newsfirstkannada.com

ಕಾಂಗ್ರೆಸ್​ ಸಭೆಯಲ್ಲೇ ಮುನಿಸಿಕೊಂಡ್ರಾ ಮಿನಿಸ್ಟರ್​..? ಸಿಡಿಲು ಬಡಿದಂತಿತ್ತು ಮುನಿಯಪ್ಪ ಮಾತು!

Share :

16-08-2023

    ‘ಹಿರಿಯರು ಬಿಡಿ.. ಹೊಸಬರಿಗೆ ಕೊಡಿ’ ಮಾತು ಸಂಚಲನ!

    ಮುನಿಯಪ್ಪ ಮಾತಿಗೆ ಚಪ್ಪಾಳೆ.. ಕರತಾಡನದ ಸಹಮತ!

    ‘ಲೋಕ’ ಸಮರದ ಹೊತ್ತಿಗೆ ಸರ್ಕಾರ ಪತನವಾಗುತ್ತಾ?

ಬೆಂಗಳೂರು: ಮಳೆ ನಿಂತ್ರು ಹನಿ ನಿಲ್ಲದು ಅನ್ನೋ ಹಾಗೆ, ಕಾಂಗ್ರೆಸ್​​ನಲ್ಲಿನ ಗೊಂದಲ ಅಲ್ಪ ವಿರಾಮ ಇದ್ದಂತೆ. ಸಿಎಂ ಸ್ಥಾನಕ್ಕೆ ಎರಡು ವಾರ ನಡೆದ ಜಂಗೀ ಕುಸ್ತಿ ಬಳಿಕ ಪವರ್​​ ಶೇರಿಂಗ್​​​ ಇನ್ನೂ ಸಸ್ಪೆನ್ಸ್​​ ಆಗಿಯೇ ಇದೆ. ಕಾಂಗ್ರೆಸ್‌ ಸರ್ವ ಸದಸ್ಯರ ಸಭೆಯಲ್ಲಿ ಸಚಿವ ಕೆ.ಹೆಚ್​​​. ಮುನಿಯಪ್ಪ ಆಡಿದ ಅದೊಂದು ಮಾತು, ಗುಡುಗು, ಸಿಡಿಲು ರೀತಿ ಅಪ್ಪಳಿಸಿದೆ.

‘ಹಿರಿಯರು ಕುರ್ಚಿ ಖಾಲಿ ಮಾಡಿ, ಹೊಸಬರಿಗೆ ಅವಕಾಶ ಕೊಡಿ’
ಕಾಂಗ್ರೆಸ್​​​ನಲ್ಲಿ ಸಂಚಲನ ಸೃಷ್ಟಿಸಿದ ಸಚಿವ ಮುನಿಯಪ್ಪ ಹೇಳಿಕೆ

ಸಚಿವ ಕೆ.ಹೆಚ್‌ ಮುನಿಯಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಮುನಿಯಪ್ಪ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಅದರಲ್ಲೂ ಕಾಂಗ್ರೆಸ್ ವಲಯದಲ್ಲಿ ಈ ಮಾತು ಸಂಚಲನ ಅಲ್ಲ, ಭೂಕಂಪವೇ ಸೃಷ್ಟಿಸಿದೆ. ಅಧಿಕಾರಕ್ಕೆ ಬಂದಾಗೊಮ್ಮೆ ಗೂಟದ ಕಾರಿನ ಒಡೆಯರಾಗ್ತಿದ್ದ ಹಿರಿಯ ನಾಯಕರು ಈ ಮಾತಿಗೆ ಬೆಚ್ಚಿಬಿದ್ದಿದ್ದಾರೆ.

ಎರಡೂವರೆ ವರ್ಷ ಬಳಿಕ ಸಂಪುಟಕ್ಕೆ ಮೇಜರ್ ಸರ್ಜರಿ ಪಕ್ಕಾನಾ?
ಹಿರಿಯ ಸಚಿವರಿಗೆ ಸ್ಥಾನ ಬಿಟ್ಟುಕೊಡುವ ಪರಿಸ್ಥಿತಿ ಸೃಷ್ಟಿ ಆಗುತ್ತಾ?

ಸಿಎಂ ಮತ್ತು ಡಿಸಿಎಂ ನೇಮಕದ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ, ಸಚಿವ ಸಂಪುಟಕ್ಕೆ ಮೊದಲ ಬಾರಿಗೆ ಪ್ರವೇಶಿಸಿದವರನ್ನು ಹೊರತುಪಡಿಸಿ ಉಳಿದವರಿಗೆ ದಾರಿ ಮಾಡಿಕೊಟ್ಟರೆ ಒಳ್ಳೆಯದು, ಇದರಿಂದ ಇತರರಿಗೂ ಅವಕಾಶ ಸಿಗುತ್ತದೆ.

