newsfirstkannada.com

ದೂರು ಕೊಟ್ಟ ಜ್ಯುವೆಲ್ಲರಿ ಮಾಲೀಕನನ್ನೇ ಬಂಧಿಸಿದ ಬೆಂಗಳೂರು ಪೊಲೀಸ್.. ಕಾರಣ ಏನು ಅನ್ನೋದೇ ಕುತೂಹಲ..!

Share :

31-07-2023

  ಚಿನ್ನಾಭರಣ ದರೋಡೆ ಕೇಸ್​ಗೆ ಬಿಗ್​ ಟ್ವಿಸ್ಟ್

  ಕೈಲಾಶ್ ಜ್ಯುವೆಲ್ಲರಿ ಮಾಲೀಕ ರಾಜ್ ಜೈನ್ ಬಂಧನ

  ವಿಚಾರಣೆ ವೇಳೆ ಅಸಲಿ ಸತ್ಯ ಬಯಲು, ಕಳುಚಿದ ಮುಖವಾಡ

ಬೆಂಗಳೂರು: ಕೈಲಾಶ್ ಜ್ಯುವೆಲ್ಲರಿ ಮಾಲೀಕ ರಾಜ್ ಜೈನ್​​ನನ್ನು ಕಾಟನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ..?

ಇತ್ತೀಚೆಗೆ ಮಾರ್ಕೆಟ್​ ಫ್ಲೈಓವರ್​ ಮೇಲೆ ಸಿನಿಮಾ ಸ್ಟೈಲ್​​ನಲ್ಲಿ 2.7 ಕೆಜಿ ಚಿನ್ನ ಕಳ್ಳತನವಾಗಿದೆ. ನಮ್ಮ ಅಂಗಡಿಯ ಸಿಬ್ಬಂದಿ ಸ್ಕೂಟಿಯಲ್ಲಿ ಚಿನ್ನ ಸಾಗಿಸುವಾಗ ಇಬ್ಬರು ದಷ್ಕರ್ಮಿಗಳು ನಮ್ಮನ್ನು ಅಡ್ಡಗಡಿ ಚಿನ್ನವನ್ನು ದರೋಡೆ ಮಾಡಿದ್ದರು ಎಂದು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಕಾಟನ್ ಪೇಟೆ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಅಸಲಿ ವಿಷಯ ಗೊತ್ತಾಗಿದೆ. ಬಳಿಕ ಅಂಗಡಿ ಮಾಲೀಕ ಹಾಗೂ ಇಬ್ಬರು ಬಾಲಾಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆ ವೇಳೆ ಇಬ್ಬರು ಸಿಬ್ಬಂದಿಯನ್ನು ಬಳಸಿಕೊಂಡು ಮಾಲೀಕನೇ ಕೃತ್ಯ ಎಸೆಗಿರೋದು ಅಂತಾ ಬಹಿರಂಗವಾಗಿದೆ. ಇನ್ಶೂರೆನ್ಸ್​ಗಾಗಿ ತನ್ನಿಬ್ಬರು ಸಿಬ್ಬಂದಿಯನ್ನು ಬಳಸಿಕೊಂಡು ಚಿನ್ನವನ್ನು ದರೋಡೆ ಮಾಡಿಸಿದ್ದ ಎನ್ನಲಾಗಿದೆ. ಇನ್ನು ರಾಜ್​ ಜೈನ್, ನಗರತ್ ಪೇಟೆಯಲ್ಲಿ ಜ್ಯುವೆಲ್ಲರಿ ಶಾಪ್ ಹೊಂದಿದ್ದ. ಹೈದರಾಬಾದ್​ಗೆ ತನ್ನ ಕೆಲಸಗಾರರ ಮೂಲಕ ಚಿನ್ನ ಸಾಗಿಸುತ್ತಿದ್ದಾಗ ದರೋಡೆ ಕಥೆ ಕಟ್ಟಿದ್ದ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರು ಕೊಟ್ಟ ಜ್ಯುವೆಲ್ಲರಿ ಮಾಲೀಕನನ್ನೇ ಬಂಧಿಸಿದ ಬೆಂಗಳೂರು ಪೊಲೀಸ್.. ಕಾರಣ ಏನು ಅನ್ನೋದೇ ಕುತೂಹಲ..!

https://newsfirstlive.com/wp-content/uploads/2023/07/BNG_GOLD-CASE.jpg

Load More