Advertisment

ತಿಮ್ಮಪ್ಪನ ಲಡ್ಡು ತಿಂದು ಅಪವಿತ್ರ ಆದ್ರಾ.. ಶುದ್ಧಿಯಾಗಲು ಏನ್​ ಮಾಡಬೇಕು? K.N Somayaji ಹೇಳಿದ್ದೇನು?

author-image
admin
Updated On
ತಿಮ್ಮಪ್ಪನ ಲಡ್ಡು ತಿಂದು ಅಪವಿತ್ರ ಆದ್ರಾ.. ಶುದ್ಧಿಯಾಗಲು ಏನ್​ ಮಾಡಬೇಕು? K.N Somayaji ಹೇಳಿದ್ದೇನು?
Advertisment
  • 'ವೈಕುಂಠ' ಪ್ರಸಾದಕ್ಕೆ ಅತಿದೊಡ್ಡ ಅಪಮಾನ.. ಮುಂದೇನು?
  • ಅಪವಿತ್ರಕ್ಕೆ ಖ್ಯಾತ ಜ್ಯೋತಿಷಿ ಡಾ.ದೈವಜ್ಞ ಸೋಮಯಾಜಿ ಕಣ್ಣೀರು
  • ಮತ್ತೆ ನಂದಿನಿ ತುಪ್ಪವೇ ಬೇಕೆಂದು ಟಿಟಿಡಿ ನಿರ್ಧರಿಸಿದ್ದೇ ಅದಕ್ಕಾ?

ಸಂಕಟ ಬಂದಾಗ ವೆಂಕಟರಮಣ ಅಂತಾ ಶ್ರೀನಿವಾಸನದ ಪಾದಕ್ಕೆರಗಿ.. ತಿಮ್ಮಪ್ಪನ ಪ್ರಸಾದ ಲಡ್ಡು ತಿಂದು ಧನ್ಯರಾಗೋ ಕೋಟ್ಯಾಂತರ ಭಕ್ತರಿದ್ದಾರೆ. ನಿತ್ಯ 3 ಲಕ್ಷದಷ್ಟು ಲಡ್ಡುಗಳಿಗೆ ಬೇಡಿಕೆಯಿದೆ ಅಂದ್ರೆ ತಿರುಮಲಗಿರಿವಾಸನ ಪ್ರಸಾದದ ಪವರ್ ಎಂಥಾದ್ದು ಅನ್ನೋದು ಅರ್ಥವಾಗುತ್ತೆ. ಆದ್ರೆ, ಆ ಪರಮಪವಿತ್ರ, ಶ್ರೇಷ್ಠ ಪ್ರಸಾದವನ್ನೇ ಅಪವಿತ್ರಗೊಳಿಸಲಾಗಿದೆ. ಅಪಚಾರ ಎಸಗಲಾಗಿದೆ.

Advertisment

ಇದನ್ನೂ ಓದಿ: ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು.. ತುಪ್ಪದಲ್ಲಿ ಕಲಬೆರಕೆ ಬೆರೆಸಿದ್ದು ಯಾರು? ಇಲ್ಲಿದೆ ಅಸಲಿ ವಿಷ್ಯ! 

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತಿಮ್ಮಪ್ಪನ ಲಡ್ಡು ಪ್ರಸಾದದ ಬಗ್ಗೆ ಬೆಚ್ಚಿ ಬೀಳಿಸೋ ಸಂಗತಿ ಸ್ಫೋಟಿಸಿದ ಬಳಿಕವೀಗ ಅಸಂಖ್ಯ ತಿಮ್ಮಪ್ಪನ ಭಕ್ತರ ಮನದಲ್ಲಿ ಕಾರ್ಮೋಡ ಕವಿದಿದೆ. ಅಯ್ಯೋ ದೇವರೇ, ಪ್ರಾಣಿಕೊಬ್ಬು ತುಂಬಿದ ಪ್ರಸಾದ ಸೇವಿಸಿಬಿಟ್ವಾ? ಎಂಥಾ ಅಪಚಾರವಾಯ್ತು ಅಂತ ಆತಂಕದಲ್ಲಿ ಮುಳುಗಿದ್ದಾರೆ. ಪ್ರಸಾದಕ್ಕೂ ಅಪಚಾರವಾಗಿದೆ, ವೆಂಕಟೇಶ್ವರನಿಗೂ ಅಪಚಾರವಾಗಿದೆ. ಭಕ್ತರಿಗೂ ಆಘಾತವಾಗಿದೆ. ಈಗ, ಮುಂದೇನು ಎಂಬ ಪ್ರಶ್ನೆ ಹುಟ್ಟಿದೆ. ಈ ನಡುವೆಯೇ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೂಡ ಇದೇ ಆತಂಕಕ್ಕೆ ಸಂಬಂಧಪಟ್ಟ ಟ್ವೀಟ್ ಮಾಡಿದ್ದಾರೆ.

ನಾವೆಲ್ಲರೂ ಒಗ್ಗೂಡಬೇಕು!
ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು ಕಂಡುಹಿಡಿದಿರುವುದರಿಂದ ನಾವೆಲ್ಲರೂ ತೀವ್ರವಾಗಿ ವಿಚಲಿತರಾಗಿದ್ದೇವೆ.. ವೈಸಿಪಿ ಸರ್ಕಾರ ರಚಿಸಿರುವ ಟಿಟಿಡಿ ಮಂಡಳಿಯು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಇದು ದೇವಾಲಯಗಳ ಅಪವಿತ್ರತೆ, ಅದರ ಭೂಮಿ ಸಮಸ್ಯೆಗಳು ಮತ್ತು ಇತರ ಧಾರ್ವಿುಕ ಆಚರಣೆಗಳ ಸುತ್ತಲಿನ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ‘ಸನಾತನ ಧರ್ಮ’ವನ್ನು ಯಾವುದೇ ರೂಪದಲ್ಲಿ ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು ಎಂದು ನಾನು ಭಾವಿಸುತ್ತೇನೆ.
- ಪವನ್​ ಕಲ್ಯಾಣ್​, ಆಂಧ್ರ ಡಿಸಿಎಂ

Advertisment

ಇದು ಪವನ್ ಕಲ್ಯಾಣ್ ಅವರು ಎಕ್ಸ್ ಖಾತೆಯಲ್ಲಿ ಮಾಡಿರೋ ಪೋಸ್ಟ್. ಮುಂದೆ ನಡೆಯಬಹುದಾದ ಈ ರೀತಿಯ ಅಪಚಾರ ಎಸಗೋ ಕೃತ್ಯಗಳನ್ನು ತಡೆಯೋಕೆ ಹೇಗೆ ಎಚ್ಚರಗೊಳ್ಳಬೇಕು ಎಂಬ ಬಗ್ಗೆ ಪವನ್ ಕಲ್ಯಾಣ್ ಅಭಿಪ್ರಾಯ ಹೊರಗೆಡವಿದ್ದಾರೆ. ಬಟ್, ತಿಮ್ಮಪ್ಪನ ಭಕ್ತರನ್ನು ಕಾಡುತ್ತಿರೋದೇನು ಗೊತ್ತಾ? ಪ್ರಾಣಿಕೊಬ್ಬು ತುಂಬಿದ ಪ್ರಸಾದ ಸೇವಿಸಿ ಅಪಚಾರವಾಗಿದ್ದು.. ಈಗೇನು ಮಾಡಬೇಕು ಎಂಬ ಆತಂಕದ ಪ್ರಶ್ನೆ.

ಇದನ್ನೂ ಓದಿ: tirupati laddu: ತುಪ್ಪದಲ್ಲಿ ದನದ ಕೊಬ್ಬಿನ ತಪ್ಪು ಒಪ್ಪಿಕೊಂಡ TTD; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ 

ಇಲ್ಲಿ ಸಸ್ಯಾಹಾರಿ, ಮಾಂಸಹಾರಿ ಎಂಬ ಪ್ರಶ್ನೆಯೇ ಉದ್ಭವಿಸೋದಿಲ್ಲ. ಇಲ್ಲೇನಿದ್ರೂ ಆ ಜಾಗದ, ಆ ದೈವದ ಪಾವಿತ್ರತೆಯ ಪ್ರಶ್ನೆಯಷ್ಟೇ. ಯಾವುದೇ ಪ್ರಸಾದದಲ್ಲಿ ಪ್ರಾಣಿಜನ್ಯ ವಸ್ತುಗಳನ್ನು ಬೆರೆಸುವಂತಿಲ್ಲ. ಹಾಗೇ ಮಾಡಿದರೆ ದೇವರಿಗೆ, ಪ್ರಸಾದಕ್ಕೆ ಮತ್ತು ಭಕ್ತರ ನಂಬಿಕೆಗೆ ಅಪಚಾರ ಎಸಗಿದಂತೆ. ಈಗ ತಿಮ್ಮಪ್ಪನ ಸನ್ನಿಧಿಯಲ್ಲಿ ಆಗಿರೋದು ಅದೇನೇ. ಹಾಗಾಗಿ, ಈ ಅಪಚಾರಕ್ಕೆ, ಪಾವಿತ್ರ್ಯತೆಗೆ ದಕ್ಕೆ ಬಂದಿರೋದಕ್ಕೆ ಪರಿಹಾರವೇನು ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ.

