/newsfirstlive-kannada/media/post_attachments/wp-content/uploads/2024/11/KLB_BABY_BOY.jpg)
ಕಲಬುರಗಿ: ಸರ್ಕಾರಿ ಆಸ್ಪತ್ರೆಯಿಂದ ಹಸುಗೂಸನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಮೂವರು ಮಹಿಳಾ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಕಮಿಷನರ್ ಸಮ್ಮುಖದಲ್ಲಿ ಮಗುವನ್ನು ಸುರಕ್ಷಿತವಾಗಿ ತಾಯಿ ಮಡಿಲಿಗೆ ಸೇರಿಸಿದ್ದಾರೆ.
ಮಹಿಳಾ ಆರೋಪಿಗಳಾದ ಹುಮೇರಾ, ನಸ್ರೀನ್ ಹಾಗೂ ಫಾತಿಮಾಳನ್ನ ಬಂಧನ ಮಾಡಲಾಗಿದೆ. ಇವರು ಕಳ್ಳತನ ಬಳಿಕ ಮಗುವನ್ನ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಕಲಬುರಗಿ ಜಿಲ್ಲೆಯ ರಾವೂರ್ ಗ್ರಾಮದ ಕಸ್ತೂರಿ ಎನ್ನುವ ಮಹಿಳೆ ಆಸ್ಪತ್ರೆಯಲ್ಲೇ ನ.25 ರಂದು ನಸುಕಿನ ವೇಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಇವರನ್ನು ವಾರ್ಡ್​ ನಂಬರ್ 115ಕ್ಕೆ ಸ್ಥಳಾಂತರ​ ಮಾಡಲಾಗಿತ್ತು. ಇದೇ ಸಮಯದಲ್ಲಿ ನರ್ಸ್ ವೇಷ ಧರಿಸಿ ಬಂದ ಇಬ್ಬರು ಮಹಿಳೆಯರು ಮಗುವಿನ ರಕ್ತ ಪರೀಕ್ಷೆ ಮಾಡಬೇಕು ಎಂದು ಮಗುವನ್ನ ತೆಗೆದುಕೊಂಡು ಹೋಗಿದ್ದವರು ವಾಪಸ್ ಬಂದಿರಲಿಲ್ಲ. ಹೀಗಾಗಿ ಮಗುವನ್ನ ಅಪಹರಣ ಮಾಡಿ ಪರಾರಿಯಾಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು.
/newsfirstlive-kannada/media/post_attachments/wp-content/uploads/2024/11/KLB-Infant-Kidnap.jpg)
ಮಗು ಹುಟ್ಟಿದ ದಿನವೇ ಕಳ್ಳಿಯರು ನರ್ಸ್​ ವೇಷ ಧರಿಸಿ ಬಂದು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಕೇವಲ 24 ಗಂಟೆ ಒಳಗೆ ಪ್ರಕರಣವನ್ನು ಭೇದಿಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಬುರ್ಖಾಧಾರಿ ಮಹಿಳೆಯರು ಬಂದು ಮಗುವನ್ನ ಕಿಡ್ನಾಪ್ ಮಾಡಿರುವುದು ದೃಶ್ಯದಲ್ಲಿ ಸೆರೆಯಾಗಿತ್ತು.
ಸದ್ಯ ಈ ದೃಶ್ಯಗಳನ್ನು ಇಟ್ಟಕೊಂಡೇ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಈ ಸಂಬಂಧ ಮೂರು ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಅಲ್ಲದೇ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us