FDA ಪರೀಕ್ಷೆಯಲ್ಲಿ ಕಿಂಗ್ಪಿನ್ ಜೊತೆ 25 ಲಕ್ಷಕ್ಕೆ ಡೀಲ್
ಈಗಾಗಲೇ 8 ಲಕ್ಷ ಹಣ ನೀಡಿದ್ದ ಆರೋಪಿ ಆಕಾಶ್ ಮಂಠಾಳೆ
ಆಕಾಶ್ ಮಂಠಾಳೆ ಬಂಧನ, ಪೊಲೀಸರಿಂದ ವಿಚಾರಣೆ
ಕಲಬುರಗಿ: ಯುವಕನೊಬ್ಬ ಎಂಬತ್ತು ಸಾವಿರ ಸಂಬಳ ಬಿಟ್ಟು ಸರ್ಕಾರಿ ನೌಕರಿಗೆ ಆಸೆ ಬಿದ್ದು ಜೈಲು ಸೇರಿದ್ದಾನೆ. ಆಕಾಶ ಮಂಠಾಳೆ ಜೈಲು ಸೇರಿದ ಬಿಇ ಮೆಕ್ಯಾನಿಕಲ್ ಪದವಿಧರ.
ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ನಡೆಸುತ್ತಿರುವ FDA ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಅಕ್ರಮದಲ್ಲಿ ಸಿಕ್ಕು ಬಿದ್ದು ಜೈಲು ಸೇರಿದ್ದಾನೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಆಕಾಶ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ತಕ್ಕಂತೆ 80 ಸಾವಿರ ರೂಪಾಯಿ ತಿಂಗಳಿಗೆ ಬರುತ್ತಿತ್ತು.
ಸ್ಪರ್ಧಾತ್ಮಕ ಪರೀಕ್ಷೆ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದ. ಹೇಗಾದರೂ ಮಾಡಿ ಸರ್ಕಾರಿ ನೌಕರಿ ಪಡಿಯಬೇಕು ಎನ್ನುವ ಆಸೆಗೆ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನಿಸಿದ್ದಾನೆ. ಅಕ್ರಮದ ಕಿಂಗ್ಪಿನ್ ಆರ್.ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡು ಆಕಾಶ, ಪರೀಕ್ಷೆ ಬರೆಯಲು ಮುಂದಾಗಿದ್ದ.
ಅಂತೆಯೇ 25 ಲಕ್ಷ ರೂಪಾಯಿ ಹಣವನ್ನು ಆರ್.ಡಿ.ಪಾಟೀಲ್ ಜೊತೆ ಡೀಲ್ ಮಾಡಿಕೊಂಡಿದ್ದ. ಅಡ್ವಾನ್ಸ್ ಆಗಿ 8 ಲಕ್ಷ ರೂಪಾಯಿ ಹಣವನ್ನು ನೀಡಿದ್ದ. ಆದರೆ ಪರೀಕ್ಷಾ ಕೇಂದ್ರದೊಳಗೆ ಹೋಗುವ ಮುನ್ನವೇ ಆಕಾಶ ಮಂಠಾಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಫಜಲಪುರ ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಪರೀಕ್ಷಾ ಕೇಂದ್ರದಲ್ಲಿ ಅಕ್ರಮಕ್ಕೆ ಯತ್ನಿಸಿದ್ದ. ಆಕಾಶ್ ಮಂಠಾಳೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