newsfirstkannada.com

ಕಲಬುರಗಿಯ ಹೆಡ್ ಕಾನ್ಸಟೇಬಲ್ ಹತ್ಯೆ ಪ್ರಕರಣ.. ಹೊಲದಲ್ಲಿ ಅಡಗಿದ್ದ 2ನೇ ಆರೋಪಿ ಅರೆಸ್ಟ್​

Share :

18-06-2023

    ಮರಳು ದಂಧೆ ಗಂಭೀರವಾಗಿ ಪರಿಗಣಿಸಿದ ಪೊಲೀಸರು, 3 ಸಿಬ್ಬಂದಿ ಸಸ್ಪೆಂಡ್

    ಅಕ್ರಮ ಮರಳು ದಂಧೆ ತಡೆಯಲು ಹೋಗಿದ್ದ ಪೊಲೀಸ್​ ಮುಖ್ಯಪೇದೆ ಹತ್ಯೆ

    ಮೂತ್ರ ವಿಸರ್ಜನೆ ನೆಪ, ತಪ್ಪಿಸಿಕೊಳ್ಳಲು ಯತ್ನ, ಫೈರಿಂಗ್​ನಿಂದ ಆರೋಪಿಗೆ ಎಚ್ಚರಿಕೆ

ಕಲಬುರಗಿಯಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಪೊಲೀಸ್ ಹೆಡ್ ಕಾನ್ಸಟೇಬಲ್ ಮಯೂರ್ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿತ್ತು. ಹತ್ಯೆ ಆರೋಪಿ ಒಬ್ಬನನ್ನ ಬಂಧಿಸಿದ್ದ ಪೊಲೀಸರು, ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದರು. ತಲೆಮರೆಸಿಕೊಂಡು ಜಮೀನಿನಲ್ಲಿ ಅಡಗಿದ್ದ ಆರೋಪಿಯನ್ನ ಕೊನೆಗೂ ಪೊಲೀಸರು ಫೈರಿಂಗ್ ಮಾಡಿ ಹೆಡೆಮುರಿ ಕಟ್ಟಿದ್ದಾರೆ.

ಮೂರೇ 3 ದಿನದ ಹಿಂದೆ ಕಲಬುರಗಿ ಅಷ್ಟೇ ಅಲ್ಲ, ಇಡೀ ರಾಜ್ಯವೇ ಅದೊಂದು ಕೃತ್ಯಕ್ಕೆ ಬೆಚ್ಚಿಬಿದ್ದಿತ್ತು. ಜೇವರ್ಗಿಯ ನಾರಾಯಣಪುರ ಹೊರವಲಯದಲ್ಲಿ ಅಕ್ರಮ ಮರಳು ದಂಧೆ ತಡೆಯಲು ಹೋದ ಪೊಲೀಸ್ ಹೆಡ್ ಕಾನ್ಸಟೇಬಲ್ ಮಯೂರ ವೀರಮರಣ ಅಪ್ಪಿದ್ದರು. ದಂಧೆಕೋರರು ಟ್ರಾಕ್ಟರ್ ಹತ್ತಿಸಿ ಭೀಕರ ಹತ್ಯೆಗೈದಿದ್ರು. ಈ ಬೆನ್ನಲ್ಲೆ ಸ್ಯಾಂಡ್​​ ಮಾಫಿಯಾ ಸೈತಾನ್​ಗಳ ಬೇಟೆಗೆ ಪೊಲೀಸ್​ ಪಡೆ ಇಳಿದಿದೆ.

ಹಲ್ಲೆಗೆ ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೆಟು!

ಅಕ್ರಮ ದಂಧೆಕೊರರ ಅಟ್ಟಹಾಸ, ಇಡೀ ರಾಜ್ಯವನ್ನ ಬೆಚ್ಚಿ ಬಿಳಿಸಿತ್ತು. ಕೇಸ್ ದಾಖಲಿಸಿಕೊಂಡ ಪೊಲೀಸರು, ಪಾತಕಿಗಳ ಬಿಲಕೊರೆದು ಹೆಡೆಮುರಿ ಕಟ್ಟಿದ್ದಾರೆ. ಟ್ರಾಕ್ಟರ್ ಚಾಲಕ ಸಿದ್ದಣ್ಣ ಕರಜಗಿಯನ್ನ ಬಂಧಿಸಿ ಈಗಾಗಲೇ ಜೈಲಿಗಟ್ಟಿದ್ದ, ಪೊಲೀಸರು, ಪ್ರಕರಣದ ಪ್ರಮುಖ ಆರೋಪಿ ಟ್ರಾಕ್ಟರ್ ಓನರ್​​ ಸೈಬಣ್ಣನನ್ನ ಖೆಡ್ಡಾ ತೋಡಿದೆ. ಘಟನೆ ನಂತ್ರ ತಲೆ ಮರೆಸಿಕೊಂಡಿದ್ದ ಪಾಪಿಯ ಬಂಧನಕ್ಕೆ 3 ತಂಡಗಳ ರಚನೆ ಆಗಿತ್ತು.

ಹೊಲದಲ್ಲಿ ಅಡಗಿದ್ದ ಸೈಬಣ್ಣನ ಬಗ್ಗೆ ಸಿಕ್ಕಿತ್ತು ಕ್ಲ್ಯೂ!

