newsfirstkannada.com

ಕಾಂಗ್ರೆಸ್ ಒಂದು ಸ್ಥಾನವು ಗೆಲ್ಲುವುದಿಲ್ಲ; BJP-JDS​ ಮೈತ್ರಿ ವಿಚಾರವಾಗಿ ಈಶ್ವರಪ್ಪ ಸಮರ್ಥನೆ

Share :

09-09-2023

    ಬಿಜೆಪಿ ಮೈತ್ರಿಯು 28 ಸ್ಥಾನ ಗೆಲ್ಲುವುದು ಗ್ಯಾರಂಟಿ

    ಕಾಂಗ್ರೆಸ್​ಗೆ ರಾಜ್ಯದಲ್ಲಿ ಹೀನಾಯ ಸೋಲು ಖಚಿತ

    ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿತ್ತು

ಶಿವಮೊಗ್ಗ: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವಿಚಾರವಾಗಿ ಮಾಜಿ ಸಚಿವ ಈಶ್ವರಪ್ಪ ಮಾತನಾಡಿದ್ದಾರೆ. ಬಿಜೆಪಿ ಮೈತ್ರಿಯು 28 ಸ್ಥಾನ ಗೆಲ್ಲುವುದು ಗ್ಯಾರಂಟಿ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಈ ದೇಶದಲ್ಲಿ ಕಾಂಗ್ರೆಸ್​ ಬೇಡ ಅಂತ ದೇಶದ ಜನ ತೀರ್ಮಾನ ಮಾಡಿರುವಂತ ಸಂದರ್ಭದಲ್ಲಿ ಕನಾಟಕ ರಾಜ್ಯದಲ್ಲೂ ಕೂಡ ಕಾಂಗ್ರೆಸ್​ ವಿರೋಧಿ ವ್ಯಕ್ತಿಗಳು ಎಲ್ಲರೂ ಒಟ್ಟಾಗಿ ಕಾಂಗ್ರೆಸ್​ ನಿರ್ನಾಮ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ ಮತ್ತು ಜನತಾದಳ ಒಂದಾಗಿ ಲೋಕಸಭಾ ಚುನಾವಣೆಗೆ ಹೋಗ್ತಾ ಇದ್ದೀವಿ. ಲೋಕಸಭಾ ಅಂತ ತಕ್ಷಣ ಯಾವುದೋ ಗ್ರಾಮ ಪಂಚಾಯತ್​, ನಗರ ಸಭೆ, ಪುರಸಭೆ ವಿಧಾನಸಭೆಯಲ್ಲ. ದೇಶವನ್ನ ಉಳಿಸಿದಂತಹ ಲೋಕಸಭಾ ಚುನಾವಣೆ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್​ ಒಂದಾಗಿ ಚುನಾವಣೆಯನ್ನ ಎದುರಿಸ್ತಾ ಇದ್ದೀವಿ ಎಂದು ಈಶ್ವರಪ್ಪ ಹೇಳಿದ್ದಾರೆ.

ನಂತರವ ಮಾತನಾಡಿದ ಅವರು, ಕಾಂಗ್ರೆಸ್​ ವಿರೋಧಿ ಮತಗಳು ವಿಭಜನೆಯಾದಂತಹ ಲಾಭವನ್ನು ಪಡೆದು ಕಳೆದ ಬಾರಿ ಒಂದು ಸೀಟು ತೆಗೆದುಕೊಂಡಿತು. ಅದು ಡಿಕೆಶಿ ಅವರ ತಮ್ಮ ಡಿ.ಕೆ ಸುರೇಶ್​ ತೆಗೆದುಕೊಂಡಿದ್ರು. ಈ ಸಾರಿ ಒಂದು ಸೀಟು ಕೂಡ ಕಾಂಗ್ರೆಸ್​ಗೆ ಕೊಡಬಾರ್ದು ಅಂತ ತೀರ್ಮಾನ ಮಾಡಿ ಎಲ್ಲ ಕಾಂಗ್ರೆಸ್​ ವಿರೋಧಿ ಮತಗಳು ಒಟ್ಟಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ -ಜೆಡಿಎಸ್​ ಒದ್ದಾಗಿದವೆ. 28ಕ್ಕೆ 28 ಸೀಟು ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ವಿಚಾರವಾಗಿ ರಾಜ್ಯದಲ್ಲಿ ನಾನಾ ಬೆಳವಣಿಗೆ ಕಾಣುತ್ತಿದೆ. ಇತ್ತೀಚೆಗೆ ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಆಗಮಿಸುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದರು. ಗೃಹ ಮಂತ್ರಿ ಅಮಿತ್​ ಶಾ ಮತ್ತು ಜೆ.ಪಿ ನಡ್ಡಾ ಜೆಡಿಎಸ್​​ ಮೈತ್ರಿ ವಿಚಾರವಾಗಿ ಹೆಚ್​ ಡಿ ದೇವೇಗೌಡರನ್ನು ಮಾತನಾಡಿಸಿದ್ದರು. ಇದಾದ ಬಳಿಕ ಮಾಜಿ ಸಿಎಂ ಬಿಎಸ್​​​ ಯಡಿಯೂರಪ್ಪ ಅವರು ಮೈತ್ರಿ ವಿಚಾರವನ್ನು ಘೋಷಿಸಿದ್ದಾರೆ. ಆದರೆ ಜೆಡಿಎಸ್​ ಈ ವಿಚಾರವನ್ನು ಸಸ್ಪೆನ್ಸ್​ ಆಗಿ ಇಟ್ಟಿದ್ದು ಈ ಬಗ್ಗೆ ಘೋಷಣೆ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್ ಒಂದು ಸ್ಥಾನವು ಗೆಲ್ಲುವುದಿಲ್ಲ; BJP-JDS​ ಮೈತ್ರಿ ವಿಚಾರವಾಗಿ ಈಶ್ವರಪ್ಪ ಸಮರ್ಥನೆ

https://newsfirstlive.com/wp-content/uploads/2023/09/Ishwarappa-1.jpg

Load More