– ಕೆ.ಹೆಚ್​ ಮುನಿಯಪ್ಪ

ಇದೇ ಪ್ರಶ್ನೆಗಳನ್ನ ಹುಟ್ಟು ಹಾಕುವ ರೀತಿಯಲ್ಲಿ ಮುನಿಯಪ್ಪ ಹೇಳಿಕೆ ನೀಡಿದ್ದಾರೆ. ಸಿಎಂ, ಡಿಸಿಎಂ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತಿ ಮಧ್ಯೆ ಆಡಿದ ಮಾತು ಕುತೂಹಲಕ್ಕೆ ಕಾರಣ ಆಗಿದೆ. ಮೊದಲ ಬಾರಿಗೆ ಸಚಿವರಾದವರನ್ನ ಬಿಟ್ಟು ಉಳಿದ ಹಿರಿಯರೂ ಎರಡೂವರೆ ವರ್ಷ ಬಳಿಕ ಅಧಿಕಾರ ತ್ಯಾಗ ಮಾಡಬೇಕು. ಬೇರೆಯವರಿಗೂ ಅವಕಾಶ ಮಾಡಿಕೊಡೋಣ. ಈ ಮೂಲಕ ಪಕ್ಷದಲ್ಲಿ ಹೊಸ ಮಾದರಿಗೆ ಮೇಲ್ಪಂಕ್ತಿ ಹಾಡೋಣ ಅಂತ ನುಡಿದಿದ್ದಾರೆ. ಇನ್ನು, ಮುನಿಯಪ್ಪ ಹೇಳಿಕೆ ನೀಡ್ತಿದ್ದಂತೆ ಸಭೆಯಲ್ಲಿ ಚಪ್ಪಾಳೆ ಮೂಲಕ ಕರತಾಡನದ ಸಹಮತ ವ್ಯಕ್ತ ಆಗಿದೆ. ಸದ್ಯ ಇದೇ ಮಾತು ಪಕ್ಷದೊಳಗೆ ಚರ್ಚೆ ಹುಟ್ಟು ಹಾಕಿದೆ. ಮುನಿಯಪ್ಪ ಮಾತಿಗೆ ಕಾರವಾರದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಅರೆಬರೆ ಬೆಂಬಲ ನೀಡಿದ್ದಾರೆ. ಅಲ್ಲದೇ, ಸರ್ಕಾರ ಉರುಳಿಸುವ ಹೇಳಿಕೆ ನೀಡಿದ ಯತ್ನಾಳ್​​ಗೆ ಟಾಂಗ್​ ಕೂಡ ಕೊಟ್ಟಿದ್ದಾರೆ.

ಪಾರ್ಲಿಮೆಂಟ್ ಎಲೆಕ್ಷನ್​​​ ಹಾಸುಪಾಸಿನಲ್ಲಿ ಸರ್ಕಾರ ಬೀಳಬಹುದು
ಅಸಹನೆ ಜ್ವಾಲಾಮುಖಿ, ಯತ್ನಾಳ್​ಗೆ ನಿಖರತೆ, ಸಿ.ಟಿ.ರವಿ ಹೇಳಿಕೆ

ಇನ್ನು, ಸರ್ಕಾರಕ್ಕೆ 7-8 ತಿಂಗಳ ಮುಹೂರ್ತ ಇಟ್ಟಿದ್ದ ಯತ್ನಾಳ್​ ಭವಿಷ್ಯವನ್ನ ಸಿ.ಟಿ ರವಿ ಉಲ್ಲೇಖಿಸಿದ್ದಾರೆ. ಪಾರ್ಲಿಮೆಂಟ್ ಚುನಾವಣೆ ಹಾಸುಪಾಸಿನಲ್ಲಿ ಸರ್ಕಾರ ಬೀಳಬಹುದು. ಗ್ರಾಮ ಪಂಚಾಯ್ತಿ ರೀತಿ ಸಿಎಂ ಸ್ಥಾನ ಹಂಚಿಕೆ ಆಗಿದೆ. ಮುನಿಯಪ್ಪ ಮಾತು ಅದೇ ಸೂಚಿಸ್ತಿದೆ ಎಂದಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ಗದ್ದುಗೆ ಏರಿ ಬೀಗುತ್ತಿರುವ ಕಾಂಗ್ರೆಸ್​​ ಇದೇ ಮೊದಲ ಬಾರಿಗೆ ಮಹತ್ವದ ಸರ್ವ ಸದಸ್ಯರ ಸಭೆ ನಡೆಸಿದೆ. ಆದ್ರೆ, ಅದೇ ಸಭೆಯಲ್ಲಿ ಮುನಿಯಪ್ಪ ಸಿಡಿಸಿದ ಬಾಂಬ್​​​ ಮಾತ್ರ ಬೆಚ್ಚಿ ಬೀಳಿಸಿದೆ. ಮಂತ್ರಿಗಿರಿ ಪಡೆದು ಬೆಚ್ಚಗೆ ಮಲಗಿದ್ದ ಸಚಿವರಿಗೆ ತಲೆ ಬಿಸಿ ತಂದಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಸಭೆಯಲ್ಲೇ ಮುನಿಸಿಕೊಂಡ್ರಾ ಮಿನಿಸ್ಟರ್​..? ಸಿಡಿಲು ಬಡಿದಂತಿತ್ತು ಮುನಿಯಪ್ಪ ಮಾತು!

https://newsfirstlive.com/wp-content/uploads/2023/08/kh-muniyappa.jpg

Load More