newsfirstkannada.com

ಮಗನ ರಾಜಕೀಯ ಭವಿಷ್ಯಕ್ಕಾಗಿ ಈಶ್ವರಪ್ಪ ಮಹಾಯಾಗ; ಈ ಕ್ಷೇತ್ರದಿಂದ ಸಿಗುತ್ತಾ ಅಡಿಪಾಯ..?

Share :

14-08-2023

    ಕಾಂತೇಶ್​ರನ್ನು ಕಣಕ್ಕಿಳಿಸುವಂತೆ ಕಾರ್ಯಕರ್ತರ ಸಲಹೆ

    ಹಾವೇರಿ ಕ್ಷೇತ್ರದಲ್ಲಿ ಆಕ್ಟೀವ್​ ಆಗಿರುವ ಈಶ್ವರಪ್ಪ ಪುತ್ರ

    ಮಠಗಳ ಭೇಟಿ ಮೂಲಕ ಮಾಜಿ ಸಚಿವ ಹೊಸತಂತ್ರ?

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಬಿಜೆಪಿಯಲ್ಲಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಕಸರತ್ತುಗಳು ಶುರುವಾಗಿದೆ. ವಿಧಾನಸಭೆ ಚುನಾವಣೆ ವೇಳೆ ಕ್ಷೇತ್ರ ತ್ಯಾಗ ಮಾಡಿದ್ದ ಮಾಜಿ ಸಚಿವ ಈಶ್ವರಪ್ಪ, ಇದೀಗ ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಮಹಾಯಾಗ ನಡೆಸಿದ್ದಾರೆ. ಹಾವೇರಿ ಕ್ಷೇತ್ರದಿಂದ ಮಗನ ರಾಜಕೀಯ ಭವಿಷ್ಯಕ್ಕೆ ಅಡಿಪಾಯ ಹಾಕುತ್ತಿದ್ದು, ಪರೋಕ್ಷವಾಗಿ ಹೈಕಮಾಂಡ್​ಗೆ ಸಂದೇಶ ರವಾನಿಸಿದ್ದಾರೆ.

ಹಾವೇರಿ ಕ್ಷೇತ್ರದ ಮೇಲೆ ಮಾಜಿ ಸಚಿವರ ಪುತ್ರನ ಕಣ್ಣು
ಮಗನ ರಾಜಕೀಯ ಭವಿಷ್ಯಕ್ಕಾಗಿ ಈಶ್ವರಪ್ಪ ಮಹಾಪೂಜೆ

ಕೆ.ಎಸ್​.ಈಶ್ವರಪ್ಪ ಕುರುಬ ಸಮುದಾಯದ ಪ್ರಬಲ ನಾಯಕ. ಬಿಜೆಪಿ ಪಾಳಯದ ಪ್ರಭಾವಿ ಮುಖಂಡ. ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯರಷ್ಟೇ ಪ್ರಬಲ ಸ್ಪರ್ಧಿಸಿಯಾಗಿದ್ದರು. ಆದ್ರೆ, ಬಿಜೆಪಿ ಹೈಕಮಾಂಡ್​ನ ಒಂದೇ ಒಂದು ಮಾತಿಗೆ ತಲೆ ಬಾಗಿ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದು, ಪಕ್ಷದ ನಿಷ್ಟಾವಂತ ನಾಯಕ ಎಂದು ಸಾಬೀತು ಮಾಡಿದ್ರು. ಅಷ್ಟೇ ಅಲ್ಲ ಚುನಾವಣಾ ನಿವೃತ್ತಿಯನ್ನು ಘೋಷಿಸಿದ್ದಾರೆ. ಇದೀಗ ತಮ್ಮ ಪುತ್ರನನ್ನು ರಾಜಕೀಯ ಭವಿಷ್ಯಕ್ಕಾಗಿ ಮಹಾಪೂಜೆ ನಡೆಸಿದ್ದಾರೆ.

ತಾವು ಚುನಾವಣಾ ನಿವೃತ್ತಿ ಘೋಷಿರುವ ಕಾರಣ, ಮಗನನ್ನು ರಾಜಕೀಯದಲ್ಲಿ ಈಶ್ವರಪ್ಪ ಬೆಳೆಸಲು ಮುಂದಾಗಿದ್ದಾರೆ. ಅದಕ್ಕೆ ತಕ್ಕಂತೆ ಪೂರ್ವ ಸಿದ್ಧತೆಯನ್ನು ತೆರೆ ಮರೆಯಲ್ಲೇ ನಡೆಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ಪುಣ್ಯಕ್ಷೇತ್ರ ಸಿಂದಗಿ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಯಜ್ಞ,ಯಾಗಕ್ಕೆ ಕೈಗೊಂಡಿದ್ದಾರೆ. ರುದ್ರಯಾಗ ಮತ್ತು ಶತರುದ್ರಾಭಿಷೇಕದಲ್ಲಿ ಈಶ್ವರಪ್ಪ ಮತ್ತು ಅವರ ಪತ್ನಿ ಜಯಲಕ್ಷ್ಮಿ ಮತ್ತು ಪುತ್ರ ಕಾಂತೇಶ್​ ಭಾಗಿಯಾಗಿದ್ದಾರೆ. ಮಾಜಿ ಸಚಿವ ಈಶ್ವರಪ್ಪ, ಕೈಯಲ್ಲಿ ಪೂರ್ಣಕುಂಬ ಹಿಡಿದು ಶಾಂತವೀರ ಸ್ವಾಮಿಗಳ ಗದ್ದುಗೆಯ ದರ್ಶನ ಪಡೆದಿದ್ದಾರೆ. ಇನ್ನು ರುದ್ರಯಾಗದಲ್ಲಿ ಭಾಗಿಯಾಗಿ ಕಾಂತೇಶಗೆ ಒಳ್ಳಿತಾಗುವಂತೆ ಬೇಡಿಕೆಕೊಂಡಿದ್ದಾರೆ. ಆದ್ರೆ ಇದರ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಠಗಳ ಭೇಟಿ ಮೂಲಕ ಈಶ್ವರಪ್ಪ ಹೊಸತಂತ್ರ?

ಹಾವೇರಿ ಲೋಕಸಭೆ ಕ್ಷೇತ್ರದಿಂದ 2024ರ ಚುನಾವಣೆಗೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕೇಸರಿ ಹೈಕಮಾಂಡ್​ ಚಿಂತನೆ ನಡೆಸಿದೆ. ಇನ್ನು ಹಾಲಿ ಸಂಸದ ಶಿವಕುಮಾರ್​ ಉದಾಸಿ ಕೂಡ, ನಾನು ಸ್ಪರ್ಧೆ ಮಾಡೋಲ್ಲ ಎಂದು ಹೇಳಿದ್ದಾರಂತೆ. ಹೀಗಾಗಿ ಹಾವೇರಿ ಲೋಕಸಭೆ ಕ್ಷೇತ್ರದಿಂದ ತಮ್ಮ ಮಗ ಕಾಂತೇಶ್​ಗೆ ಟಿಕೆಟ್​ ಕೊಡಿಸಲು ಮಾಜಿ ಸಚಿವರ ಈಶ್ವಪ್ಪ ಕಸರತ್ತು ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್​ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ತ್ಯಾಗ ಮಾಡಿದ್ರು. ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಸಾಬೀತು ಮಾಡಿದ್ರು. ಹೀಗಾಗಿ ಹೈಕಮಾಂಡ್​ ಕೂಡ ತಮ್ಮ ಬೇಡಿಕೆಗೆ ಮಣೆ ಹಾಕಬಹುದು ಅನ್ನೋದು ಈಶ್ವರಪ್ಪನವರ ಪ್ಲಾನ್​ ಆಗಿದೆ. ಇದರ ಜೊತೆಗೆ ಸ್ಥಳೀಯ ನಾಯಕರು ಮತ್ತು ಮಠಾಧೀಶರನ್ನು ಭೇಟಿಯಾಗುವ ಮೂಲಕ ತಮ್ಮ ಮಗನಿಗೆ ಟಿಕೆಟ್​ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ.

ಹಾವೇರಿ ಕ್ಷೇತ್ರದಲ್ಲಿ ಈಶ್ವರಪ್ಪ ಪುತ್ರ ಪುಲ್ ಆಕ್ಟೀವ್​

ಮಾಜಿ ಸಚಿವ ಈಶ್ವರಪ್ಪ ಪುತ್ರ ಕೂಡ ತಂದೆಯ ಸೂಚನೆಯಂತೆ ಈಗಾಗಲೇ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಹಾವೇರಿಯಲ್ಲಿ ಈಶ್ವಪ್ಪರ ಒಡೆತನದ ಕಾಲೇಜು ಕೂಡ ಇದ್ದು, ಕಾಂತೇಶ್​ ಅಲ್ಲೇ ಮನೆ ಮಾಡಿಕೊಂಡಿದ್ದಾರೆ. ಜೊತೆಗೆ 7-8 ವರ್ಷಗಳಿಂದ ಜಿಲ್ಲೆಯ ಸಂಪರ್ಕವಿದೆ. ಹೀಗಾಗಿ ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರು ಕೂಡ ಕಾಂತೇಶ್​ರನ್ನು ಕಣಕ್ಕಿಳಿಸುವಂತೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಹೈಕಮಾಂಡ್​ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಶಸ್ತ್ರಲತ್ಯಾಗ ಮಾಡಿ ಚುನಾವಣೆ ಕಣದಿಂದ ದೂರ ಸರಿದಿರುವ ಮಾಜಿ ಸಚಿವ ಈಶ್ವರಪ್ಪ, ಮಗನಿಗೆ ಟಿಕೆಟ್ ಕೊಡಿಸಿ, ಗೆಲ್ಲುಸಲೇಬೇಕೆಂದು ಟೊಂಕಕಟ್ಟಿದ್ದಾರೆ. ಹೀಗಾಗಿ ಈಶ್ವರಪ್ಪನವರ ಮಹಾಪೂಜೆಗೆ ಮಣಿದು ಹೈಕಮಾಂಡ್ ವರ ನೀಡುತ್ತಾ ಇಲ್ವಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗನ ರಾಜಕೀಯ ಭವಿಷ್ಯಕ್ಕಾಗಿ ಈಶ್ವರಪ್ಪ ಮಹಾಯಾಗ; ಈ ಕ್ಷೇತ್ರದಿಂದ ಸಿಗುತ್ತಾ ಅಡಿಪಾಯ..?

https://newsfirstlive.com/wp-content/uploads/2023/08/K-S-Eshwarappa-2.jpg

Load More