ಗುಡ್ ಟಚ್ನಲ್ಲಿ ರಾಹುಲ್.. ಕಮ್ಬ್ಯಾಕ್ಗೆ ರೆಡಿ..!
ಗಿಲ್ಗೆ ಕಂಟಕ.. ಕಿಶನ್ಗೆ ವಿಲನ್ ಆಗ್ತಾರಾ ರಾಹುಲ್..?
ಪಾಕ್ ಲೆಕ್ಕಾಚಾರ ಉಲ್ಟಾ ಮಾಡಲು ಬಿಗ್ ಡಿಸಿಷನ್..?
ಕನ್ನಡಿಗ ಕೆ.ಎಲ್.ರಾಹುಲ್, ಟೀಮ್ ಇಂಡಿಯಾ ಸೇರಿಕೊಂಡಿದ್ದಾಯ್ತು. ಲಂಕಾದಲ್ಲಿ ಅಭ್ಯಾಸವನ್ನೂ ಆರಂಭಿಸಿರುವ ಕೆ.ಎಲ್.ರಾಹುಲ್, ಸಾಲಿಡ್ ಬ್ಯಾಟಿಂಗ್ ಟಚ್ನಲ್ಲಿದ್ದಾರೆ. ಆದ್ರೆ, ಕನ್ನಡಿಗನ ಎಂಟ್ರಿ ತಂಡಕ್ಕೆ ಬಲ ತುಂಬಿದ್ರೆ, ಟೀಮ್ ಮ್ಯಾನೇಜ್ಮೆಂಟ್ಗೆ ತಲೆನೋವು ತಂದಿಟ್ಟಿದೆ. ಅದ್ಯಾಕೆ ಗೊತ್ತಾ?.
ಕೆ.ಎಲ್.ರಾಹುಲ್ ಸದ್ಯ ಟೀಮ್ ಇಂಡಿಯಾದಲ್ಲಿರುವ ಒನ್ ಆ್ಯಂಡ್ ಒನ್ಲಿ ಕನ್ನಡಿಗ. 6 ತಿಂಗಳ ಬಳಿಕ ಟೀಮ್ ಇಂಡಿಯಾ ಸೇರಿಕೊಂಡಿರುವ ರಾಹುಲ್, ಏಷ್ಯಾಕಪ್ ಸಮರಕ್ಕೆ ಸಮರಾಭ್ಯಾಸ ನಡೆಸ್ತಿದ್ದಾರೆ. ಕೊಲಂಬೊದಲ್ಲಿ ಇಂಡೋರ್ ನೆಟ್ಸ್ನಲ್ಲಿ ಬೆವರು ಹರಿಸಿರುವ ಕೆ.ಎಲ್.ರಾಹುಲ್, ಏಷ್ಯಾಕಪ್ ಮಹಾ ಸಂಗ್ರಾಮದಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡೋ ಲೆಕ್ಕಚಾರದಲ್ಲಿದ್ದಾರೆ.
ಸೂಪರ್-4ನಲ್ಲಿ ಸೂಪರ್ ಆಟಕ್ಕೆ ಕನ್ನಡಿಗನ ಕಸರತ್ತು!
ಇಂಜುರಿಯಿಂದ ಕಂಪ್ಲೀಟ್ ಚೇತರಿಸಿಕೊಂಡಿರುವ ಕೆ.ಎಲ್.ರಾಹುಲ್, ಬರೋಬ್ಬರಿ 6 ತಿಂಗಳ ಬಳಿಕ ಏಕದಿನ ಕ್ರಿಕೆಟ್ ಆಡೋಕೆ ಸಜ್ಜಾಗಿದ್ದಾರೆ. ಟೀಮ್ ಕ್ಯಾಂಪ್ ಸೇರಿಕೊಂಡಿರುವ ರಾಹುಲ್, ಇಂಡೋರ್ ನೆಟ್ಸ್ನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿದ್ದಾರೆ. ಫುಟ್ ವರ್ಕ್, ಶಾಟ್ ಸೆಲೆಕ್ಷನ್, ಪರ್ಫೆಕ್ಟ್ ಟೈಮಿಂಗ್ ಹೀಗೆ ಅಭ್ಯಾಸದ ಕಣದಲ್ಲಿ ಸಾಲಿಡ್ ಟಚ್ನಲ್ಲಿರೋ ರಾಹುಲ್, ಸ್ಟ್ರಾಂಗ್ ಕಮ್ಬ್ಯಾಕ್ಗೆ ನಾನ್ ರೆಡಿ ಎಂಬ ಸಂದೇಶ ರವಾನಿಸಿದ್ದಾರೆ.
ಕೆ.ಎಲ್.ರಾಹುಲ್ ಕಮ್ಬ್ಯಾಕ್ ಯಾರ ಸ್ಥಾನಕ್ಕೆ ಕುತ್ತು..?
ಸದ್ಯ ಅಭ್ಯಾಸದ ಕಣದಲ್ಲಿ ಮಿಂಚಿರುವ ಕೆ.ಎಲ್.ರಾಹುಲ್, ಪ್ಲೇಯಿಂಗ್ ಇಲೆವನ್ ಸ್ಥಾನದ ರೇಸ್ಗಿಳಿದಿದ್ದಾರೆ. ರಾಹುಲ್ರ ಈ ಕಮ್ಬ್ಯಾಕ್ ಇದೀಗ ಇಬ್ಬರ ಸ್ಥಾನಕ್ಕೆ ಕುತ್ತು ತಂದಿದೆ. ಮ್ಯಾನೇಜ್ಮೆಂಟ್ಗಂತೂ ಸೆಲೆಕ್ಷನ್ ಹೆಡ್ಡೇಕ್ ಶುರುವಾಗಿದೆ.
ಕೆ.ಎಲ್.ರಾಹುಲ್, ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಅನ್ನೋದನ್ನ ಈಗಾಗಲೇ ಸೆಲೆಕ್ಷನ್ ಕಮಿಟಿ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ರಾಹುಲ್ಗೆ ಪ್ಲೇಯಿಂಗ್-XIನಲ್ಲಿ ಚಾನ್ಸ್ ನೀಡಬೇಕಾಗಿದೆ. ಹೀಗಾಗಿ ಶುಭ್ಮನ್ ಗಿಲ್ ಅಥವಾ ಇಶಾನ್ ಕಿಶನ್, ಇಬ್ಬರಲ್ಲಿ ಯಾರಿಗೆ ಕೊಕ್ ಕೊಡಬೇಕು ಅನ್ನೋದು ಪ್ರಶ್ನೆಯಾಗಿದೆ.
ಶುಭ್ಮನ್ಗೆ ಕೊಕ್ ನೀಡುತ್ತಾ ಮ್ಯಾನೇಜ್ಮೆಂಟ್..?
ಏಷ್ಯಾಕಪ್ನ ಪಾಕ್ ವಿರುದ್ಧದ ಹೈಟೆನ್ಶನ್ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಹೀರೋ ಆಗಿದ್ದು ಇಶಾನ್ ಕಿಶನ್. ಈತನ ಒಂದೇ ಒಂದು ಇನ್ನಿಂಗ್ಸ್ ಇಡೀ ಟೀಮ್ ಇಂಡಿಯಾದ ಕೈಹಿಡಿಯಿತು. ಇಲ್ಲಾ ಅಂದಿದ್ರೆ, ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾದ ಸ್ಥಿತಿ ಮತ್ತಷ್ಟು ಹೀನಾಯವಾಗಿರ್ತಿತ್ತು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಪಾಕ್ ವೇಗಿಗಳ ಎದುರು ತಡಬಡಾಯಿಸಿದ್ದ ಶುಭ್ಮನ್, ಬದಲಿಗೆ ರಾಹುಲ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಗಿಲ್ ಬದಲಿಗೆ ರಾಹುಲ್ ಪ್ಲೇಯಿಂಗ್-XIಗೆ ಎಂಟ್ರಿ ಕೊಟ್ರೆ, ಇಶಾನ್ ಕಿಶನ್ಗೆ ಆರಂಭಿಕನಾಗಿ ಬಡ್ತಿ ಸಿಗಲಿದೆ. ಟಾಪ್ ಆರ್ಡರ್ಗೆ ಲೆಫ್ಟ್ & ರೈಟ್ ಕಾಂಬಿನೇಶನ್ ಸಿಗಲಿದ್ದು, ಪಾಕ್ನ ದಾಳಿಯನ್ನ ಸುಲಭಕ್ಕೆ ಟ್ಯಾಕಲ್ ಮಾಡಬಹುದು. ಅದ್ರಲ್ಲೂ ಲೆಫ್ಟ್ ಆರ್ಮ್ ಪೇಸ್ ಕಂಟಕಕ್ಕೆ ಕಿಶನ್ ಪರಿಹಾರವಾಗಬಲ್ಲರು.
ಒಟ್ಟಿನಲ್ಲಿ, ಕನ್ನಡಿಗನ ಕಮ್ಬ್ಯಾಕ್ ಟೀಮ್ ಇಂಡಿಯಾಗೆ ಬಲ ತಂದಿರೋದ್ರ ಜೊತೆಗೆ ಮ್ಯಾನೇಜ್ಮೆಂಟ್ ತಲೆನೋವು ಹೆಚ್ಚಿಸಿರೋದಂತೂ ಸುಳ್ಳಲ್ಲ. ಸೂಪರ್ – 4 ಫೈಟ್ನಲ್ಲಿ ರೋಹಿತ್ & ದ್ರಾವಿಡ್, ರಾಹುಲ್ಗೆ ಮಣೆ ಹಾಕ್ತಾರಾ.? ಅಥವಾ ವಿನ್ನಿಂಗ್ ಕಾಂಬಿನೇಶನ್ಗೆ ಕಟ್ಟಿ ಬಿಳ್ತಾರಾ.? ಅನ್ನೋದನ್ನ ಕಾದು ನೋಡಬೇಕಷ್ಟೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