Advertisment

ಧಾರ್ಮಿಕ ಚಿಂತಕರು, ಪಂಡಿತರಿಗೆ ಆಘಾತವಾಗಿದ್ರೆ, ನೋವು ಆಗಿರುವಾಗ ಸಾಮಾನ್ಯ ಭಕ್ತರಲ್ಲಿ ಶುರುವಾಗಿರೋ ಯಾತನೆ ಹೇಗಿರಬಹುದು ಅಂತಾ ಕಲ್ಪಿಸಿಕೊಳ್ಳೋಕೂ ಸಾಧ್ಯವಿಲ್ಲ. ನಂಬಿಕೆಗಳೇ ಹಾಗೆ ನಂಬಿಕೆ ಅನ್ನೋದು ಅಣು ಬಾಂಬ್‌ಗಿಂತಲೂ ಪವರ್‌ಫುಲ್ ಅಂತಾ ಸುಮ್ಮನೆ ಹೇಳಲ್ಲ. ಅಂಥಾ ಗಾಢವಾದ ನಂಬಿಕೆಗೆ ಪೆಟ್ಟು ಬಿದ್ದಾಗ ನಂಬಿಕೆಯ ಪಾವಿತ್ರ್ಯತೆಗೆ ಪೆಟ್ಟು ಬಿದ್ದಾಗ ಎಂಥಾ ಭಕ್ತನಿಗೂ ಬರಸಿಡಿಲು ಬಡಿದಂತಾಗೋದು ಸಹಜ. ಹಾಗಾಗಿ, ಮುಂದೇನು ಅನ್ನೋ ಪ್ರಶ್ನೆಯನ್ನ ಎಲ್ಲರೂ ಕೇಳ್ತಿದ್ದಾರೆ.

ಪ್ರಾಣಿಗಳ ಕೊಬ್ಬು ತುಂಬಿದ ಲಡ್ಡು ಪ್ರಸಾದ ಸೇವನೆ ಮಾಡಿರೋರು ತುಂಬಾ ಆತಂಕ ಪಡೋ ಅಗತ್ಯವಿಲ್ಲ. ಆದರೆ, ಅಪಚಾರವಾಗಿದೆ ಅನ್ನೋದು ಮನಸ್ಸಿನಲ್ಲಿ ಸದಾ ಕೊರೆಯುತ್ತಿರೋದಕ್ಕೆ ಕೆಲವೊಂದು ಧಾರ್ಮಿಕ ಆಚರಣೆಗಳನ್ನು ನಡೆಸಿದ್ರೆ ಸರಿಹೋಗುತ್ತೆ ಎಂದಿದ್ದಾರೆ ದೈವಜ್ಞ ಸೋಮಯಾಜಿ.

ಒಂದು ಶಾರೀರಿಕ ಶುದ್ಧಿಯಾದ್ರೆ.. ಮತ್ತೊಂದು ಹೋಮ, ಹವನಗಳನ್ನು ನಡೆಸೋ ಮೂಲಕ ಪಾವಿತ್ರ್ಯತೆಯನ್ನು ಮರುಸ್ಥಾಪಿಸಬೇಕಾಗುತ್ತೆ. ಮತ್ತು, ಯಾವ್ಯಾವ ಪವಿತ್ರಾ ಜಾಗಗಳಿಗೆ ಹೋಗಿ ಬಂದಿರ್ತಾರೋ ಅಲ್ಲೆಲ್ಲಾ ಶುದ್ಧಿಗೊಳಿಸಬೇಕು ಅಂತಲೂ ದೈವಜ್ಞ ಸೋಮಯಾಜಿ ಪರಿಹಾರ ಸೂಚಿಸಿದ್ದಾರೆ.

Advertisment

ಹೀಗೆ, ಪ್ರಾಣಿಕೊಬ್ಬು ತುಂಬಿದ ಲಡ್ಡು ಸೇವಿಸಿರೋ ಅಪಚಾರದ ಭಾವನೆಯಿಂದ ಮುಕ್ತವಾಗಬಹುದು ಅನ್ನೋದು ಧಾರ್ಮಿಕ ಪಂಡಿತರ ಸಲಹೆ. ಆದರೆ, ಭಕ್ತರಿಗೆ ಆಗಿರೋ ನೋವು ಮತ್ತು ಆಘಾತ ಮಾತ್ರ ತುಂಬಾ ದೊಡ್ಡದು. ಇದೆಲ್ಲದರ ನಡುವೆ ಖುಷಿಯ ವಿಚಾರವೇನಂದ್ರೆ ನಮ್ಮ ಹೆಮ್ಮೆಯ ನಂದಿನಿ ತುಪ್ಪ ಮತ್ತೆ ತಿಮ್ಮಪ್ಪನ ಲಡ್ಡು ತಯಾರಿಕೆಯಲ್ಲಿ ಬಳಕೆಯಾಗ್ತಿದೆ. ಕೆಟ್ಟ ಮೇಲೆಯೇ ಬುದ್ಧಿ ಬರೋದು ಎಂಬಂತೆ ಟಿಟಿಡಿಯವ್ರು ಕಡಿಮೆ ರೇಟಲ್ಲಿ ಲಡ್ಡು ತಯಾರಿಸೋಕೆ ಮುಂದಾಗಿ ಕೈ ಸುಟ್ಟುಕೊಂಡಿದ್ದಾರೆ. ಬೆಲೆ ಹೆಚ್ಚಾದರೂ ಪರವಾಗಿಲ್ಲ, ತಮಗೆ ನಂದಿನಿ ತುಪ್ಪವೇ ಬೇಕು ಅಂತಾ ನಿರ್ಧರಿಸಿದ್ದಾರೆ. ಹಾಗಾಗಿ, ಇನ್ನುಮುಂದೆ ಭಕ್ತರು ನಿಶ್ಚಿಂತೆಯಿಂದ ಲಡ್ಡು ಸೇವಿಸಬಹುದು.

publive-image

ಮತ್ತೆ ನಂದಿನಿ ತುಪ್ಪವೇ ಬೇಕು ಎಂದು ಟಿಟಿಡಿ ನಿರ್ಧಾರ!
ಕಳೆದ 15 ದಿನಗಳಿಂದ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಬಳಕೆ!
ಕಳೆದ 50 ವರ್ಷಗಳಿಂದಲೂ ತಿರುಪತಿ ತಿಮ್ಮಪ್ಪನ ಲಡ್ಡುಗೆ ನಂದಿಗೆ ತುಪ್ಪವೇ ಬಳಕೆಯಾಗ್ತಿತ್ತು. ಬಟ್, ಬೆಲೆ ಏರಿಕೆ ಪರಿಣಾಮ ತುಪ್ಪದ ರೇಟು ಹೆಚ್ಚಾಗಿದ್ದಕ್ಕೆ ನಂದಿನಿ ಬ್ರ್ಯಾಂಡ್ ತುಪ್ಪ ಖರೀದಿಯಿಂದ ಹಿಂದೆ ಸರಿಯಲಾಗಿತ್ತು. ಕಡಿಮೆ ರೇಟಿನ ತುಪ್ಪ ಪೂರೈಸೋ ಕಂಪನಿಗಳಿಗೆ ಟೆಂಡರ್ ನೀಡಲಾಗಿತ್ತು. ಶ್ರೇಷ್ಠ ಲಡ್ಡುವಿನ ಪಾವಿತ್ರ್ಯತೆ ಕೆಡುವಂತೆ ಮಾಡಿತ್ತು ಆ ನಿರ್ಧಾರ. ಆದರೀಗ.. ಎಚ್ಚೆತ್ತುಕೊಂಡಿರೋ ಟಿಟಿಡಿ ಮತ್ತೆ ನಂಬಿಕಾರ್ಹ ಬ್ರ್ಯಾಂಡ್ ಆಗಿರೋ ನಂದಿನಿ ತುಪ್ಪದ ಮೊರೆ ಹೋಗಿದೆ. ಕಳೆದ 15 ದಿನಗಳಿಂದಲೂ ನಂದಿನಿ ತುಪ್ಪವನ್ನೇ ಲಡ್ಡು ತಯಾರಿಕೆಯಲ್ಲಿ ಬಳಸಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment