ರಸ್ತೆಯಲ್ಲಿ ಚಲಿಸುತ್ತಿದ್ದಾಗ ಆಟೋ-ಟ್ಯಾಂಕರ್ ನಡುವೆ ಆ್ಯಕ್ಸಿಡೆಂಟ್
ಮೃತರೆಲ್ಲರೂ ಒಂದೇ ಊರಿನವರೆಂದು ಗುರುತಿಸಿದ ಪೊಲೀಸರು
ಟ್ಯಾಂಕರ್ ಡಿಕ್ಕಿ ರಭಸಕ್ಕೆ ಆಟೋ ಫುಲ್ ಜಖಂ, 6 ಮಂದಿ ಸಾವು
ಕಲಬುರಗಿ: ಟ್ಯಾಂಕರ್ ಮತ್ತು ಆಟೋ ನಡುವೆ ಭೀಕರ ಅಪಘಾತ ನಡೆದು ಸ್ಥಳದಲ್ಲೇ 6 ಜನರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ನಡೆದಿದೆ.
ಹಲಕರ್ಟಿ ಗ್ರಾಮದ ಬಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ಮತ್ತು ಟ್ಯಾಂಕರ್ ನಡುವೆ ಭಯಾನಕವಾದ ಆಕ್ಸಿಡೆಂಟ್ ನಡೆದಿದೆ. ಇದರಿಂದ ಆಟೋದಲ್ಲಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು ಆಟೋ ಎಲ್ಲ ನಜ್ಜುಗುಜ್ಜಾಗಿದೆ. ಇನ್ನು ಮೃತರೆಲ್ಲರು ತಾಲೂಕಿನ ನಾಲವಾರ ಗ್ರಾಮದವರು ಎಂದು ಗುರುತಿಸಲಾಗಿದೆ.
ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಹೇಗೆ ನಡೆಯಿತು ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಾಡಿಯಿಂದ ನಾಲವಾರಕ್ಕೆ ಆಟೋದಲ್ಲಿ ತೆರಳಿದ್ದರು ಎಂದು ತಿಳಿದು ಬಂದಿದೆ. ಒಂದೇ ಗ್ರಾಮ ಮಾತ್ರವಲ್ಲ ಒಂದೇ ಕುಟುಂಬಕ್ಕೆ ಮೃತರು ಸೇರಿದ್ದಾರೆ. ನಸ್ಮೀನ್ ಬೇಗಂ, ಬಿ.ಬಿ ಫಾತಿಮಾ, ಅಬೂಬಕರ್, ಬಿ.ಬಿ ಮರಿಯಂ, ಎಂ.ಡಿ ಪಾಷಾ, ಬಾಬಾ ಆಟೋ ಡ್ರೈವರ್ ಅನ್ನೋರು ಮೃತರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