Advertisment

ಉತ್ತರ ಕರ್ನಾಟಕ ಮಂದಿಗೆ ಇದು ಬಾಳ ಚಲೋ ಸುದ್ದಿ.. ಮಿಸ್​ ಮಾಡಬ್ಯಾಡ್ರಿ..!

author-image
Bheemappa
Updated On
ಉತ್ತರ ಕರ್ನಾಟಕ ಮಂದಿಗೆ ಇದು ಬಾಳ ಚಲೋ ಸುದ್ದಿ.. ಮಿಸ್​ ಮಾಡಬ್ಯಾಡ್ರಿ..!
Advertisment
  • ಸಬ್ಸಿಡಿ ದರದಲ್ಲಿ ರೊಟ್ಟಿ ತಯಾರಿಕಾ ಯಂತ್ರಗಳ ವಿತರಣೆ
  • ಈಗಾಗಲೇ ‘ಕಲಬುರಗಿ ರೊಟ್ಟಿ ಬ್ರ್ಯಾಂಡ್’ ಬಿಡುಗಡೆ ಆಗಿದೆ
  • ಜಸ್ಟ್ ನೀವು ಕ್ಯೂ‌ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು!

ಕಲಬುರಗಿ: ಈಗ ಏನಿದ್ದರೂ ಆನ್​ಲೈನ್ ದುನಿಯಾ. ಮನೆಯಲ್ಲೇ ಕುಳಿತು ಆರ್ಡರ್ ಮಾಡಿದರೆ ಸಾಕು ಎಲ್ಲವೂ ಮನೆ ಬಾಗಿಲಿಗೆ ಬರುವ ದಿನಗಳು. ಆನ್​ಲೈನ್​​ನಲ್ಲಿ ಸಿಗದೆ ಇರುವ ತಿನಿಸು, ವಸ್ತುಗಳೆ ಇಲ್ಲ ಎಂದು ಹೇಳಬಹುದು. ಇಷ್ಟು ದಿನನೂ ಕಲಬುರಗಿಯ ಖಡಕ್ ರೊಟ್ಟಿ ಆನ್​ಲೈನ್​ನಲ್ಲಿ ಲಭ್ಯವಿರಲಿಲ್ಲ. ಆದರೆ ಇನ್ಮುಂದೆ ಬಿಳಿ ಜೋಳದ ರೊಟ್ಟಿಗಳು ಕೂಡ ಆನ್​ಲೈನ್​ನಲ್ಲಿ ಲಭ್ಯವಾಗಲಿದೆ.

Advertisment

ವಿಶ್ವದ ದೈತ್ಯ ಆನ್‌ಲೈನ್ ಕಂಪನಿಗಳಾದ ಫ್ಲಿಪ್ ಕಾರ್ಟ್​ ಹಾಗೂ ಅಮೆಜಾನ್​​ನ​ಲ್ಲಿ ಕಲಬುರಗಿ ರೊಟ್ಟಿ ಸೇರ್ಪಡೆಯಾಗಿದೆ. ನವೆಂಬರ್​ 16 ರಿಂದ ಆನ್​ಲೈನ್​ನಲ್ಲಿ ಜೋಳದ ರೊಟ್ಟಿಗಳು ಗ್ರಾಹಕರಿಗೆ ಸಿಗುತ್ತವೆ. ಕೇವಲ ಕರ್ನಾಟಕ ಮಾತ್ರವಲ್ಲ ದೇಶ, ವಿದೇಶಗಳಲ್ಲೂ ಖಡಕ್ ರೊಟ್ಟಿ ಎಲ್ಲರಿಗೂ ಲಭ್ಯವಾಗಲಿವೆ. ಇನ್ನು ಈ ರೊಟ್ಟಿಗಳನ್ನು ಕಲಬುರಗಿಯಲ್ಲೇ ಬೆಳೆಯುವ ಗುಣಮಟ್ಟದ ಮಾಲ್ದಂಡಿ ತಳಿಯ ಬಿಳಿ ಜೋಳದಿಂದ ತಯಾರು ಮಾಡಲಾಗುತ್ತದೆ.

ಇದನ್ನೂ ಓದಿ: WTC ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ.. ರೋಹಿತ್ ಪಡೆಗೆ ಫೈನಲ್ ಮತ್ತಷ್ಟು ಕಷ್ಟ.. ಕಷ್ಟ!

publive-image

ಕಲಬುರಗಿ ಜಿಲ್ಲಾಡಳಿತವೂ ಈಗಾಗಲೇ ಸಬ್ಸಿಡಿ ದರದಲ್ಲಿ 100 ರೊಟ್ಟಿ ತಯಾರಿಕಾ ಯಂತ್ರಗಳನ್ನು ವಿತರಣೆ ಮಾಡಿದೆ. ಮಾರ್ಚ್ 13 ರಂದು ಕಲಬುರಗಿಯಲ್ಲಿ ನಡೆದ ಗೃಹಜ್ಯೋತಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ‘ಕಲಬುರಗಿ ರೊಟ್ಟಿ ಬ್ರ್ಯಾಂಡ್’ ಅನ್ನು ಬಿಡುಗಡೆ ಮಾಡಲಾಗಿತ್ತು. ಇದೇ ಹೆಸರನ್ನೇ ಪ್ಯಾಕಿಂಗ್​ನಲ್ಲಿ ಬಳಸಲಾಗುತ್ತದೆ. ಅದರಂತೆ ಈಗ ಕ್ಯೂ‌ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಗ್ರಾಹಕರು ರೊಟ್ಟಿಗಳನ್ನ ಆರ್ಡರ್ ಮಾಡಬಹುದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment