ್ಟಿನ್ ಬೈಬರ್ ಸಂಗೀತಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇನ್ನು ಜಸ್ಟಿನ್ ಬೈಬರ್ 2022ರಲ್ಲೇ ಭಾರತಕ್ಕೆ ಬರಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಬಂದಿರಲಿಲ್ಲ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈಗೆ ಬಂದ ಜಸ್ಟಿನ್ ಬೈಬರ್.. ಪಾಪ್ ಐಕಾನ್​ಗೆ ಮುಖೇಶ್​ ಅಂಬಾನಿಯಿಂದ ಕೋಟಿ ಕೋಟಿ ಹಣ!

https://newsfirstlive.com/wp-content/uploads/2024/07/ANANTH_AMBANI_NEW.jpg

Load More