newsfirstkannada.com

ಹೆಡ್ ಕಾನ್​ಸ್ಟೆಬಲ್ ಮೇಲೆ ಟ್ರ್ಯಾಕ್ಟರ್​ ಹತ್ತಿಸಿದ್ದ ಆರೋಪಿ ಅರೆಸ್ಟ್​.. ಇನ್ನೊಬ್ಬನಿಗಾಗಿ ಶೋಧ

Share :

16-06-2023

    ಅಕ್ರಮ ಮರಳು ಸಾಗಣೆ ತಡೆಯಲು ಹೋಗಿದ್ದ ಮುಖ್ಯಪೇದೆ

    ಮುಖ್ಯಪೇದೆ ಮೇಲೆ ಟ್ರ್ಯಾಕ್ಟರ್​ ಹತ್ತಿಸಿ ಎಸ್ಕೇಪ್ ಆಗಿದ್ದರು

    ಇಬ್ಬರು ಆರೋಪಿಗಳು ನಾರಾಯಣಪುರ ಗ್ರಾಮದವರು

ಕಲಬುರಗಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಹೆಡ್ ಕಾನ್​ಸ್ಟೆಬಲ್ ಮಯೂರ್ ಚವ್ಹಾಣ್​​ರನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಅರೆಸ್ಟ್​ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಟ್ರ್ಯಾಕ್ಟರ್​ ಚಾಲಕ ಸಿದ್ದಣ್ಣ ಬಂಧಿತ ಆರೋಪಿಯಾಗಿದ್ದಾರೆ. ಇನ್ನೊಬ್ಬ ಆರೋಪಿ ಟ್ರ್ಯಾಕ್ಟರ್​ ಮಾಲೀಕ ಸಾಯಬಣ್ಣನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇವರಿಬ್ಬರು ನಾರಾಯಣಪುರ ಗ್ರಾಮದ ನಿವಾಸಿಗಳೆಂತ ಈಗಾಗಲೇ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಮರಳು ದಂಧೆಕೋರರ ಅಟ್ಟಹಾಸಕ್ಕೆ ಹೆಡ್ ಕಾನ್ಸ್‌ಟೇಬಲ್‌ ಬಲಿ; ಟ್ರ್ಯಾಕ್ಟರ್​ ಹತ್ತಿಸಿ ಎಸ್ಕೇಪ್ ಆದ ದುಷ್ಕರ್ಮಿಗಳು

ಸಿದ್ದಪ್ಪ ಬಸಪ್ಪ ಮರಡಿ ಎನ್ನುವರ ಹೆಸರಿನಲ್ಲಿ ಸ್ಯಾಂಡ್ ಲೀಜ್ ಪಾಯಿಂಟ್ ಇದೆ. ಆದರೆ ಅಫಜಲಪುರ ತಾಲೂಕಿನ ಮಣ್ಣೂರುನಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿತ್ತು. ಹೀಗಾಗಿ ಅದನ್ನ ನಮ್ಮ ಪೊಲೀಸರು ಬಂದ್ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಅಕ್ರಮಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಕಲಬುರಗಿ ಎಸ್​ಪಿ ಇಶಾ ಪಂತ್ ಹೇಳಿದ್ದಾರೆ.
ರಾತ್ರಿ ಸುಮಾರು 11 ಗಂಟೆಗೆ ಪೊಲೀಸ್ ಮಯೂರ್ ಚವ್ಹಾಣ್ ಟ್ರ್ಯಾಕ್ಟರ್​ನಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದವರನ್ನು ತಡೆಯಲು ಮುಂದಾಗಿದ್ದಾರೆ. ಆಗ ಕಿರಾತಕರು ಟ್ರ್ಯಾಕ್ಟರ್ ನಿಲ್ಲಿಸದೆ ಪೊಲೀಸ್​ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಎಸ್ಕೇಪ್ ಆಗಿದ್ದರು. ಪರಿಣಾಮ ಮಯೂರ್ ಚವ್ಹಾಣ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಡ್ ಕಾನ್​ಸ್ಟೆಬಲ್ ಮೇಲೆ ಟ್ರ್ಯಾಕ್ಟರ್​ ಹತ್ತಿಸಿದ್ದ ಆರೋಪಿ ಅರೆಸ್ಟ್​.. ಇನ್ನೊಬ್ಬನಿಗಾಗಿ ಶೋಧ

https://newsfirstlive.com/wp-content/uploads/2023/06/KLB_POLICE_DEATH.jpg

Load More