ಪೊಲೀಸರಿಗೆ ಅದೊಂದು ಮಾಹಿತಿ ಖಚಿತವಾಗಿತ್ತು. ಆರೋಪಿ ಸೈಬಣ್ಣ, ಪಾತಕ ಮೆರೆದು ಪಕ್ಕದ ತಾಲೂಕು ಆಲಮೇಲದ ಹೊಲವೊಂದ್ರಲ್ಲಿ ಅಡಗಿದ್ದ. ಸುದ್ದಿ ತಿಳಿದು ಅಲರ್ಟ್​​ ಆದ ತಂಡ ಸೈಬಣ್ಣನ ಕೈಗೆ ಕೋಳ ತೊಡಿಸಿತ್ತು. ಆದ್ರೆ, ಮಂದೇವಾಲ-ಜೇರಟಗಿ ಮಾರ್ಗ ಮಧ್ಯದಲ್ಲಿ ಮೂತ್ರ ವಿಸರ್ಜನೆ ನೆಪ ಮಾಡಿದ್ದ ಆರೋಪಿ, ಕೆಳಗಿಳಿದಿದ್ದ. ಆದ್ರೆ, ಕೆಳಗಿಳಿದವನೇ ಕ್ಯಾತೆ ತೆಗೆದಿದ್ದ. ಯಡ್ರಾಮಿ ಎಸ್​ಐ ಬಸವರಾಜ ಚಿತ್ತಕೋಟೆ ಮೇಲೆ ಚಾಕುನಿಂದ ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣವೇ ಜೇವರ್ಗಿ ಠಾಣೆ ಎಸ್​​​ಐ ಸಂಗಮೇಶ್ ಅಂಗಡಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಕೊನೆಗೆ ಬಗ್ಗದಿದ್ದಾಗಿ ಸೈಬಣ್ಣನ ಬಲಗಾಲಿಗೆ ಫೈರ್ ಮಾಡಿ ಮಕಾಡೆ ಮಲಗಿಸಿದ್ದಾರೆ.

ಇನ್ನು, ಕೈ ಮತ್ತು ಹೊಟ್ಟೆ ಭಾಗಕ್ಕೆ ಚಾಕು ಇರಿತದಿಂದ ಗಾಯಗೊಂಡ ಪಿಎಸ್​ಐ ಚಿತ್ತಕೋಟೆಗೆ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಗುಂಡೇಟು ತಿಂದ ಖತರ್ನಾಕ್ ಸೈಬಣ್ಣನಿಗೆ ನಗರದ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ನಡೆದ 48 ಗಂಟೆಯಲ್ಲೇ ಆರೋಪಿಗಳಿಬ್ಬರ ಹೆಡೆಮುರಿ ಕಟ್ಟಿರುವ ಕಲಬುರಗಿ ಪೊಲೀಸರು, ಅಕ್ರಮ ದಂಧೆಕೋರರಿಗೆ ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡೋದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಿರಾತಕ ಸೈಬಣ್ಣನ ಮೇಲೆ ಜೇವರ್ಗಿ ಠಾಣೆಯಲ್ಲಿ 2017ರ ವೇಳೆ ರೌಡಿ ಶೀಟರ್​ ಓಪನ್​ ಆಗಿದೆ. ಕೊಲೆ ಯತ್ನ, ದರೋಡೆ ಮತ್ತು ಕೊಲೆ ಪ್ರಕರಣಗಳು ಸೈಬಣ್ಣನ ಮೇಲಿವೆ. ಅಲ್ಲದೆ, ಆರೋಪಿ ಸೈಬಣ್ಣಗೆ ಪೊಲಿಟಿಕಲ್ ಸಪೋರ್ಟ್ ಕೂಡ ಇದೆ ಮಾತು ಕೇಳಿ ಬರ್ತಿದೆ. ಬಿಜೆಪಿ ನಾಯಕರು ಮತ್ತು ಮುಖಂಡರ ಜೊತೆಗಿರುವ ಆರೋಪಿ ಸೈಬಣ್ಣನ ಫೋಟೊಗಳು ವೈರಲ್ ಆಗಿವೆ.

ಕರ್ತವ್ಯಲೋಪದಡಿ ಮೂವರನ್ನ ಸಸ್ಪೆಂಡ್​ ಮಾಡಿದ ಎಸ್​ಪಿ

ಹೆಡ್​ಕಾನ್ಸ್​ಟೇಬಲ್ ಮಯೂರ್ ಹತ್ಯೆ ಪ್ರಕರಣದ ಹಿನ್ನೆಲೆ ಕರ್ತವ್ಯ ಲೋಪದಡಿ ಕೆಲ ಸ್ಥಳೀಯ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗಿದೆ. ಜೇವರ್ಗಿ ಸಿಪಿಐ ಭೀಮನಗೌಡ್, ನೆಲೋಗಿ ಠಾಣೆ ಪಿಎಸ್​ಐ ಗೌತಮ್​ ಮತ್ತು ಪೇದೆ ರಾಜಶೇಖರ್​ನನ್ನ ಎಸ್ಪಿ ಇಶಾ ಪಂತ್ ಸಸ್ಪೆಂಡ್ ಮಾಡಿ ಪನಿಶ್ಮೆಂಟ್ ಕೊಟ್ಟಿದ್ದಾರೆ‌. ಅಕ್ರಮ ಮರಳು ದಂಧೆ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲಬುರಗಿಯ ಹೆಡ್ ಕಾನ್ಸಟೇಬಲ್ ಹತ್ಯೆ ಪ್ರಕರಣ.. ಹೊಲದಲ್ಲಿ ಅಡಗಿದ್ದ 2ನೇ ಆರೋಪಿ ಅರೆಸ್ಟ್​

https://newsfirstlive.com/wp-content/uploads/2023/06/KLB_POLICE_DEATH_CASE.jpg

Load More